ಮುಂಬೈ: ಮಹಾರಾಷ್ಟ್ರದ ರಾಜಧಾನಿ ಮುಂಬೈನ ಗೋರೆಗಾಂವ್ನಲ್ಲಿರುವ ಸ್ಟುಡಿಯೋ ಒಂದರಲ್ಲಿ ಇಂದು ಸಂಜೆ ಅಗ್ನಿ ಅವಘಡ ಸಂಭವಿಸಿದೆ. ಘಟನೆ ವೇಳೆ ಪ್ರಾಣಹಾನಿ ಉಂಟಾದ ಬಗ್ಗೆ ವರದಿ ಆಗಿಲ್ಲ.
ಗೋರೆಗಾಂವ್ನ ಇನಾರ್ಬಿಟ್ ಮಾಲ್ ಸಮೀಪ ಈ ಸ್ಟುಡಿಯೋ ಇದೆ. ಬೆಂಕಿಯ ಕೆನ್ನಾಲಿಗೆ ಎಲ್ಲ ಕಡೆಗಳಲ್ಲೂ ಚಾಚಿದ್ದು, 8 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಆಗಮಿಸಿವೆ. ಅಗ್ನಿ ಅವಘಡದ ವೇಳೆ ಸ್ಟುಡಿಯೋ ಮುಚ್ಚಿತ್ತು ಎನ್ನಲಾಗಿದೆ.
ಬೆಂಕಿ ಕಾಣಿಸಿಕೊಂಡ ವೇಳೆ ಸ್ಟುಡಿಯೋ ಮುಚ್ಚಿತ್ತು ಎನ್ನಲಾಗಿದೆ. ಹೀಗಾಗಿ, ಯಾವುದೇ ಸಾವು ನೋವು ಸಂಭವಿಸಿಲ್ಲ. ಸದ್ಯ, ಬೆಂಕಿ ನಂದಿಸುವ ಕೆಲಸ ಪ್ರಗತಿಯಲ್ಲಿದೆ.
#WATCH I Mumbai: A fire has broken out at a studio in Goregaon; 8 fire tenders present at the spot. No injuries reported yet. More details awaited. pic.twitter.com/GJ9pNB0q0x
— ANI (@ANI) February 2, 2021