ದೆಹಲಿ: ಕೊರೊನಾ ಹತ್ತಿಕ್ಕಲು ತಕ್ಕಮಟ್ಟಿಗೆ ಪರಿಣಾಮಕಾರಿಯಾಗಿ ಕಂಡುಬಂದಿರುವ ರೆಮ್ಡಿಸಿವಿರ್ ಔಷಧಿ ಇದೀಗ ದೇಶದಲ್ಲಿ ಉತ್ಪಾದನೆಯಾಗುತ್ತಿದೆ. ಸಿಪ್ಲಾ ಮತ್ತು ಹೆಟೆರೋ ಕಂಪನಿಗಳಿಂದ ತಯಾರಾಗುತ್ತಿರುವ ರೆಮ್ಡಿಸಿವಿರ್ ವ್ಯಾಕ್ಸಿನ್ ಮಾರುಕಟ್ಟೆಯಲ್ಲಿ ಲಭ್ಯವಾಗಿದೆ. ಆದರೆ, ಇದರ ಪ್ರಮಾಣ ಕಡಿಮೆ ಇರುವುದರಿಂದ ಕಾಳಸಂತೆಯ ಖದೀಮರ ಪಾಲಾಗಿ ಅತಿ ಹೆಚ್ಚು ಬೆಲೆಗೆ ಸೇಲ್ ಆಗ್ತಿದೆ.
ಈ ಮಧ್ಯೆ, ದೇಶದ ಮತ್ತೊಂದು ಔಷಧಾ ತಯಾರಿಕಾ ಕಂಪನಿಯಾದ ಮೈಲಾನ್ ರೆಮಡಿಸಿವಿರ್ ಔಷಧಿಯನ್ನ ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಔಷಧಿಗೆ ಸರ್ಕಾರದ DCGI ಸಂಸ್ಥೆ ಈಗಾಗಲೇ ಒಪ್ಪಿಗೆ ಸಹ ನೀಡಿದೆ.
ಡೆಸ್ರೆಮ್ (Desrem) ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಈ ಔಷಧಿ 100 mgಗೆ 4,800 ರೂಪಾಯಿ ಎಂದು ದರ ನಿಗದಿಯಾಗಿದೆ. ಹೀಗಾಗಿ, ಇನ್ನಾದರೂ ರೆಮ್ಡಿಸಿವಿರ್ ಔಷಧಿಯ ಕಾಳಸಂತೆ ಮಾರಾಟ ಕಡಿಮೆಯಾಗಲಿದೆ ಎಂಬುದು ಜನರ ಆಶಯ.
Published On - 5:42 pm, Mon, 20 July 20