AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಡಿ ನಿಯಂತ್ರಣ ರೇಖೆ ಬಳಿ 60 ಸಾವಿರ ಸೈನಿಕರನ್ನು ನೇಮಿಸಿದ ಚೀನಾ

ದೆಹಲಿ: ಭಾರತ ಚೀನಾ ನಡುವೆ ಸಂಘರ್ಷ ಯುದ್ಧ ಭೀತಿ ಸೃಷ್ಟಿಸುತ್ತಿದೆ. ಹೀಗಾಗಿ ಎರಡು ದೇಶಗಳು ಸೈಲೆಂಟಾಗಿ ತಾಲೀಮನ್ನ ಆರಂಭಿಸಿದ್ದು, ಚೀನಾ 60 ಸಾವಿರ ಸೈನಿಕರನ್ನು ಗಡಿಗೆ ಕಳುಹಿಸಿದೆ. ‘ಎಲ್‌ಎಸಿ’ಯಿಂದ ಕಾಲ್ಕೀಳಲು ಚೀನಾ ಸೈನಿಕರು ಮೀನಮೇಷ ಎಣಿಸುತ್ತಿದ್ದಾರೆ. ಈ ಹೊತ್ತಲ್ಲೇ ಭಾರತ ದಿಟ್ಟ ನಿರ್ಧಾರ ಕೈಗೊಂಡಿದೆ. ಭಾರತ ಚೀನಾ ಗಡಿ ವಿವಾದ ಸದ್ಯಕ್ಕೆ ಬಗೆಹರಿಯುವಂತೆ ಕಾಣುತ್ತಿಲ್ಲ. ವಾಸ್ತವಿಕ ಗಡಿ ನಿಯಂತ್ರಣ ರೇಖೆ ಬಳಿ ಸುಮಾರು 60 ಸಾವಿರ ಸೈನಿಕರನ್ನು ಚೀನಾ ನೇಮಿಸಿದೆ ಅಂತಾ ಅಮೆರಿಕ ಭಾರತಕ್ಕೆ ಎಚ್ಚರಿಕೆ ನೀಡಿದೆ. […]

ಗಡಿ ನಿಯಂತ್ರಣ ರೇಖೆ ಬಳಿ 60 ಸಾವಿರ ಸೈನಿಕರನ್ನು ನೇಮಿಸಿದ ಚೀನಾ
ಆಯೇಷಾ ಬಾನು
ಆಯೇಷಾ ಬಾನು|

Updated on: Oct 12, 2020 | 7:30 AM

Share

ದೆಹಲಿ: ಭಾರತ ಚೀನಾ ನಡುವೆ ಸಂಘರ್ಷ ಯುದ್ಧ ಭೀತಿ ಸೃಷ್ಟಿಸುತ್ತಿದೆ. ಹೀಗಾಗಿ ಎರಡು ದೇಶಗಳು ಸೈಲೆಂಟಾಗಿ ತಾಲೀಮನ್ನ ಆರಂಭಿಸಿದ್ದು, ಚೀನಾ 60 ಸಾವಿರ ಸೈನಿಕರನ್ನು ಗಡಿಗೆ ಕಳುಹಿಸಿದೆ. ‘ಎಲ್‌ಎಸಿ’ಯಿಂದ ಕಾಲ್ಕೀಳಲು ಚೀನಾ ಸೈನಿಕರು ಮೀನಮೇಷ ಎಣಿಸುತ್ತಿದ್ದಾರೆ. ಈ ಹೊತ್ತಲ್ಲೇ ಭಾರತ ದಿಟ್ಟ ನಿರ್ಧಾರ ಕೈಗೊಂಡಿದೆ.

ಭಾರತ ಚೀನಾ ಗಡಿ ವಿವಾದ ಸದ್ಯಕ್ಕೆ ಬಗೆಹರಿಯುವಂತೆ ಕಾಣುತ್ತಿಲ್ಲ. ವಾಸ್ತವಿಕ ಗಡಿ ನಿಯಂತ್ರಣ ರೇಖೆ ಬಳಿ ಸುಮಾರು 60 ಸಾವಿರ ಸೈನಿಕರನ್ನು ಚೀನಾ ನೇಮಿಸಿದೆ ಅಂತಾ ಅಮೆರಿಕ ಭಾರತಕ್ಕೆ ಎಚ್ಚರಿಕೆ ನೀಡಿದೆ. ಚಳಿಗಾಲದ ಸಂಘರ್ಷಕ್ಕೆ ಚೀನಾ ರೆಡಿಯಾಗ್ತಿದ್ದು, ಶಸ್ತ್ರಾಸ್ತ್ರಗಳನ್ನು ಗಡಿಗೆ ಸಾಗಿಸ್ತಿದೆ. ಎಷ್ಟು ಬಾರಿ ಭಾರತ ಹಾಗೂ ಚೀನಾ ನಡುವೆ ಮಾತುಕತೆ ನಡೆದರೂ ಯಾವುದೂ ಫಲ ನೀಡಿಲ್ಲ. ಚೀನಾ ಭಾರತಕ್ಕೆ ಕೊಟ್ಟ ವಾಗ್ದಾನ ಪದೇಪದೆ ಮುರಿಯುತ್ತಿದೆ. ಅಲ್ದೆ, ಗಡಿಯಲ್ಲಿ ಸೈನ್ಯ ಹೆಚ್ಚಿಸಿ ಭಾರತವನ್ನ ಕೆಣಕುತ್ತಿದೆ‌. ಇತ್ತ ಭಾರತ ಕಳೆದ 35ದಿನಗಳಲ್ಲಿ 10 ಕ್ಷಿಪಣಿಗಳ ಪ್ರಯೋಗ ನಡೆಸುವ ಮೂಲಕ ಡ್ರ್ಯಾಗನ್ ನಾಡಿಗೆ ವಾರ್ನಿಂಗ್ ರವಾನಿಸಿದೆ.

ಕೊಬ್ಬಿದ ಚೀನಾ ಪಡೆಗೆ ವಾರ್ನಿಂಗ್ ಕೊಟ್ಟ ಭಾರತ! ಚೀನಾ ಕುತಂತ್ರಕ್ಕೆ ತಕ್ಕ ತಿರುಗೇಟು ನೀಡಲು ಭಾರತ ಭರ್ಜರಿ ತಯಾರಿ ನಡೆಸಿದೆ. ಭಾರತೀಯ ವಾಯುಪಡೆ ಕ್ಷಿಪಣಿಗಳ ಸುಂಟರಗಾಳಿ ಎಬ್ಬಿಸಿದೆ. ಗಡಿ ಬಿಕ್ಕಟ್ಟಿನ ನಡುವೆ ಭಾರತ ಕಳೆದ 35 ದಿನಗಳಲ್ಲಿ 10 ಕ್ಷಿಪಣಿಗಳನ್ನ ಯಶಸ್ವಿಯಾಗಿ ಪರೀಕ್ಷಿಸಿ ಕೊಬ್ಬಿದ ಚೀನಾಗೆ ಸ್ಪಷ್ಟ ಸಂದೇಶ ರವಾನಿಸಿದೆ. ಹಾಗಾದ್ರೆ ಕಳೆದ 10 ದಿನದಲ್ಲಿ ಭಾರತ ಪರೀಕ್ಷೆ ನಡೆಸಿರುವ ಆ ಪ್ರಮುಖ ಕ್ಷಿಪಣಿಗಳು ಯಾವುವು ಅನ್ನೋದಾದ್ರೆ.

ಕುತಂತ್ರಿ ಚೀನಾಗೆ ವಾರ್ನಿಂಗ್! ಸೆಪ್ಟೆಂಬರ್ 7ರಂದು ಭಾರತ ‘ಹೈಪರ್ ಸಾನಿಕ್ ಟೆಕ್ನಾಲಜಿ ಡೆಮಾನ್ ವೆಹಿಕಲ್’ ಪರೀಕ್ಷೆ ನಡೆಸಿತ್ತು. ಇದಾದ ಬಳಿಕ, ಅಂದರೆ ಸೆಪ್ಟೆಂಬರ್ 22ರಂದು ಲೇಸರ್ ಆಧಾರಿತ ಟ್ಯಾಂಕ್ ನಿಗ್ರಹ ಕ್ಷಿಪಣಿ ಪರೀಕ್ಷೆ ನಡೆಸಲಾಗಿದೆ. ಸೆಪ್ಟೆಂಬರ್ 22ರಂದು ಅಭ್ಯಾಸ್ ಹೈ ಸ್ಪೀಡ್ ಹಾಗೂ 23ರಂದು ಪೃಥ್ವಿ 2 ಕ್ಷಿಪಣಿಗಳ ಪ್ರಯೋಗ ಮಾಡಲಾಗಿದೆ. ಈ ಮಧ್ಯೆ ಸೆಪ್ಟೆಂಬರ್ 30ರಂದು ‘ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್’ ಟೆಸ್ಟಿಂಗ್ ಕೂಡ ನಡೆದಿದೆ. ಅಕ್ಟೋಬರ್ 3ರಂದು ‘ಸೂಪರ್ ಸಾನಿಕ್ ಶೌರ್ಯ’ ವ್ಯೂಹಾತ್ಮಕ ಪರೀಕ್ಷೆ ಮಾಡಿದ್ದು, ಅಕ್ಟೋಬರ್ 5ರಂದು ಜಲಾಂತರ್ಗಾಮಿ ನಾಶ ಮಾಡಬಲ್ಲ ಕ್ಷಿಪಣಿಯ ಪರೀಕ್ಷೆಯನ್ನ ಯಶಸ್ವಿಯಾಗಿ ನಡೆಸಲಾಗಿದೆ.

ಇದಿಷ್ಟೇ ಅಲ್ಲ, ಡಿಆರ್‌ಡಿಒ ನಿರ್ಮಿತ ನಿರ್ಭಯ್‌ ಸೂಪರ್‌ ಸಾನಿಕ್‌ ಕ್ಷಿಪಣಿ ಪರೀಕ್ಷೆಗೂ ಮುಹೂರ್ತ ನಿಗದಿ ಮಾಡಿದೆ. ಮುಂದಿನ ವಾರ ನಿರ್ಭಯ್ ಕ್ಷಿಪಣಿ ಪ್ರಯೋಗ ನಡೆಯಲಿದೆ. ಇದು ಈ ಕ್ಷಿಪಣಿಯ 7ನೇ ಮತ್ತು ಅಂತಿಮ ಪರೀಕ್ಷೆಯಾಗಿದೆ. ಒಟ್ನಲ್ಲಿ, ಭಾರತಕ್ಕೆ ಮಗ್ಗುಲ ಮುಳ್ಳಾಗಿರುವ ಚೀನಾಗೆ ತಕ್ಕ ಪಾಠ ಕಲಿಸಲು ಭಾರತೀಯ ಪಡೆಗಳು ತುದಿಗಾಲಲ್ಲಿ ನಿಂತಿದ್ದು, ಅಕಸ್ಮಾತ್ ಯುದ್ಧ ನಡೆದರೆ ಚೀನಾ ಬಾಲ ಮುದುರಿಕೊಂಡು ಎಸ್ಕೇಪ್ ಆಗೋದು ಗ್ಯಾರಂಟಿ.

Follow Us
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು