ಕೇರಳದಲ್ಲಿ 12 ವರ್ಷದ ಬಾಲಕಿಯನ್ನು ಗರ್ಭಿಣಿ ಮಾಡಿದ ಸಹೋದರ.. ಕೋರ್ಟಿನ ಮೊರೆ ಹೋದ ಪಾಲಕರು

ಮಗಳು ಗರ್ಭಿಣಿಯಾಗಿರುವ ವಿಚಾರ ಗೊತ್ತಿರಲಿಲ್ಲ. ಅವಳಿಗೆ ಇನ್ನೂ 12 ವರ್ಷ. ಈ ವಯಸ್ಸಲ್ಲಿ ಮಗು ಜನಿಸಿದರೆ ದೈಹಿಕವಾಗಿ, ಮಾನಸಿಕವಾಗಿ ಅವಳಿಗೆ ತೀವ್ರ ಘಾಸಿಯಾಗುವ ಸಾಧ್ಯತೆ ಇದೆ. ಹಾಗಾಗಿ ಮಗಳಿಗೆ ಗರ್ಭಪಾತ ಮಾಡಿಸಲು ಅವಕಾಶ ನೀಡಿ ಎಂದು ಪೋಷಕರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ...

ಕೇರಳದಲ್ಲಿ 12 ವರ್ಷದ ಬಾಲಕಿಯನ್ನು ಗರ್ಭಿಣಿ ಮಾಡಿದ ಸಹೋದರ.. ಕೋರ್ಟಿನ ಮೊರೆ ಹೋದ ಪಾಲಕರು
ಕೇರಳದಲ್ಲಿ 12 ವರ್ಷದ ಬಾಲಕಿಯನ್ನು ಗರ್ಭಿಣಿ ಮಾಡಿದ ಸಹೋದರ
Follow us
ಸಾಧು ಶ್ರೀನಾಥ್​
|

Updated on:Jan 04, 2024 | 10:58 AM

ಆ ಇಬ್ಬರು ಮಕ್ಕಳು ಜಗದ ಗೊಡವೆ ಹಚ್ಚಿಕೊಳ್ಳದೆ ತಮ್ಮದೇ ಲೋಕದಲ್ಲಿ ಅಬೋಧರಾಗಿ (Minor) ಸ್ವಚ್ಚಂದವಾಗಿ ಕಾಲಕಳೆಯಬೇಕಾದ ವಯಸ್ಸಿನವರು. ಆದರೆ ಯಾವುದೋ ಘಳಿಗೆಯಲ್ಲಿ ಕ್ಷಣಿಕ ಸುಖಕ್ಕೆ ಬಲಿಯಾಗಿ ಅನಾಹುತ ಮಾಡಿಕೊಂಡಿದ್ದಾರೆ. ಮುಂದೇನು ಎಂದು ಅಪ್ಪ-ಅಮ್ಮನಿಗೆ ತೋಚದಂತಹ ಭೀಕರ ಪರಿಸ್ಥಿತಿ ತಂದಿಟ್ಟಿದ್ದಾರೆ. ಆ ಚಿತ್ರಣ ನೆನಪಿಸಿಕೊಂಡರೆ ಎಂಥವರಿಗೇ ಆಗಲಿ ಎದೆ ಝಲ್ಲೆನ್ನುತ್ತದೆ.

ದಿನೇ ದಿನ ಮಾನವೀಯ ಬಂಧಗಳು ಮೌಲ್ಯ ಕಳೆದುಕೊಂಡು ನಶಿಸುತ್ತಿವೆ. ಅನೈತಿಕ ಸಂಬಂಧಗಳು ಕುಟುಂಬಗಳನ್ನೇ ಛಿದ್ರ ಛಿದ್ರಗೊಳಿಸುತ್ತಿವೆ. ಇತ್ತೀಚೆಗೆ ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಿದ್ದಾಳೆ. ಅದೂ ಸಹ ಸಹೋದರನಿಂದ  ಗರ್ಭಿಣಿಯಾದ (Pregnant) ಕಾರಣಕ್ಕೆ ಆಕೆಯ ತಂದೆ-ತಾಯಿ (Parents) ತಮ್ಮ ಮಗಳ ಗರ್ಭಧಾರಣೆಯನ್ನು ರದ್ದುಗೊಳಿಸುವಂತೆ (Abortion) ಅವರು ಹೈಕೋರ್ಟ್‌ನ ಮೊರೆ ಹೋಗಿದ್ದಾರೆ.

ಈ ಅನೈತಿಕ ಘಟನೆ ನಡೆದಿರುವುದು ಕೇರಳದಲ್ಲಿ. ಅಪ್ರಾಪ್ತ ವಯಸ್ಸಿನ ಸಹೋದರನಿಂದ (minor brother) ಗರ್ಭಿಣಿಯಾದ  (Incestual Relationship) 12 ವರ್ಷದ ಬಾಲಕಿಯ ಪೋಷಕರು ಕೇರಳ ಹೈಕೋರ್ಟ್‌ನ ಮೊರೆ ಹೋಗಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಗರ್ಭಪಾತ ಮಾಡಿಸುವಂತೆ (Terminate 34 Weeks Pregnancy) ಬಾಲಕಿಯ ಪೋಷಕರು ಕೋರ್ಟ್​​​ಗೆ ಮನವಿ ಮಾಡಿಕೊಂಡಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ವೈದ್ಯರ ವರದಿಗಳನ್ನು ಪರಿಶೀಲಿಸಿ, ಪರಿಗಣಿಸಿದ್ದಾರೆ. ಬಾಲಕಿ 34 ವಾರಗಳ ಗರ್ಭಿಣಿಯಾಗಿದ್ದು, ಸಂಪೂರ್ಣ ಬೆಳವಣಿಗೆ ಹೊಂದಿರುವ ಭ್ರೂಣ ರೂಪ ಪಡೆಯುತ್ತಿದೆ (Foetus Fully Developed) ಎಂದು ವೈದ್ಯಕೀಯ ವರದಿ ಹೇಳಿದೆ. ಹಾಗಾಗಿ ಈ ಸಮಯದಲ್ಲಿ ಗರ್ಭಪಾತ ಮಾಡುವುದು ಕಷ್ಟ  ಎಂದು ಬಾಲಕಿಯ ಪೋಷಕರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಇದನ್ನೂ ಓದಿ: ಮದುವೆಗೂ ಮುನ್ನ ಬೇರೊಬ್ಬನಿಂದ ಗರ್ಭ ಧರಿಸಿದ ಹೆಂಡತಿ, ಡಿವೋರ್ಸ್ ಕೋರಿದ ಗಂಡನ ಮೇಲೆ ಮಾರಣಾಂತಿಕ ಹಲ್ಲೆ

ಈ ಹಂತದಲ್ಲಿ ಗರ್ಭಪಾತ ಅಸಾಧ್ಯ ಎಂದು ಹೇಳಿರುವ ರಾಜ್ಯ ಹೈಕೋರ್ಟ್, ಸಿಸೇರಿಯನ್ ಅಥವಾ ಸಾಮಾನ್ಯ ಹೆರಿಗೆ ಮೂಲಕ ಮಗು ಜನಿಸಲು ಅವಕಾಶ ನೀಡಬೇಕು ಎಂದು ಸೂಚಿಸಿದೆ. ಹೆರಿಗೆಗೆ ಸಂಬಂಧಿಸಿದ ಅಂತಿಮ ನಿರ್ಧಾರವನ್ನು ವೈದ್ಯಕೀಯ ತಜ್ಞರಿಗೆ ಬಿಡಲಾಗಿದೆ ಎಂದೂ ಹೈಕೋರ್ಟ್ ಹೇಳಿದೆ. ಮಗು ಜನಿಸಿದ ನಂತರ, ಮಗುವಿಗೆ ರಕ್ಷಣೆ ನೀಡಲು ನ್ಯಾಯಾಲಯ ನಿರ್ಧರಿಸಿದೆ.

ಮಗಳು ಗರ್ಭಿಣಿಯಾಗಿರುವ ವಿಚಾರ ತಮಗೆ ಗೊತ್ತಿರಲಿಲ್ಲ ಎಂದು ಬಾಲಕಿಯ ಪೋಷಕರು ನ್ಯಾಯಾಲಯದಲ್ಲಿ ಹೇಳಿದ್ದು, ಇತ್ತೀಚೆಗಷ್ಟೇ ಅದು ತಿಳಿದುಬಂದಿದ್ದಾಗಿ ತಿಳಿಸಿದ್ದಾರೆ. ಮಗಳಿಗೆ ಕೇವಲ 12 ವರ್ಷ. ಹಾಗಾಗಿ ಈ ವಯಸ್ಸಿನಲ್ಲಿ ಮಗು ಜನಿಸಿದರೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಅವಳಿಗೆ ತೀವ್ರ ಘಾಸಿಯಾಗುವ (physiological and psychological difficulties) ಸಾಧ್ಯತೆ ಇದೆ. ಹಾಗಾಗಿ ಮಗಳಿಗೆ ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಪೋಷಕರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ ಪೋಷಕರ ವಾದವನ್ನು ನ್ಯಾಯಾಲಯ ತಳ್ಳಿ ಹಾಕಿದೆ. ಇನ್ನು 15 ದಿನದಲ್ಲಿ ಹೆರಿಗೆಯಾಗುವ ಸಾಧ್ಯತೆ ಇದೆ. ಈಗ ಗರ್ಭಪಾತ ಮಾಡಿಸಿದರೆ ತಾಯಿಯ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಗರ್ಭಪಾತ ಮಾಡುವಂತಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.

ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರು ಗರ್ಭಿಣಿ ಅಪ್ರಾಪ್ತ ಬಾಲಕಿಯನ್ನು ಆಕೆಯ ಸಹೋದರನಿಂದ ದೂರವಿಡಬೇಕು ಮತ್ತು ಬಾಲಕಿಯನ್ನು ಆಕೆಯ ಪೋಷಕರ ಆರೈಕೆಯಲ್ಲಿ ಇಡಬೇಕು ಎಂದು ಆದೇಶಿಸಿದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:40 am, Thu, 4 January 24

ಮಕ್ಕಳ ಮೇಲೆ ಗ್ರಹಗಳ ಪ್ರಭಾವ ಹೇಗಿರುತ್ತೆ ? ವಿಡಿಯೋ ನೋಡಿ
ಮಕ್ಕಳ ಮೇಲೆ ಗ್ರಹಗಳ ಪ್ರಭಾವ ಹೇಗಿರುತ್ತೆ ? ವಿಡಿಯೋ ನೋಡಿ
Daily Horoscope: ಈ ರಾಶಿಯವರಿಗೆ ಇಂದು ಹೆಚ್ಚಿನ ಧನ ಪ್ರಾಪ್ತಿಯಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಹೆಚ್ಚಿನ ಧನ ಪ್ರಾಪ್ತಿಯಾಗಲಿದೆ
ದರ್ಶನ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಪೊಲೀಸರ ಬಿಗಿ ಭದ್ರತೆ
ದರ್ಶನ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಪೊಲೀಸರ ಬಿಗಿ ಭದ್ರತೆ
ಆಸ್ಪತ್ರೆಯೊಳಗೆ ಜೋರಾಗಿ ಹಾಡು ಹಾಕಿ ನರ್ಸ್​ಗಳ ಡ್ಯಾನ್ಸ್
ಆಸ್ಪತ್ರೆಯೊಳಗೆ ಜೋರಾಗಿ ಹಾಡು ಹಾಕಿ ನರ್ಸ್​ಗಳ ಡ್ಯಾನ್ಸ್
ಗುಲ್ಮಾರ್ಗ್​ನಲ್ಲಿ ತಾಜಾ ಹಿಮಪಾತ; ಕುಣಿದು ಕುಪ್ಪಳಿಸಿದ ಪ್ರವಾಸಿಗರು
ಗುಲ್ಮಾರ್ಗ್​ನಲ್ಲಿ ತಾಜಾ ಹಿಮಪಾತ; ಕುಣಿದು ಕುಪ್ಪಳಿಸಿದ ಪ್ರವಾಸಿಗರು
ದತ್ತಜಯಂತಿ: ಶೋಭಾಯಾತ್ರೆಯ ಮನಮೋಹಕ ದೃಶ್ಯ ಡ್ರೋನ್​ನಲ್ಲಿ ಕಂಡಿದ್ದು ಹೀಗೆ
ದತ್ತಜಯಂತಿ: ಶೋಭಾಯಾತ್ರೆಯ ಮನಮೋಹಕ ದೃಶ್ಯ ಡ್ರೋನ್​ನಲ್ಲಿ ಕಂಡಿದ್ದು ಹೀಗೆ
ಬಿಜೆಪಿ ಅಧಿಕಾರದಲ್ಲಿದ್ದಾಗ ಯತ್ನಾಳ್ ಯಾಕೆ ವಕ್ಫ್ ವಿಷಯ ಮಾತಾಡಲಿಲ್ಲ: ಸಚಿವ
ಬಿಜೆಪಿ ಅಧಿಕಾರದಲ್ಲಿದ್ದಾಗ ಯತ್ನಾಳ್ ಯಾಕೆ ವಕ್ಫ್ ವಿಷಯ ಮಾತಾಡಲಿಲ್ಲ: ಸಚಿವ
ದರ್ಶನ್ ನಂಬಿಕೊಂಡು ಹಲವು ಕುಟುಂಬಗಳು ಇವೆ: ತರುಣ್ ಸುಧೀರ್​
ದರ್ಶನ್ ನಂಬಿಕೊಂಡು ಹಲವು ಕುಟುಂಬಗಳು ಇವೆ: ತರುಣ್ ಸುಧೀರ್​
ಧಾರವಾಡ ಸಭೆಯಲ್ಲಿ ಭಾಗಿಯಾಗಿದ್ದ ಬೆಲ್ಲದ್ ಸತ್ಯ ಸಭೆಗೆ ತಿಳಿಸಲಿ: ಜಮೀರ್
ಧಾರವಾಡ ಸಭೆಯಲ್ಲಿ ಭಾಗಿಯಾಗಿದ್ದ ಬೆಲ್ಲದ್ ಸತ್ಯ ಸಭೆಗೆ ತಿಳಿಸಲಿ: ಜಮೀರ್
ದರ್ಶನ್​ಗೆ ಜಾಮೀನು: ತೂಗುದೀಪ ನಿಲಯದ ಬಳಿ ಅಭಿಮಾನಿಗಳ ಸಂಭ್ರಮ
ದರ್ಶನ್​ಗೆ ಜಾಮೀನು: ತೂಗುದೀಪ ನಿಲಯದ ಬಳಿ ಅಭಿಮಾನಿಗಳ ಸಂಭ್ರಮ