ನಡುರಸ್ತೆಯಲ್ಲಿ ಮಹಿಳಾ ಅಧಿಕಾರಿಯ ಕೂದಲು ಹಿಡಿದು ಜಗ್ಗಿ, ಥಳಿಸಿದ ಮಹಿಳೆ; ‘ನನ್ನನ್ನು ಮುಟ್ಟಲು ನೀನ್ಯಾರು’ ಎಂಬ ಆವಾಜ್​ ಬೇರೆ !

ಮಹಿಳೆ ಮೊದಲು ಆಟೋದಲ್ಲಿ ಕುಳಿತೇ ಆ ಮಹಿಳಾ ಅಧಿಕಾರಿಗೆ ಹೊಡೆದರು. ಕಾಲಿನಿಂದ ಒದ್ದರು, ನಂತರ ವಾಹನದಿಂದ ಕೆಳಗಿಳಿದು, ಅಧಿಕಾರಿಯ ತಲೆಕೂದಲನ್ನು ಹಿಡಿದು ಎಳೆದಿದ್ದಾರೆ.

ನಡುರಸ್ತೆಯಲ್ಲಿ ಮಹಿಳಾ ಅಧಿಕಾರಿಯ ಕೂದಲು ಹಿಡಿದು ಜಗ್ಗಿ, ಥಳಿಸಿದ ಮಹಿಳೆ; ‘ನನ್ನನ್ನು ಮುಟ್ಟಲು ನೀನ್ಯಾರು’ ಎಂಬ ಆವಾಜ್​ ಬೇರೆ !
ನಡುಬೀದಿಯಲ್ಲಿ ಮಹಿಳಾ ಅಧಿಕಾರಿಗೆ ಹೊಡೆದ ಮಹಿಳೆ
Follow us
Lakshmi Hegde
|

Updated on: Mar 21, 2021 | 11:28 AM

ಇಲ್ಲೊಬ್ಬ ಮಹಿಳೆ ಮಾಸ್ಕ್ ಯಾಕೆ ಹಾಕಿಲ್ಲ ಎಂದು ಕೇಳಿದ ಮಹಿಳಾ ಅಧಿಕಾರಿಗೆ ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಅಧಿಕಾರಿಯ ತಲೆಕೂದಲನ್ನೆಲ್ಲ ಹಿಡಿದು ಎಳೆದಿದ್ದಾಳೆ. ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಅಂದ ಹಾಗೆ ಘಟನೆ ನಡೆದಿದ್ದು ಮುಂಬೈನ ಕಂಡಿವಲಿಯಲ್ಲಿ.

ಮಹಿಳೆಯೊಬ್ಬಳು ಆಟೋದಲ್ಲಿ ಬರುತ್ತಾಳೆ. ಮಹಾವೀರ್​ ನಗರ್ ಟ್ರಾಫಿಕ್​ ಸಿಗ್ನಲ್ ಬಳಿ ಬರುತ್ತಿದ್ದಂತೆ ಅಲ್ಲಿದ್ದ ಬೃಹನ್ ​​ಮುಂಬೈ ಕಾರ್ಪೋರೇಶ್​ (BMC) ನ ಮಹಿಳಾ ಅಧಿಕಾರಿಯೊಬ್ಬರು ಆಕೆಯನ್ನು ತಡೆದು ನಿಲ್ಲಿಸುತ್ತಾರೆ. ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚುತ್ತಿರುವ ಬೆನ್ನಲ್ಲೇ ಮಾಸ್ಕ್​ ಕಡ್ಡಾಯ ಮಾಡಲಾಗಿದ್ದು, ಸಾರ್ವಜನಿಕರು ಮಾಸ್ಕ್​ ಧರಿಸುತ್ತಿದ್ದಾರಾ? ನಿಯಮಗಳನ್ನು ಪಾಲನೆ ಮಾಡುತ್ತಿದ್ದಾರಾ? ಎಂಬುದನ್ನು ಪರಿಶೀಲನೆ ಮಾಡಲು ಬಿಎಂಸಿ ಹೀಗೆ ಟ್ರಾಫಿಕ್ ಸಿಗ್ನಲ್​ಗಳಲ್ಲಿ ಮಾರ್ಶಲ್​​ಗಳನ್ನು ನೇಮಕ ಮಾಡಿದೆ. ಹಾಗೇ ಈ ಮಹಿಳಾ ಅಧಿಕಾರಿಯನ್ನು ಮಹಾವೀರ ನಗರ ಟ್ರಾಫಿಕ್​ ಸಿಗ್ನಲ್​​​ನಲ್ಲಿ ನಿಯೋಜಿಸಲಾಗಿತ್ತು. ಅವರು ತಮ್ಮ ಕರ್ತವ್ಯ ಮಾಡಿದ್ದಷ್ಟೇ.. ಸಿಗ್ನಲ್​ನಲ್ಲಿ ನಿಂತಿದ್ದ ಆಟೋದಲ್ಲಿದ್ದ ಮಹಿಳೆಗೆ 200 ರೂ. ದಂಡ ತುಂಬಲು ಹೇಳಿದರು. ಅಷ್ಟಕ್ಕೇ ಸಿಟ್ಟಾದ ಮಹಿಳೆ, ಆಟೋದಲ್ಲಿ ಕುಳಿತೇ ಆ ಮಹಿಳಾ ಅಧಿಕಾರಿಗೆ ಹೊಡೆದರು. ಕಾಲಿನಿಂದ ಒದ್ದರು, ನಂತರ ವಾಹನದಿಂದ ಕೆಳಗಿಳಿದು, ಅಧಿಕಾರಿಯ ತಲೆಕೂದಲನ್ನು ಹಿಡಿದು ಎಳೆದಿದ್ದಾರೆ. ನಿನಗೆ ನನ್ನನ್ನು ತಡೆಯಲು, ಮುಟ್ಟಲು ಎಷ್ಟು ಧೈರ್ಯ ಎಂದೂ ಕೂಗಾಡಿದ್ದಾರೆ.

ಹಲ್ಲೆ ಪ್ರಕರಣದ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಬಿಎಂಸಿ ಮೇಲ್ವಿಚಾರಕ ಪ್ರಶಾಂತ್​ ಕಾಂಬ್ಳೆ ತಿಳಿಸಿದ್ದಾರೆ. ಸದ್ಯ ಮಹಾರಾಷ್ಟ್ರದಲ್ಲಿ ಕೊರೊನಾ ಎರಡನೇ ಅಲೆ ಜೋರಾಗಿಯೇ ಇದೆ. ನಾಗ್ಪುರವಂತೂ ಕಂಪ್ಲೀಟ್​ ಲಾಕ್​ ಆಗಿದೆ. ಮಾಸ್ಕ್ ಕಡ್ಡಾಯ ಮಾಡಿ ಆದೇಶ ಹೊರಡಿಸಲಾಗಿದೆ. ಪೊಲೀಸರು ಕೂಡ ಇದರ ಬಗ್ಗೆ ನಿಗಾ ವಹಿಸಿದ್ದು, ಮಾಸ್ಕ್ ಧರಿಸದೆ ರಸ್ತೆಗಿಳಿಯುವವರಿಗೆ ದಂಡ ವಿಧಿಸುತ್ತಿದ್ದಾರೆ. ಹೀಗೆ ಕೊರೊನಾ ಹೆಚ್ಚಾದ ಬೆನ್ನಲ್ಲಿ, ಮಾಸ್ಕ್ ಧರಿಸಿ ಎಂದಿದ್ದಕ್ಕೆ ಈ ಮಹಿಳೆ ನಡೆದುಕೊಂಡ ರೀತಿ ಎಷ್ಟು ಸರಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್