ಪ್ರೀತಿಗೋಸ್ಕರ ಯುವತಿಯೊಬ್ಬಳು ತನ್ನ ಧರ್ಮವನ್ನೇ ಬದಲಿಸಿಕೊಂಡ ಘಟನೆ ಉತ್ತರ ಪ್ರದೇಶ(Uttar Pradesh) ಬರೇಲಿಯಲ್ಲಿ ನಡೆದಿದೆ. ಯುಕ್ತಿ ಫರಾನಾ ಎಂಬ ಯುವತಿಯು ಹಿಂದೂ ಯುವಕನನ್ನು ಪ್ರೀತಿಸುತ್ತಿದ್ದಳು, ಆತನನ್ನು ಮದುವೆಯಾಗುವ ಸಲುವಾಗಿ ಫರಾನಾ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಲ್ಲದೇ ಹೆಸರನ್ನೂ ಕೂಡ ಪಲ್ಲವಿ ಎಂದು ಬದಲಾಯಿಸಿಕೊಂಡಿದ್ದಾರೆ.
ಯುವತಿ ತನ್ನ ಪ್ರಿಯಕರ ಧರಂವೀರ್ಗಾಗಿ ಧರ್ಮವನ್ನೇ ಬದಲಿಸಿಕೊಳ್ಳಲು ಮುಂದಾಗಿದ್ದಾರೆ, 19 ವರ್ಷದ ಫರಾನಾ ಹಾಗೂ ಧರಂವೀರ್ ಇಬ್ಬರು ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ನಿವಾಸಿಗಳಾಗಿದ್ದಾರೆ. ಆರು ತಿಂಗಳ ಹಿಂದೆ ಚಂಡೀಗಢದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಇಬ್ಬರೂ ಪರಿಚಯವಾಗಿದ್ದರು.
ನನಗೆ ಮೊದಲಿನಿಂದಲೂ ಹಿಂದೂ ಧರ್ಮದ ಬಗ್ಗೆ ನಂಬಿಕೆ ಇದೆ, ನಾನು ನನ್ನ ಬಾಲ್ಯದ ದಿನಗಳಿಂದಲೂ ಪೂಜೆ ಮಾಡುತ್ತಿದ್ದೆ, ಆದರೆ ನನ್ನ ಕುಟುಂಬ ಸದಸ್ಯರು ಅದನ್ನು ವಿರೋಧಿಸಿದ್ದರು. ಇದೀಗ ಫರಾನಾ ಪಲ್ಲವಿಯಾಗಿ ಬದಲಾಗಿದ್ದು, ಜೀವನ ಪರ್ಯಂತ ಧರಂವೀರ್ ಜತೆ ಬಾಳುವುದಾಗಿ ನಿರ್ಧರಿಸಿದ್ದಾರೆ.
ಮತ್ತಷ್ಟು ಓದಿ: ಮದುವೆ ಹೊಸ್ತಿಲಲ್ಲಿ ತಮ್ಮ ಸಂಬಂಧಕ್ಕೆ ಅಂತ್ಯ ಹಾಡಿದ ಭಾರತ-ಪಾಕ್ ಸಲಿಂಗ ಜೋಡಿ
ಚಂಡೀಗಢದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಪಲ್ಲವಿ ಹೇಳಿದ್ದಾರೆ, ಶಾಹಿ ಪ್ರದೇಶದ ವಿಕ್ರಮ್ಪುರ ಕುಲ್ಚಾ ಗ್ರಾಮದ ನಿವಾಸಿ ಧರಂವೀರ್ ಎಂಬಾತ ಸಹ ಈಕೆಯೊಂದಿಗೆ ಕೆಲಸ ಮಾಡುತ್ತಿದ್ದರು.
ಅವರಿಬ್ಬರು ಕ್ರಮೇಣವಾಗಿ ಮಾತನಾಡಲು ಶುರು ಮಾಡಿದ್ದರು, ಅದು ನಿಧಾನವಾಗಿ ಪ್ರೀತಿಗೆ ತಿರುಗಿತ್ತು. ಪಲ್ಲವಿ ಹಾಗೂ ಧರಂವೀರ್ ಅಗಸ್ತ್ಯ ರಿಷಿ ಮುನಿ ಆಶ್ರಮದಲ್ಲಿ ವಿವಾಹವಾದರು. ಈ ಮದುವೆಯನ್ನು ಪಂಡಿತ್ ಕೆಕೆ ಶಕ್ದರ್ ಅವರು ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ನೆರವೇರಿಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ