ಮಹಿಳೆಯ 40 ವರ್ಷಗಳ ಒಂಟಿ ಬದುಕು, ಕೊನೆಯ ವಿದಾಯ ಹೇಳಲೂ ಬರದ ಕುಟುಂಬ
ಮುಂಬೈನ ಲಲಿತಾ ಕೃಷ್ಣಮೂರ್ತಿ 40 ವರ್ಷ ಒಂಟಿಯಾಗಿ ಬದುಕಿ ಇಹಲೋಕ ತ್ಯಜಿಸಿದ್ದಾರೆ. ಅವರ ಸಾವಿನ ಬಳಿಕ ಕುಟುಂಬದವರ ಸಂಪರ್ಕ ಸಿಗದೆ, ನೆರೆಹೊರೆಯವರೇ ಆಕೆಯ ಹೆಣ್ಣುಮಕ್ಕಳು ಮತ್ತು ಸಂಬಂಧಿಕರನ್ನು ಹುಡುಕಲು ಸಾರ್ವಜನಿಕ ಸಹಾಯ ಕೋರಿದ್ದಾರೆ. ಈ ಹೃದಯ ಕಲಕುವ ಕಥೆ ನಗರಗಳಲ್ಲಿ ಹೆಚ್ಚುತ್ತಿರುವ ಹಿರಿಯರ ಏಕಾಂಗಿತನದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ, ಸಮುದಾಯದ ಪಾತ್ರದ ಮಹತ್ವವನ್ನು ಸಾರಿದೆ.

ಮುಂಬೈ, ನವೆಂಬರ್ 20: ಕೆಲವೊಮ್ಮೆ ನಮ್ಮ ಸುತ್ತಲೂ ಇರುವವರ ಬದುಕಿನ ಕಥೆಯೇ ನಮಗೆ ಗೊತ್ತಿರುವುದಿಲ್ಲ. ಪ್ರತಿದಿನ ಕಾಣುವ ವ್ಯಕ್ತಿ ಏಕಾಂಗಿಯಾಗಿ ಎಷ್ಟು ನೋವು, ಎಷ್ಟು ನೆನಪುಗಳೊಂದಿಗೆ ಬದುಕುತ್ತಿದ್ದಾರೆ ಎಂಬುದೂ ತಿಳಿದಿರುವುದಿಲ್ಲ. ಮುಂಬೈನಲ್ಲಿ ಸುಮಾರು 40 ವರ್ಷಗಳಿಂದ ಒಂಟಿಯಾಗಿ ಜೀವನ ನಡೆಸಿದ್ದ ಲಲಿತಾ ಕೃಷ್ಣಮೂರ್ತಿ ಅವರ ಕಥೆ ಈಗ ಇಂತಹದ್ದೇ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅವರು ಮೃತಪಟ್ಟ ಬಳಿಕ ಅವರ ಹೆಣ್ಣುಮಕ್ಕಳು ಮತ್ತು ಸಂಬಂಧಿಕರನ್ನು ಹುಡುಕಲು ನೆರೆಹೊರೆಯವರೇ ಮುಂದಾಗಿದ್ದಾರೆ.
ಬಂಧುಗಳು ಎಂದರೆ ರಕ್ತಸಂಬಂಧ ಹೊಂದಿರುವವರಷ್ಟೇ ಅಲ್ಲ, ಕಷ್ಟದ ಸಮಯದಲ್ಲಿ ಕೈಹಿಡಿಯುವವರೂ ಹೌದು. ಇದಕ್ಕೆ ಸಾಕ್ಷಿಯಾಗಿದೆ ಮುಂಬೈನಲ್ಲಿ ನಡೆದ ಈ ಘಟನೆ. ಸುಮಾರು ನಾಲ್ಕು ದಶಕಗಳಿಂದ ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧೆ ಲಲಿತಾ ಕೃಷ್ಣಮೂರ್ತಿ ನಿಧನರಾಗಿದ್ದಾರೆ. ಅವರ ಕೊನೆಯ ದಿನಗಳಲ್ಲಿ ನೆರವಿಗೆ ಬಂದಿದ್ದು ಕುಟುಂಬದವರಲ್ಲ, ಅದೇ ಕಟ್ಟಡದ ನೆರೆಹೊರೆಯವರು. ಈಗ ಅವರ ಕುಟುಂಬವನ್ನು ಹುಡುಕುವ ಜವಾಬ್ದಾರಿಯನ್ನೂ ಅವರೇ ಹೊತ್ತುಕೊಂಡಿದ್ದಾರೆ.
ಮುಂಬೈನಲ್ಲಿ ವಾಸಿಸುತ್ತಿದ್ದ ಮೂಲತಃ ಚೆನ್ನೈ ಮೂಲದ ಲಲಿತಾ ಕೃಷ್ಣಮೂರ್ತಿ ಅವರು ನವೆಂಬರ್ 13ರಂದು ಮೃತಪಟ್ಟಿದ್ದಾರೆ. ಅವರ ಇಬ್ಬರು ಹೆಣ್ಣುಮಕ್ಕಳು ಮತ್ತು ಇತರ ಸಂಬಂಧಿಕರು ಎಲ್ಲಿದ್ದಾರೆ ಎಂಬ ಮಾಹಿತಿ ಸಿಗದ ಕಾರಣ, ಅವರನ್ನು ಹುಡುಕಲು ಪತ್ರಿಕೆಯಲ್ಲಿ ಪ್ರಕಟಣೆ ನೀಡಲಾಗಿದೆ. ಈ ಪ್ರಕಟಣೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನೆರೆಹೊರೆಯವರೇ ಅಂತಿಮ ವಿಧಿವಿಧಾನಗಳಿಗೆ ನೆರವು
ಲಲಿತಾ ಅವರ ಸಾವಿನ ಬಳಿಕ ಕಟ್ಟಡದ ನಿವಾಸಿಗಳು ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಮುಂದಾಗಿದ್ದಾರೆ. ಅವರ ಸಂಬಂಧಿಕರಾಗಿದ್ದ ದಂಪತಿಯೂ ಈ ಸಂದರ್ಭದಲ್ಲಿ ನೆರವಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕುಟುಂಬದವರನ್ನು ಸಂಪರ್ಕಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನೆರೆಹೊರೆಯವರು ಪತ್ರಿಕೆಯಲ್ಲಿ ಸಾರ್ವಜನಿಕ ಪ್ರಕಟಣೆ ನೀಡಿದ್ದಾರೆ. ಲಲಿತಾ ಅವರ ಹೆಣ್ಣುಮಕ್ಕಳು, ಕುಟುಂಬದ ಸದಸ್ಯರು, ಸಂಬಂಧಿಕರು ಅಥವಾ ಅವರ ಬಗ್ಗೆ ಮಾಹಿತಿ ಇರುವವರು ಸಂಪರ್ಕಿಸುವಂತೆ ಅದರಲ್ಲಿ ಮನವಿ ಮಾಡಲಾಗಿದೆ. ಪ್ರಕಟಣೆಯಲ್ಲಿ ಉಷಾ ಲಕ್ಷ್ಮಿನಾರಾಯಣ್ ಮತ್ತು ಪವನ್ ಶೆಟ್ಟಿ ಅವರ ಸಂಪರ್ಕ ವಿವರಗಳನ್ನೂ ನೀಡಲಾಗಿದೆ.
Lalitha Krishnamurthy is still searching… No Voice to say, “Amma Goodbye”.
🕉️ 🕉️ 🕉️ 🕉️ 🕉️ 🕉️ 🕉️ 🕉️ 🕉️ 🕉️ 🕉️
I dialled the number given in the advertisement. It belonged to Pawan Shetty. I was already shaken when I read the notice about Mrs. Lalitha Krishnamurthy. What he told me left me choked.
She had lived alone for forty years. Originally from Chennai, she passed away in Mumbai on 13th November 2026. Two daughters exist somewhere in this world — their addresses, their lives, even the reason for the silence never shared. She carried that quiet to the end. A couple who were cousins became the only family she had. When she died, it was the people of the building who completed the formalities. No one from her own blood came. The same cousin & neighbours like Pawan Shetty — who had stood by her in life, helped her make her final journey. Still searching for the daughters who were never found while she was alive ( Ad placed by the cousin).
A search that continues even after Lalitha is gone, a yearning that death itself could not silence. No signal, no effort, no public notice has been strong enough to reach the children she left behind.
Every child, when born, had at least one soul with them — the mother. She was the first face, the first touch, the first reason the world felt safe. And yet, alas, there are mothers who die with just nobody around. No child at the bedside. No hand to hold. No voice that once called her “Amma” to say goodbye. The one who gave life is left to leave it alone.
I have always said a son or daughter is not an ATM. Money can be sent across cities and countries. Presence cannot. A monthly transfer does not sit beside you when the nights grow long. It does not notice when your voice grows thinner. It does not hold your hand when fear finally arrives.
I am 51. Work had taken our families to different cities, not anger, not ego. After years of living separately, we have chosen to return. We are building a joint family home now. Not because the old ways were perfect, but because we finally understood that the strongest thing a family can offer is not money or independence — it is the quiet certainty that someone will still be there.
This is no longer one woman’s story. Across our cities, parents who once filled rooms with laughter are dying with only a television for company. Children leave for better lives and sometimes never return — not even for the final goodbye. Phone calls shrink. “We will come soon” stretches into years. Joint families dissolve. And many elders, out of pride or pain, simply stop waiting… while somewhere deep inside, the yearning never really ends.
We still speak of parents as God, of duty, of Indian values. Yet somewhere between ambition and distance, many of them are being left to grow old in silence — still searching, in their own way, for the children who no longer come.
If you are a son or daughter reading this, or one day reading a notice like the one for Lalitha Krishnamurthy — there is still time while they breathe. I am willing to help if somebody can locate her children. Some pursuits are beyond the purpose of any gain, and this one is for sure.
Call them today. Or don’t be surprised when even the cousin who stood by her has to place an ad to find the children who never came.
Lalitha Krishnamurthy is gone. The search for her daughters continues. The yearning didn’t end with her. It just became public. If any of you can help, please 🙏 do.
May she attain Sadgati. OM Shanti.
— Kishore Subramanian (@Kishore1975_) November 19, 2026
ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್
ಎಕ್ಸ್ ಬಳಕೆದಾರ ಕಿಶೋರ್ ಸುಬ್ರಮಣಿಯನ್ ಅವರು ಈ ಪ್ರಕಟಣೆಯನ್ನು ಗಮನಿಸಿ, ಅದರಲ್ಲಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದಾರೆ. ಪವನ್ ಶೆಟ್ಟಿ ಅವರೊಂದಿಗೆ ಮಾತನಾಡಿದ ಬಳಿಕ ಲಲಿತಾ ಅವರ ಜೀವನದ ಬಗ್ಗೆ ತಿಳಿದುಕೊಂಡಿದ್ದಾಗಿ ಅವರು ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.
‘ಇದು ಕೇವಲ ಒಬ್ಬ ಮಹಿಳೆಯ ಕಥೆಯಲ್ಲ. ನಮ್ಮ ನಗರಗಳಲ್ಲಿ ಮಕ್ಕಳು ಉತ್ತಮ ಜೀವನಕ್ಕಾಗಿ ದೂರದ ಊರುಗಳಿಗೆ ಅಥವಾ ವಿದೇಶಗಳಿಗೆ ತೆರಳುತ್ತಾರೆ. ಕಾಲಕ್ರಮೇಣ ದೂರವಾಣಿ ಕರೆಗಳು ಕಡಿಮೆಯಾಗುತ್ತವೆ. ಮತ್ತೆ ಬರುತ್ತೇವೆ ಎಂಬ ಮಾತು ವರ್ಷಗಳವರೆಗೆ ಮುಂದುವರಿಯುತ್ತದೆ. ಹೀಗೆ ಅನೇಕ ಹಿರಿಯರು ಒಂಟಿತನದಲ್ಲಿ ಜೀವನ ಕಳೆಯುವಂತಾಗುತ್ತದೆ’ ಎಂದು ಅವರು ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ.
ಈ ಪೋಸ್ಟ್ಗೆ ಹಲವರು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಲಲಿತಾ ಅವರ ಕೊನೆಯ ದಿನಗಳಲ್ಲಿ ನೆರವಾದ ನೆರೆಹೊರೆಯವರ ಕಾರ್ಯವನ್ನು ಅನೇಕರು ಶ್ಲಾಘಿಸಿದ್ದಾರೆ. ಇನ್ನು ಕೆಲವರು ಮಕ್ಕಳು ದೂರದಲ್ಲಿ ವಾಸಿಸುವುದಕ್ಕೆ ಹಲವು ಕಾರಣಗಳಿರಬಹುದು. ಕುಟುಂಬದ ಪರಿಸ್ಥಿತಿ ತಿಳಿಯದೆ ಯಾರನ್ನೂ ದೂಷಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಗರಗಳಲ್ಲಿ ಹೆಚ್ಚುತ್ತಿರುವ ಹಿರಿಯರ ಒಂಟಿತನದ ಚರ್ಚೆ
ಲಲಿತಾ ಅವರ ಘಟನೆ ದೊಡ್ಡ ನಗರಗಳಲ್ಲಿ ಒಂಟಿಯಾಗಿ ವಾಸಿಸುವ ಹಿರಿಯರ ಸುರಕ್ಷತೆ ಮತ್ತು ಆರೈಕೆಯ ಬಗ್ಗೆ ಮತ್ತೆ ಚರ್ಚೆ ಹುಟ್ಟುಹಾಕಿದೆ. ಭಾರತದಲ್ಲಿ ವಯಸ್ಸಾದವರ ಜೀವನದ ಕುರಿತು ನಡೆದ ಲಾಂಗಿಟ್ಯೂಡಿನಲ್ ಏಜಿಂಗ್ ಸ್ಟಡಿ ಇನ್ ಇಂಡಿಯಾ (LASI) ಸಮೀಕ್ಷೆಯ ಅಂಕಿಅಂಶಗಳನ್ನು ಉಲ್ಲೇಖಿಸಿ, 60 ವರ್ಷ ಮೇಲ್ಪಟ್ಟವರಲ್ಲಿ ಸುಮಾರು ಶೇ.5.7ರಷ್ಟು ಮಂದಿ ಸಂಪೂರ್ಣವಾಗಿ ಒಂಟಿಯಾಗಿ ವಾಸಿಸುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಉದ್ಯೋಗ, ಶಿಕ್ಷಣ ಸೇರಿದಂತೆ ಹಲವು ಕಾರಣಗಳಿಂದ ಮಕ್ಕಳು ಬೇರೆ ನಗರಗಳಲ್ಲಿ ಅಥವಾ ದೇಶಗಳಲ್ಲಿ ನೆಲೆಸುವುದು ಸಾಮಾನ್ಯವಾಗಿದೆ. ಆದರೆ ವಯಸ್ಸಾದ ಪೋಷಕರಿಗೆ ಅನಾರೋಗ್ಯ, ತುರ್ತು ಪರಿಸ್ಥಿತಿ ಅಥವಾ ದೈನಂದಿನ ಕೆಲಸಗಳಲ್ಲಿ ನೆರವು ಬೇಕಾದಾಗ ಸಮಸ್ಯೆಗಳು ಎದುರಾಗಬಹುದು. ಇಂತಹ ಸಂದರ್ಭಗಳಲ್ಲಿ ನೆರೆಹೊರೆಯವರು, ಸ್ಥಳೀಯ ಸಮುದಾಯಗಳು ಮತ್ತು ಹಿರಿಯರ ಆರೈಕೆ ವ್ಯವಸ್ಥೆಗಳ ಪಾತ್ರವೂ ಮಹತ್ವದ್ದಾಗಿದೆ.
ಲಲಿತಾ ಕೃಷ್ಣಮೂರ್ತಿ ಅವರ ಕುಟುಂಬವನ್ನು ಪತ್ತೆಹಚ್ಚುವ ಪ್ರಯತ್ನ ಮುಂದುವರೆದಿದೆ. ಅವರ ಹೆಣ್ಣುಮಕ್ಕಳು ಅಥವಾ ಸಂಬಂಧಿಕರ ಬಗ್ಗೆ ಮಾಹಿತಿ ಇರುವವರು ಪ್ರಕಟಣೆಯಲ್ಲಿ ನೀಡಿರುವ ಸಂಪರ್ಕ ವಿವರಗಳ ಮೂಲಕ ನೆರೆಹೊರೆಯವರನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




