ರಾಮನ ಭಜನೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಮನ ಗೆದ್ದ ಗಾಯಕಿ ಸ್ವಾತಿ ಮಿಶ್ರಾ
ಸ್ವಾತಿ ಮಿಶ್ರಾ ಅವರು ಬಹುಮುಖ ಪ್ರತಿಭೆ ಎನಿಸಿಕೊಂಡಿದ್ದಾರೆ. ಹಾಡುವುದರ ಜೊತೆಗೆ ಸಾಹಿತ್ಯವನ್ನೂ ಅವರು ರಚಿಸುತ್ತಾರೆ. ಅನೇಕ ಭಕ್ತಿ ಗೀತೆಗಳನ್ನು ಅವರು ಬರೆದಿದ್ದಾರೆ. ‘ರಾಮ್ ಆಯೆಂಗೆ..’ ಭಜನೆಯು ಯೂಟ್ಯೂಬ್ನಲ್ಲಿ 4.4 ಕೋಟಿಗಿಂತಲೂ ಹೆಚ್ಚು ಬಾರಿ ವೀಕ್ಷಣೆ ಕಂಡಿದೆ. ಇದನ್ನು ನೋಡಿ ನರೇಂದ್ರ ಮೋದಿ ಮೆಚ್ಚುಗೆ ಸೂಚಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ (Ram Mandir) ಉದ್ಘಾಟನೆಗೆ ದಿನಗಣನೆ ಆರಂಭ ಆಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಕೋಟ್ಯಂತರ ಮಂದಿ ಕಾದಿದ್ದಾರೆ. ಈ ಸಂದರ್ಭದಲ್ಲಿ ಗಾಯಕಿ ಸ್ವಾತಿ ಮಿಶ್ರಾ (Swati Mishra) ಅವರು ಹಾಡಿರುವ ರಾಮನ ಭಜನೆ ವೈರಲ್ ಆಗಿದೆ. ‘ರಾಮ್ ಆಯೆಂಗೆ..’ ಎಂಬ ಈ ಭಜನೆಯನ್ನು ಕೇಳಿ ಪ್ರಧಾನಿ ನರೇಂದ್ರ ಮೋದಿ (Narendra Modi) ಕೂಡ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಟ್ವಿಟರ್ನಲ್ಲಿ ಪೋಸ್ಟ್ ಮಾಡಿರುವ ಅವರು, ‘ರಾಮ್ ಲಲ್ಲಾನ ಸ್ವಾಗತದ ಸಮಯದಲ್ಲಿ ಸ್ವಾತಿ ಮಿಶ್ರಾ ಅವರ ಈ ಭಜನೆ ಮಂತ್ರಮುಗ್ಧಗೊಳಿಸುವ ರೀತಿಯಲ್ಲಿ ಇದೆ’ ಎಂದು ಬರೆದುಕೊಂಡಿದ್ದಾರೆ.
ಸುಮಧುರ ಕಂಠ ಹೊಂದಿರುವ ಸ್ವಾತಿ ಮಿಶ್ರಾ ಅವರು ಮುಂಬೈನವರು. ತಮ್ಮ ಹಾಡುಗಳ ಮೂಲಕ ಅವರು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನೆಲ್ ಹೊಂದಿರುವ ಅವರು ಅನೇಕ ಹಾಡುಗಳನ್ನು ರಿಲೀಸ್ ಮಾಡಿದ್ದಾರೆ. ಹಲವು ಸಂಗೀತ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಸ್ವಾತಿ ಮಿಶ್ರಾ ಆ್ಯಕ್ಟೀವ್ ಆಗಿದ್ದಾರೆ.
श्री राम लला के स्वागत में स्वाति मिश्रा जी का भक्ति से भरा यह भजन मंत्रमुग्ध करने वाला है…#ShriRamBhajanhttps://t.co/g2u1RhPpqO
— Narendra Modi (@narendramodi) January 3, 2024
ಸ್ವಾತಿ ಮಿಶ್ರಾ ಅವರು ಬಹುಮುಖ ಪ್ರತಿಭೆ ಎನಿಸಿಕೊಂಡಿದ್ದಾರೆ. ಹಾಡುವುದರ ಜೊತೆಗೆ ಸಾಹಿತ್ಯವನ್ನೂ ಅವರು ರಚಿಸುತ್ತಾರೆ. ಅನೇಕ ಭಕ್ತಿ ಗೀತೆಗಳನ್ನು ಅವರು ಬರೆದಿದ್ದಾರೆ. ಇತ್ತೀಚೆಗೆ ಅವರು ಬಿಡುಗಡೆ ಮಾಡಿದ ‘ಜನಮ್ ಭೂಮಿ ಕೆ ಲಾಲ್ ರಾಮ್ ಆಯೆ ಹೈ..’ ಹಾಡು ಕೂಡ ಫೇಮಸ್ ಆಗಿದೆ. ‘ರಾಮ್ ಆಯೆಂಗೆ..’ ಭಜನೆಯು ಯೂಟ್ಯೂಬ್ನಲ್ಲಿ 44 ಮಿಲಿಯನ್ಗಿಂತಲೂ ಹೆಚ್ಚು ಬಾರಿ ವೀಕ್ಷಣೆ ಕಂಡಿದೆ.
ಅನೇಕ ಕವರ್ ಸಾಂಗ್ಗಳಿಗೆ ಸ್ವಾತಿ ಮಿಶ್ರಾ ಧ್ವನಿ ನೀಡಿದ್ದಾರೆ. ‘ರಾಮ್ ಆಯೆಂಗೆ..’ ಭಜನೆಯನ್ನು ಅವರು 2023ರ ಅಕ್ಟೋಬರ್ನಲ್ಲಿ ರಿಲೀಸ್ ಮಾಡಿದ್ದರು. ಈಗ ಇದರ ಬಗ್ಗೆ ನರೇಂದ್ರ ಮೋದಿ ಟ್ವೀಟ್ ಮಾಡಿದ ಬಳಿಕ ವೀಕ್ಷಣೆ ಹೆಚ್ಚಾಗಿದೆ. ಸ್ವಾತಿ ಮಿಶ್ರ ಅವರ ಜನಪ್ರಿಯತೆ ಕೂಡ ದುಪ್ಪಟ್ಟಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ಸ್ವಾತಿ ಮಿಶ್ರಾ ಅವರನ್ನು ಏಳೂವರೆ ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:36 am, Thu, 4 January 24