ಸಂಗೀತ ಸಂಯೋಜಕ, ಗಾಯಕ ಎ.ಆರ್. ರೆಹಮಾನ್​ಗೆ ಮಾತೃ ವಿಯೋಗ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 28, 2020 | 4:39 PM

ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಅವರ ಅಮ್ಮ ಕರೀಮಾ ಬೇಗಂ ಸೋಮಮಾರ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅಂತ್ಯ ಸಂಸ್ಕಾರ ಸಂಜೆ ನಂತರ ನಡೆಯಲಿದೆ ಎಂದು ಬಲ್ಲಮೂಲಗಳು ಹೇಳಿವೆ.

ಸಂಗೀತ ಸಂಯೋಜಕ, ಗಾಯಕ ಎ.ಆರ್. ರೆಹಮಾನ್​ಗೆ ಮಾತೃ ವಿಯೋಗ
ಕರೀಮಾ ಬೇಗಂ (ಕೃಪೆ: ಟ್ವಿಟರ್)
Follow us on

ಚೆನ್ನೈ: ಸಂಗೀತ ಸಂಯೋಜಕ, ಗಾಯಕ ಎ.ಎರ್.ರೆಹಮಾನ್ ಅವರ ತಾಯಿ ಕರೀಮಾ ಬೇಗಂ ಸೋಮವಾರ ನಿಧನರಾಗಿದ್ದಾರೆ. ಖ್ಯಾತ ಸಂಗೀತ ಸಂಯೋಜಕ ಆರ್.ಕೆ. ಶೇಖರ್ ಅವರ ಪತ್ನಿ ಕರೀಮಾ ಬೇಗಂ ಅವರ ಒಬ್ಬನೇ ಮಗ ಎ.ಆರ್. ರೆಹಮಾನ್. ರೆಹಮಾನ್ ಗೆ ಮೂವರು ಸಹೋದರಿಯರು ಇದ್ದಾರೆ.

ರೆಹಮಾನ್​ ತಂದೆ ಆರ್.ಕೆ. ಶೇಖರ್ 1976ರಲ್ಲಿ ನಿಧನರಾಗಿದ್ದರು. ಬಲ್ಲಮೂಲಗಳ ಪ್ರಕಾರ ಕರೀಮಾ ಬೇಗಂ ಅವರ ಅಂತ್ಯ ಸಂಸ್ಕಾರ ಸೋಮವಾರ ಸಂಜೆ ನಡೆಯಲಿದೆ.

ರೆಹಮಾನ್​ಗೆ ಅಮ್ಮನೆಂದರೆ ತುಂಬಾ ಅಕ್ಕರೆ. 1997ರಲ್ಲಿ ಬಿಡುಗಡೆಯಾದ ‘ವಂದೇ ಮಾತರಂ’ ಆಲ್ಬಂ ಬಗ್ಗೆ ಮಾತನಾಡಿದಾಗ ಅಮ್ಮ ಯಾವ ರೀತಿ ತನ್ನ ವೃತ್ತಿಜೀವನಕ್ಕೆ ಬೆಂಬಲವಾಗಿ ನಿಂತರು ಎಂಬುದನ್ನು ರೆಹಮಾನ್ ಸ್ಮರಿಸಿದ್ದರು.

ಹೆಚ್ಚಿನ ಜನರು ದೈವಿಕವಾದುದನ್ನು ನೋಡಿರುವುದಿಲ್ಲ. ಆದರೆ ನಮ್ಮನ್ನು ನಮ್ಮ ಹೆತ್ತವರು ಸೃಷ್ಟಿಸಿದ್ದಾರೆ. ಅಪ್ಪ ಅಮ್ಮನ ಆರೈಕೆ ಮತ್ತು ಪ್ರೀತಿಯಿಂದಾಗಿಯೇ ನಾವು ಮಾನಸಿಕ ಸ್ಥಿರತೆಯನ್ನು ಕಾಯ್ದುಕೊಂಡಿದ್ದೇವೆ. ದೇಶಭಕ್ತಿ ವಿಷಯವನ್ನು ಇಲ್ಲಿ ಬಳಸಿದರೆ ಸರಿಯಾಗಬಹುದೇ ಎಂಬುದರ ಬಗ್ಗೆ ನಾನು ಯೋಚಿಸಿದ್ದೆ. ಆಮೇಲೆ ದೇಶದ ವಿಷಯ ಅಲ್ಲ, ನನ್ನ ಅಮ್ಮನಿಗಾಗಿ ಈ ಹಾಡು ಮಾಡೋಣ ಎಂದು ‘ಮಾ ತುಜೇ ಸಲಾಂ’ ಹಾಡು ರೂಪುಗೊಂಡ ರೀತಿ ಬಗ್ಗೆ ರೆಹಮಾನ್ ವಿವರಿಸಿದ್ದರು.

Published On - 4:38 pm, Mon, 28 December 20