ಬ್ಯಾಂಕ್ಗೆ ವಂಚನೆ: ಶಿವಸೇನೆ ಸಂಸದ ಸಂಜಯ್ ರಾವುತ್ ಪತ್ನಿಗೆ ಸಮನ್ಸ್ ನೀಡಿದ ಜಾರಿ ನಿರ್ದೇಶನಾಲಯ
ಶಿವಸೇನಾ ರಾಜ್ಯಸಭಾ ಸಂಸದ ಸಂಜಯ್ ರಾವುತ್ ಪತ್ನಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಮಾಡಿದೆ. ನಾಳೆ (ಡಿ.29)ರಂದು ವಿಚಾರಣೆಗೆ ಹಾಜರಾಗಲು ಸೂಚಿಸಿದೆ.
ಮುಂಬೈ: ಶಿವಸೇವಾ ಸಂಸದ ಸಂಜಯ್ ರಾವತ್ ಮಡದಿ ವರ್ಷಾ ರಾವತ್ಗೆ ಪಂಜಾಬ್ ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ನ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸಿದೆ. ನಾಳೆ (ಡಿಸೆಂಬರ್ 29) ರಂದು ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸುವಂತೆ ಸಮನ್ಸ್ನಲ್ಲಿ ಹೇಳಲಾಗಿದೆ.
ವರ್ಷಾ ರಾವುತ್ ಈವರೆಗೆ ನೀಡಿದ್ದ ಎರಡು ಸಮನ್ಸ್ಗಳಿಗೆ ಅನಾರೋಗ್ಯದ ಕಾರಣದಿಂದ ಗೈರಾಗಿದ್ದರು. ಇದು ವರ್ಷಾ ರಾವುತ್ಗೆ ನೀಡಲಾದ ಮೂರನೇ ಸಮನ್ಸ್ ಆಗಿದ್ದು, ‘ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಸಮನ್ಸ್ ನೀಡಲಾಗುತ್ತಿದೆ. ಪಂಜಾಬ್ ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ನ ಠೇವಣಿದಾರರ ಆತಂಕ ಕಳೆಯಲು ಈ ಪ್ರಕರಣದ ತನಿಖೆಯನ್ನು ಶೀಘ್ರವಾಗಿ ಮುಗಿಸಬೇಕೆಂದು ಬಿಜೆಪಿ ನಾಯಕರು ಒತ್ತಡ ಹೇರುತ್ತಿದ್ದಾರೆ.
ಇದೇ ವೇಳೆ, ಬಿಜೆಪಿ ತೊರೆದು ಎನ್ಸಿಪಿ ಸೇರಿದ್ದ ನಾಯಕ ಏಕನಾಥ್ ಖಡ್ಸೆ ಅವರಿಗೂ ಪ್ರತ್ಯೇಕ ಪ್ರಕರಣವೊಂದರಲ್ಲಿ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.