Mumbai: ಗಾಳಿಯಿಂದ ಹಾರಿ ಹೋಗಿ ಮರದ ಮೇಲೆ ಬಿದ್ದ ಹಾಸಿಗೆಯ ತೆಗೆಯಲು ಹೋಗಿ ಎರಡನೇ ಮಹಡಿಯಿಂದ ಬಿದ್ದು ವ್ಯಕ್ತಿ ಸಾವು
ವಿಪರೀತ ಗಾಳಿಯಿಂದಾಗಿ ಹಾರಿ ಹೋಗಿ ಮರದ ಮೇಲೆ ಬಿದ್ದ ಹಾಸಿಗೆಯನ್ನು ತೆಗೆಯಲು ಹೋಗಿ ವ್ಯಕ್ತಿಯೊಬ್ಬ ಎರಡನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ
ವಿಪರೀತ ಗಾಳಿಯಿಂದಾಗಿ ಹಾರಿ ಹೋಗಿ ಮರದ ಮೇಲೆ ಬಿದ್ದ ಹಾಸಿಗೆಯನ್ನು ತೆಗೆಯಲು ಹೋಗಿ ವ್ಯಕ್ತಿಯೊಬ್ಬ ಎರಡನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಮುಂಬೈನ ಸಾಂತಾಕ್ರೂಜ್‌ನಲ್ಲಿ ಈ ಘಟನೆ ನಡೆದಿದೆ, ಗಾಳಿ ಇತ್ತು ಈ ಸಂದರ್ಭದಲ್ಲಿ ಒಣಗಿಸಲು ಇರಿಸಿದ್ದ ತೆಳು ಹಾಸಿಗೆಯು ಕೆಳಕ್ಕೆ ಬಿದ್ದಿತ್ತು. ಅದನ್ನು ತೆಗೆಯಲು ಹೋಗಿ ಕಾಲು ಜಾರಿ ಬಿದ್ದು ಅವರು ಮೃತಪಟ್ಟಿದ್ದಾರೆ.
ವಕೋಲಾ ಪೊಲೀಸ್ ಠಾಣೆಯ ಅಧಿಕಾರಿಯ ಪ್ರಕಾರ, ಮೃತರನ್ನು ವಿಜಯ್ ಗುಪ್ತಾ ಎಂದು ಗುರುತಿಸಲಾಗಿದ್ದು, ಅವರು ತಮ್ಮ ಕುಟುಂಬದೊಂದಿಗೆ ಹನುಮಂತ್ ವಿಜಯ್ ಕಟ್ಟಡದಲ್ಲಿ ವಾಸಿಸುತ್ತಿದ್ದರು ಎಂಬುದು ತಿಳಿದುಬಂದಿದೆ.
ಪಕ್ಕದ ಕಟ್ಟಡದ ಮರದಲ್ಲಿ ಹಾಸಿಗೆ ಸಿಲುಕಿಕೊಂಡಿದ್ದನ್ನು ಗಮನಿಸಿದ ಅವರು ಅದನ್ನು ತಮ್ಮ ಕಟ್ಟಡದ ಮೇಲಿಂದ ತೆಗೆಯಲು ಬಿದಿರಿನ ಕೋಲು ತೆಗೆದುಕೊಂಡಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಮತ್ತಷ್ಟು ಓದಿ: Bengaluru News: ಐದನೇ ಮಹಡಿಯಿಂದ ಬಿದ್ದು ಬಿಸಿಎ ವಿದ್ಯಾರ್ಥಿ ಸಾವು
ಆದರೆ, ಗುಪ್ತಾ ಸಮತೋಲನ ಕಳೆದುಕೊಂಡು ಕಟ್ಟಡದಿಂದ ಬಿದ್ದಿದ್ದಾರೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಗಾಳಿ ಬೀಸಿದ್ದರಿಂದ ಹಾಸಿಗೆ ಮರದಲ್ಲಿ ಸಿಲುಕಿಕೊಂಡಿರಬಹುದು. ಹಾಸಿಗೆ ತೆಗೆಯಬೇಡಿ ಎಂದು ಗುಪ್ತಾ ಅವರ ಕುಟುಂಬಸ್ಥರು ಹೇಳಿದರೂ ಅವರು ಕೇಳಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಟ್ಟಡದಿಂದ ಬಿದ್ದು ತಲೆಗೆ ಮಾರಣಾಂತಿಕ ಗಾಯಗಳಾಗಿತ್ತು, ಇದೊಂದು ಅಪಘಾತ ಎಂದು ಪೊಲೀಸರು ತಿಳಿಸಿದ್ದಾರೆ, ಮತ್ತಷ್ಟು ತನಿಖೆ ನಡೆಯುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ