ನಿತ್ಯಾನಂದನ ಆಶ್ರಮದಲ್ಲಿದ್ದ ಬೆಂಗಳೂರು ಯುವತಿ ನಿಗೂಢ ನಾಪತ್ತೆ

ಗುಜರಾತ್: ನಿತ್ಯಾನಂದನ ಆಶ್ರಮಕ್ಕೂ ವಿವಾದಕ್ಕೂ ಅದೇನೋ ಸಂಬಂಧ. ಅತ್ಯಾಚಾರ ಸೇರಿ ಹಲವು ಆರೋಪ ಎದುರಿಸ್ತೀರೋ ನಿತ್ಯಾನಂದ ಆಶ್ರಮ ಈಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ. ನಿತ್ಯಾನಂದ ಆಶ್ರಮಕ್ಕೆ ಅದೆಷ್ಟೋ ಆರೋಪಗಳು ಕೇಳಿ ಬಂದಿವೆ ಆದರೂ ಅಲ್ಲಿಗೆ ಬರೋರ ಭಕ್ತರಿಗೇನು ಕಡಿಮೆ ಇಲ್ಲ. ದೇಶ ಅಷ್ಟೆ ಅಲ್ಲದೆ ವಿದೇಶದಿಂದಲೂ ಆಶ್ರಮಕ್ಕೆ ಭಕ್ತರು ಬರ್ತಾರೆ. ಭಕ್ತಿಯ ಪರವಶೆಯಲ್ಲೇ ತೇಲ್ತಾರೆ. ಆದ್ರೀಗ ಇದೇ ನಿತ್ಯಾನಂದ ಆಶ್ರಮದ ಮೇಲೆ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಆಶ್ರಮದಲ್ಲಿದ್ದ ಬೆಂಗಳೂರು ಯುವತಿ ನಿಗೂಢ ನಾಪತ್ತೆ..! ನಿತ್ಯಾನಂದ ಆಶ್ರಮ […]

ನಿತ್ಯಾನಂದನ ಆಶ್ರಮದಲ್ಲಿದ್ದ ಬೆಂಗಳೂರು ಯುವತಿ ನಿಗೂಢ ನಾಪತ್ತೆ
Follow us
ಸಾಧು ಶ್ರೀನಾಥ್​
|

Updated on:Nov 16, 2019 | 10:46 PM

ಗುಜರಾತ್: ನಿತ್ಯಾನಂದನ ಆಶ್ರಮಕ್ಕೂ ವಿವಾದಕ್ಕೂ ಅದೇನೋ ಸಂಬಂಧ. ಅತ್ಯಾಚಾರ ಸೇರಿ ಹಲವು ಆರೋಪ ಎದುರಿಸ್ತೀರೋ ನಿತ್ಯಾನಂದ ಆಶ್ರಮ ಈಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ.

ನಿತ್ಯಾನಂದ ಆಶ್ರಮಕ್ಕೆ ಅದೆಷ್ಟೋ ಆರೋಪಗಳು ಕೇಳಿ ಬಂದಿವೆ ಆದರೂ ಅಲ್ಲಿಗೆ ಬರೋರ ಭಕ್ತರಿಗೇನು ಕಡಿಮೆ ಇಲ್ಲ. ದೇಶ ಅಷ್ಟೆ ಅಲ್ಲದೆ ವಿದೇಶದಿಂದಲೂ ಆಶ್ರಮಕ್ಕೆ ಭಕ್ತರು ಬರ್ತಾರೆ. ಭಕ್ತಿಯ ಪರವಶೆಯಲ್ಲೇ ತೇಲ್ತಾರೆ. ಆದ್ರೀಗ ಇದೇ ನಿತ್ಯಾನಂದ ಆಶ್ರಮದ ಮೇಲೆ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.

ಆಶ್ರಮದಲ್ಲಿದ್ದ ಬೆಂಗಳೂರು ಯುವತಿ ನಿಗೂಢ ನಾಪತ್ತೆ..! ನಿತ್ಯಾನಂದ ಆಶ್ರಮ ವಿವಾದಗಳಿಂದಲೇ ಸುದ್ದಿಯಾಗೋ ಆಶ್ರಮ. ಇಲ್ಲಿ ಧಾರ್ಮಿಕ ಕಾರ್ಯಕ್ಕಿಂತ ವಿವಾದದ ಕಾರ್ಯಗಳೇ ಹೆಚ್ಚು ಸದ್ದು ಮಾಡ್ತಿವೆ. ಬೆಂಗಳೂರು ಹೊರವಲಯದ ಬಿಡದಿ ಬಳಿ ಇರೋ ನಿತ್ಯಾನಂದ ಆಶ್ರಮ ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುತ್ತೆ.

ಮಹಿಳೆಯ ಮೇಲೆ ಅತ್ಯಾಚಾರದ ಆರೋಪ ಎದುರಿಸುತ್ತಿರುವ ನಿತ್ಯಾನಂದನ ಬಿಡದಿ ಆಶ್ರಮದಲ್ಲಿ ಹಿಂದೆ ಯುವತಿ ನಿಗೂಢವಾಗಿ ಸಾವನ್ನಪ್ಪಿದ್ದಳು. ಆದರೆ, ಈಗ ಗುಜರಾತ್​ನ ಅಹಮದಾಬಾದ್ ಬಳಿ ಇರೋ ನಿತ್ಯಾನಂದನ ಸರ್ವಜ್ಞ ಪೀಠ ಆಶ್ರಮದಲ್ಲೂ ಬೆಂಗಳೂರಿನ ಓರ್ವ ಯುವತಿ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ.

ಯುವತಿಯನ್ನ ವಿದೇಶಕ್ಕೆ ಕಳುಹಿಸಿದ್ರಾ..? ಬೆಂಗಳೂರಿನ ದಂಪತಿ ತಮ್ಮ ಮೂರು ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ನಿತ್ಯಾನಂದನ ಬಿಡದಿ ಆಶ್ರಮಕ್ಕೆ ಸೇರಿಸಿದ್ದರು. ಬಳಿಕ ಮೂವರನ್ನು ಗುಜರಾತ್​ನ ಆಶ್ರಮಕ್ಕೆ ಕರೆದೊಯ್ಯಲಾಗಿದೆ. ಅಲ್ಲಿದ್ದ ಮೂವರಲ್ಲಿ ಇಬ್ಬರನ್ನೂ ಪೋಲೀಸರು ರಕ್ಷಿಸಿದ್ದಾರೆ. ಆದರೆ, 19 ವರ್ಷದ ಯುವತಿ ಮಾತ್ರ ನಾಪತ್ತೆಯಾಗಿದ್ದಾಳೆ.

ತಮ್ಮ ಪುತ್ರಿಯ ನಾಪತ್ತೆ ಬಗ್ಗೆ ಪೋಷಕರು ಅಹಮದಾಬಾದ್ ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ಪುತ್ರಿಯ ಮೇಲೆ ಅತ್ಯಾಚಾರ ಆಗಿರಬಹುದು ಇಲ್ಲವೇ ನಿತ್ಯಾನಂದ ತಮ್ಮ ಪುತ್ರಿಯನ್ನ ವಿದೇಶಕ್ಕೆ ಕರೆದೊಯ್ದಿರಬಹುದು ಅನ್ನೋ ಶಂಕೆಯನ್ನು ಪೋಷಕರು ವ್ಯಕ್ತಪಡಿಸಿದ್ದಾರೆ.

Published On - 10:44 pm, Sat, 16 November 19

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್