ಬಿಜೆಪಿ ವಿರುದ್ಧ ಮಾತನಾಡಿದರೆ ಇಡಿ ಅಥವಾ ಸಿಬಿಐ ಕ್ರಮ ಎದುರಿಸಬೇಕಾಗುತ್ತದೆ: ಅನಿಲ್ ದೇಶ್ಮುಖ್
ಪಿಎಂಸಿ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಸಂಜಯ್ ರಾವುತ್ ಅವರ ಪತ್ನಿಗೆ ಇಡಿ ಸಮನ್ಸ್ ಕಳುಹಿಸಿದರ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಸಚಿವ ಅನಿಲ್ ದೇಶ್ಮುಖ್, ಕೇಂದ್ರ ಸರ್ಕಾರದ ನೀತಿ ಅಥವಾ ಬಿಜೆಪಿ ನಾಯಕರ ವಿರುದ್ಧ ಯಾರಾದರೂ ಮಾತನಾಡಿದರೆ ಕೇಂದ್ರ ಸಂಸ್ಥೆಗಳಿಂದ ಕ್ರಮ ಎದುರಿಸಬೇಕಾಗಿ ಬರುತ್ತದೆ ಎಂದಿದ್ದಾರೆ.
ನಾಗ್ಪುರ್ : ಕೇಂದ್ರ ಸರ್ಕಾರದ ನೀತಿ ಅಥವಾ ಬಿಜೆಪಿ ನಾಯಕರ ವಿರುದ್ಧ ಯಾರಾದರೂ ಮಾತನಾಡಿದರೆ ಕೇಂದ್ರ ಸಂಸ್ಥೆಗಳಿಂದ ಕ್ರಮ ಎದುರಿಸಬೇಕಾಗಿ ಬರುತ್ತದೆ ಎಂದು ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್ ಸೋಮವಾರ ಹೇಳಿದ್ದಾರೆ.
ಪಿಎಂಸಿ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಶಿವಸೇನಾ ಸಂಸದ ಸಂಜಯ್ ರಾವುತ್ ಅವರ ಪತ್ನಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಕಳುಹಿಸಿ, ಡಿಸೆಂಬರ್ 29ರಂದು ಹಾಜರಾಗಲು ಹೇಳಿದೆ. ಈ ಬಗ್ಗೆ ಮಾಧ್ಯಮದವರೊಂದಿದೆ ಮಾತನಾಡಿದ ದೇಶ್ಮುಖ್, ರಾಜಕೀಯ ಉದ್ದೇಶಕ್ಕಾಗಿ ಇಡಿಯನ್ನು ಬಳಸಿರುವುದು ಮಹಾರಾಷ್ಟ್ರದಲ್ಲಿ ಇದೇ ಮೊದಲು. ಸರ್ಕಾರದ ನೀತಿ ಅಥವಾ ಬಿಜೆಪಿ ನಾಯಕರ ವಿರುದ್ಧ ಮಾತನಾಡಿದರೆ ಇಡಿ ಅಥವಾ ಸಿಬಿಐ ಕ್ರಮ ಎದುರಿಸಬೇಕಾಗುತ್ತದೆ.
ಕೇಂದ್ರ ತನಿಖಾ ಸಂಸ್ಥೆಗಳ ಬಗ್ಗೆ ಹೇಳುವುದಾದರೆ ಮಹಾರಾಷ್ಟ್ರದಲ್ಲಿ ಯಾವುದೇ ತನಿಖೆ ನಡೆಸಲು ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕು ಎಂಬ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ. ಆದಾಗ್ಯೂ, ಇಡಿ ತನಿಖೆಗೆ ಆದೇಶ ನೀಡುವ ಹಕ್ಕು ಕೇಂದ್ರ ಸರ್ಕಾರಕ್ಕಿದೆ. ಆದರೆ ಇದನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿದ್ದನ್ನು ನಾವು ಈವರೆಗೆ ಮಹಾರಾಷ್ಟ್ರದಲ್ಲಿ ನೋಡಿಲ್ಲ ಎಂದಿದ್ದಾರೆ.
ಶಿವಸೇನೆ ಜತೆ ಕಾಂಗ್ರೆಸ್ ಮೈತ್ರಿ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತ: ಅಶೋಕ್ ಚವಾಣ್