ಅಯೋಧ್ಯೆ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಲು ಸುನ್ನಿ ವಕ್ಫ್​ಬೋರ್ಡ್ ನಿರ್ಧಾರ

ದೆಹಲಿ: ಅಯೋಧ್ಯೆ ಭೂವಿವಾದ ತೀರ್ಪು ಮರುಪರಿಶೀಲನೆಗೆ ಕೋರಿ ಸುನ್ನಿ ವಕ್ಫ್​ಬೋರ್ಡ್ ನಿಂದ ಅರ್ಜಿ ಸಲ್ಲಿಸಲು ನಿರ್ಧಾರ ಮಾಡಲಾಗಿದೆ ಎಂದು ವಕೀಲ ಜಫ್ರ್ಯಾಬ್ ಜಿಲಾನಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ನವೆಂಬರ್ 9ರಂದು ಅಯೋಧ್ಯೆ ಭೂವಿವಾದದ ಬಗ್ಗೆ ಸಾಂವಿಧಾನಿಕ ಪೀಠ ತೀರ್ಪು ನೀಡಿತ್ತು. ವಿವಾದಿತ ಭೂಮಿ ರಾಮಲಲ್ಲಾಗೆ ನೀಡಬೇಕೆಂದು ಸುಪ್ರೀಂಕೋರ್ಟ್ ಹೇಳಿತ್ತು. ಜೊತೆಗೆ ಸುನ್ನಿವಕ್ಫ್​ಬೋರ್ಡ್​ಗೆ 5 ಎಕರೆ ಜಮೀನು ನೀಡಲು ಆದೇಶ ನೀಡಿತ್ತು. ಆದರೆ 5 ಎಕರೆ ಭೂಮಿ ಪಡೆಯದಿರಲು ಸುನ್ನಿವಕ್ಫ್​ಬೋರ್ಡ್ ನಿರ್ಧಾರ ಮಾಡಿದೆ. ಅಯೋಧ್ಯೆ ಭೂವಿವಾದ ತೀರ್ಪು ಮರುಪರಿಶೀಲನೆ ಮಾಡಬೇಕೆಂದು […]

ಅಯೋಧ್ಯೆ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಲು ಸುನ್ನಿ ವಕ್ಫ್​ಬೋರ್ಡ್ ನಿರ್ಧಾರ
ಸಾಧು ಶ್ರೀನಾಥ್​

Updated on: Nov 17, 2019 | 5:51 PM

ದೆಹಲಿ: ಅಯೋಧ್ಯೆ ಭೂವಿವಾದ ತೀರ್ಪು ಮರುಪರಿಶೀಲನೆಗೆ ಕೋರಿ ಸುನ್ನಿ ವಕ್ಫ್​ಬೋರ್ಡ್ ನಿಂದ ಅರ್ಜಿ ಸಲ್ಲಿಸಲು ನಿರ್ಧಾರ ಮಾಡಲಾಗಿದೆ ಎಂದು ವಕೀಲ ಜಫ್ರ್ಯಾಬ್ ಜಿಲಾನಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನವೆಂಬರ್ 9ರಂದು ಅಯೋಧ್ಯೆ ಭೂವಿವಾದದ ಬಗ್ಗೆ ಸಾಂವಿಧಾನಿಕ ಪೀಠ ತೀರ್ಪು ನೀಡಿತ್ತು. ವಿವಾದಿತ ಭೂಮಿ ರಾಮಲಲ್ಲಾಗೆ ನೀಡಬೇಕೆಂದು ಸುಪ್ರೀಂಕೋರ್ಟ್ ಹೇಳಿತ್ತು. ಜೊತೆಗೆ ಸುನ್ನಿವಕ್ಫ್​ಬೋರ್ಡ್​ಗೆ 5 ಎಕರೆ ಜಮೀನು ನೀಡಲು ಆದೇಶ ನೀಡಿತ್ತು. ಆದರೆ 5 ಎಕರೆ ಭೂಮಿ ಪಡೆಯದಿರಲು ಸುನ್ನಿವಕ್ಫ್​ಬೋರ್ಡ್ ನಿರ್ಧಾರ ಮಾಡಿದೆ.

ಅಯೋಧ್ಯೆ ಭೂವಿವಾದ ತೀರ್ಪು ಮರುಪರಿಶೀಲನೆ ಮಾಡಬೇಕೆಂದು ಕೋರಿ ಅರ್ಜಿ ಸಲ್ಲಿಸಲು ಸುನ್ನಿವಕ್ಫ್​ಬೋರ್ಡ್ ನಿರ್ಧಾರಿಸಿದೆ. ನವದೆಹಲಿಯಲ್ಲಿ ವಕೀಲ ಜಫ್ರ್ಯಾಬ್ ಜಿಲಾನಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us