ಇಡೀ ಮುಂಬೈ ಮಹಾನಗರದಲ್ಲಿ ವಿದ್ಯುತ್ ಸಂಪೂರ್ಣ ಸ್ಥಗಿತ

|

Updated on: Oct 12, 2020 | 1:13 PM

ಮುಂಬೈ: ವಾಣಿಜ್ಯನಗರಿ ಮುಂಬೈ ಮಹಾನಗರದಲ್ಲಿ ವಿದ್ಯುತ್ ಸ್ಥಗಿತಗೊಂಡಿದೆ. ಇಡೀ ನಗರಕ್ಕೆ ವಿದ್ಯುತ್ ಸರಬರಾಜು ಮಾಡುವ ಗ್ರಿಡ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕರೆಂಟ್ ಕೈಕೊಟ್ಟಿದೆ. ಬೆಳಿಗ್ಗೆ 10 ಗಂಟೆಯಿಂದ ದಿಢೀರನೆ ಈ ಅವಾಂತರ.. ಮುಂಬೈ ಮಹಾನಗರಾದ್ಯಂತ ವಿದ್ಯುತ್ ಸಂಪೂರ್ಣ ಸ್ಥಗಿತಗೊಂಡಿರುವ ಕಾರಣ ನಗರ ಸಂಚಾರದ ಜೀವನಾಡಿಯಾಗಿರುವ ಉಪನಗರ ರೈಲು ಸೇವೆ ನಿಂತುಹೋಗಿದೆ. ಸಬ್ ಆರ್ಬನ್ ರೈಲು ಅವಲಂಬಿಸಿದ್ದ ಪ್ರಯಾಣಿಕರು ಪರದಾಡುವಂತಾಗಿದೆ. ಆದರೆ, ಪವರ್ ಕಟ್ ನಿಂದ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಗೆ ತೊಂದರೆಯುಂಟಾಗಿಲ್ಲ.

ಇಡೀ ಮುಂಬೈ ಮಹಾನಗರದಲ್ಲಿ ವಿದ್ಯುತ್ ಸಂಪೂರ್ಣ ಸ್ಥಗಿತ
Follow us on

ಮುಂಬೈ: ವಾಣಿಜ್ಯನಗರಿ ಮುಂಬೈ ಮಹಾನಗರದಲ್ಲಿ ವಿದ್ಯುತ್ ಸ್ಥಗಿತಗೊಂಡಿದೆ. ಇಡೀ ನಗರಕ್ಕೆ ವಿದ್ಯುತ್ ಸರಬರಾಜು ಮಾಡುವ ಗ್ರಿಡ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕರೆಂಟ್ ಕೈಕೊಟ್ಟಿದೆ.

ಬೆಳಿಗ್ಗೆ 10 ಗಂಟೆಯಿಂದ ದಿಢೀರನೆ ಈ ಅವಾಂತರ..
ಮುಂಬೈ ಮಹಾನಗರಾದ್ಯಂತ ವಿದ್ಯುತ್ ಸಂಪೂರ್ಣ ಸ್ಥಗಿತಗೊಂಡಿರುವ ಕಾರಣ ನಗರ ಸಂಚಾರದ ಜೀವನಾಡಿಯಾಗಿರುವ ಉಪನಗರ ರೈಲು ಸೇವೆ ನಿಂತುಹೋಗಿದೆ. ಸಬ್ ಆರ್ಬನ್ ರೈಲು ಅವಲಂಬಿಸಿದ್ದ ಪ್ರಯಾಣಿಕರು ಪರದಾಡುವಂತಾಗಿದೆ. ಆದರೆ, ಪವರ್ ಕಟ್ ನಿಂದ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಗೆ ತೊಂದರೆಯುಂಟಾಗಿಲ್ಲ.

Published On - 11:11 am, Mon, 12 October 20