ಮುಂಬೈನಲ್ಲಿ ಚಲಿಸುತ್ತಿದ್ದ ರೈಲಿನಿಂದ ಮಹಿಳೆಯನ್ನು ತಳ್ಳಿದ್ದ ವ್ಯಕ್ತಿಯ ಬಂಧನ

|

Updated on: Aug 08, 2023 | 9:47 AM

ಮುಂಬೈನ ಜನನಿಬಿಡ ದಾದರ್ ರೈಲು ನಿಲ್ದಾಣದಲ್ಲಿ ಮಹಿಳೆಯನ್ನು ಚಲಿಸುತ್ತಿರುವ ರೈಲಿನಿಂದ ತಳ್ಳಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮುಂಬೈನಲ್ಲಿ ಚಲಿಸುತ್ತಿದ್ದ ರೈಲಿನಿಂದ ಮಹಿಳೆಯನ್ನು ತಳ್ಳಿದ್ದ ವ್ಯಕ್ತಿಯ ಬಂಧನ
ರೈಲು
Follow us on

ಮುಂಬೈನ ಜನನಿಬಿಡ ದಾದರ್ ರೈಲು ನಿಲ್ದಾಣದಲ್ಲಿ ಮಹಿಳೆಯನ್ನು ಚಲಿಸುತ್ತಿರುವ ರೈಲಿನಿಂದ ತಳ್ಳಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆತ ರೈಲಿನಲ್ಲಿ ದರೋಡೆ ಮಾಡುವ ಯೋಜನೆ ರೂಪಿಸಿದ್ದ, ಆದರೆ ಕದ್ದು ಇನ್ನೇನು ಓಡಬೇಕು ಎನ್ನುವಷ್ಟರಲ್ಲಿ ಮಹಿಳೆ ಆತನನ್ನು ತಡೆದಿದ್ದರು, ಆಗ ಆತ ಮಹಿಳೆಯನ್ನು ರೈಲಿನಿಂದ ತಳ್ಳಿ ತಾನು ಪರಾರಿಯಾಗಿದ್ದ.

ಬೆಂಗಳೂರು-ಮುಂಬೈ ಸಿಎಸ್‌ಎಂಟಿ ಉದ್ಯಾನ್ ಎಕ್ಸ್‌ಪ್ರೆಸ್‌ನಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರೈಲು ದಾದರ್‌ನಿಂದ ರಾತ್ರಿ 8.30 ರ ಸುಮಾರಿಗೆ ಹೊರಡುತ್ತಿರುವಾಗ, ಒಬ್ಬ ವ್ಯಕ್ತಿ ಕೆಲವು ಪ್ರಯಾಣಿಕರನ್ನು ಹೊಂದಿದ್ದ ಕಾಯ್ದಿರಿಸದ ಮಹಿಳಾ ಕಂಪಾರ್ಟ್‌ಮೆಂಟ್‌ಗೆ ಬಂದಿದ್ದ. ಆತ ಮಹಿಳೆಗೆ ಕಿರುಕುಳ ನೀಡಿ ನಗದು ಇದ್ದ ನೀಲಿ ಬಣ್ಣದ ಬ್ಯಾಗ್ ಅನ್ನು ಕಸಿದುಕೊಂಡಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮತ್ತಷ್ಟು ಓದಿ: ಕಲಬುರಗಿ-ಬೀದರ್​ ಪ್ಯಾಸೆಂಜರ್ ರೈಲಿನ ಮೇಲೆ ಕಲ್ಲು ತೂರಾಟ; ಓರ್ವ ಮಹಿಳೆಗೆ ಗಾಯ

ಸಂತ್ರಸ್ತೆ ಆತನ ದರೋಡೆ ಯತ್ನವನ್ನು ವಿರೋಧಿಸಿದ್ದರಿಂದ ಆರೋಪಿಯು ಮಹಿಳೆಯನ್ನು ಕಂಪಾರ್ಟ್‌ಮೆಂಟ್‌ನಿಂದ ಹೊರಕ್ಕೆ ತಳ್ಳಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆ ಬಗ್ಗೆ ಹೆಚ್ಚಿನ ವಿಷಯಗಳು ಲಭ್ಯವಾಗಿಲ್ಲ

ಸಂತ್ರಸ್ತೆಯ ಕಡೆಯವರು ದೂರು ದಾಖಲಿಸಿದ್ದಾರೆ ಎಂದು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ತಿಳಿಸಿದ್ದಾರೆ. ಔಪಚಾರಿಕ ಎಫ್‌ಐಆರ್ ದಾಖಲಿಸುವ ಮೊದಲೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು, ಕೊಲೆ ಯತ್ನ ಮತ್ತು ದರೋಡೆ ಮಾಡುವ ಪ್ರಯತ್ನದಲ್ಲಿ ನೋವುಂಟು ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ