ವಿದ್ಯಾರ್ಥಿನಿಯೊಬ್ಬಳು 14ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಅಂಧೇರಿಯ ಪಶ್ಚಿಮ ಉಪನಗರದ ಎಸ್‌ವಿ ರಸ್ತೆಯಲ್ಲಿರುವ ಮಿಲಿಯನೇರ್ ಹೆರಿಟೇಜ್ ಸೊಸೈಟಿಯಲ್ಲಿ ಈ ದುರಂತ ಘಟನೆ ಸಂಭವಿಸಿದೆ.
ವಿಲೆಪಾರ್ಲೆಯ ಮಿಥಿಬಾಯಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ವಿಧಿ ಪ್ರಮೋದ್ ಕುಮಾರ್ ಸಿಂಗ್ ಅವರು ಕಳೆದ ಕೆಲವು ವರ್ಷಗಳಿಂದ ಪೇಯಿಂಗ್ ಗೆಸ್ಟ್ ಆಗಿ ಕಟ್ಟಡದಲ್ಲಿ ವಾಸವಾಗಿದ್ದು, ಆಕೆಯ ಕುಟುಂಬ ಸದಸ್ಯರು ಥಾಣೆಯಲ್ಲಿ ನೆಲೆಸಿದ್ದಾರೆ.
ಡಿಎನ್ ನಗರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಮಾತನಾಡಿ, ವಿದ್ಯಾರ್ಥಿನಿ ಖಿನ್ನತೆಯಿಂದ ಬಳಲುತ್ತಿದ್ದಳು ಎನ್ನುವ ವಿಚಾರಕ್ಕೆ ಪುಷ್ಟಿ ಎಂಬಂತೆ ಒಂದು ಪುಟದ ಡೆತ್ನೋಟ್ ಪತ್ತೆಯಾಗಿದೆ.
ಮತ್ತಷ್ಟು ಓದಿ: ಚಿಕ್ಕಬಳ್ಳಾಪುರ: ಬೆಂಕಿ ಹಚ್ಚಿಕೊಂಡ ದಂಪತಿ ಆತ್ಮಹತ್ಯೆಗೆ ಯತ್ನ, ಪತ್ನಿ ಸಾವು
ಕಟ್ಟಡದ ಸೆಕ್ಯುರಿಟಿ ಗಾರ್ಡ್ ನೆಲದ ಮೇಲೆ ಆಕೆಯ ದೇಹವನ್ನು ಗಮನಿಸಿದ ಮತ್ತು ತಕ್ಷಣವೇ ಇತರ ನಿವಾಸಿಗಳಿಗೆ ಮಾಹಿತಿ ನೀಡಿದರು, ನಂತರ ಅವರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಆಕೆಯ ಸಾವಿನ ಹಿಂದಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ