ನಾಗಾಲ್ಯಾಂಡ್‌ ತಾಪಿ ಉಪಚುನಾವಣೆ: ಎನ್‌ಡಿಪಿಪಿ ಅಭ್ಯರ್ಥಿ ವಾಂಗ್‌ಪಾಂಗ್ ಕೊನ್ಯಾಕ್ ಗೆಲುವು

|

Updated on: Dec 03, 2023 | 12:04 PM

ನಾಗಾಲ್ಯಾಂಡ್‌ನ ತಾಪಿ ವಿಧಾನಸಭಾ ಕ್ಷೇತ್ರಕ್ಕೂ ಉಪಚುನಾವಣೆ ನಡೆದಿದೆ. ಇದೀಗ ಅದರ ಫಲಿತಾಂಶ ಹೊರಬಿದಿದ್ದು, ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಎನ್‌ಡಿಪಿಪಿ) ಅಭ್ಯರ್ಥಿ ವಾಂಗ್‌ಪಾಂಗ್ ಕೊನ್ಯಾಕ್ ಗೆಲುವು ಸಾಧಿಸಿದ್ದಾರೆ.

ನಾಗಾಲ್ಯಾಂಡ್‌ ತಾಪಿ ಉಪಚುನಾವಣೆ: ಎನ್‌ಡಿಪಿಪಿ ಅಭ್ಯರ್ಥಿ ವಾಂಗ್‌ಪಾಂಗ್ ಕೊನ್ಯಾಕ್ ಗೆಲುವು
ಸಾಂದರ್ಭಿಕ ಚಿತ್ರ
Follow us on

ಐದು ರಾಜ್ಯಗಳ ವಿಧಾನಸಭೆಗೆ ಚುನಾವಣೆ ಜತೆಗೆ ನಾಗಾಲ್ಯಾಂಡ್‌ನ (Nagaland) ತಾಪಿ ವಿಧಾನಸಭಾ ಕ್ಷೇತ್ರಕ್ಕೂ ಉಪಚುನಾವಣೆ ನಡೆದಿದೆ. ಇದೀಗ ಅದರ ಫಲಿತಾಂಶ ಹೊರಬಿದಿದ್ದು, ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಎನ್‌ಡಿಪಿಪಿ) ಅಭ್ಯರ್ಥಿ ವಾಂಗ್‌ಪಾಂಗ್ ಕೊನ್ಯಾಕ್ ಗೆಲುವು ಸಾಧಿಸಿದ್ದಾರೆ. ನಾಗಾಲ್ಯಾಂಡ್‌ನ ಸೋಮ ಜಿಲ್ಲೆಯಲ್ಲಿ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ಆರಂಭವಾಯಿತು. ನವೆಂಬರ್ 7 ರಂದು 23 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು.

ಆಗಸ್ಟ್ 28 ರಂದು ಎನ್‌ಡಿಪಿಪಿ ಶಾಸಕ ನೊಕೆ ವಾಂಗ್ನಾವ್ ನಿಧನರಾದ ಕಾರಣ ಈ ಉಪಚುನಾವಣೆ ನಡೆಸಲಾಗಿತ್ತು. ಆಡಳಿತಾರೂಢ ಎನ್‌ಡಿಪಿಪಿ ಅಭ್ಯರ್ಥಿ ವಾಂಗ್‌ಪಾಂಗ್ ಕೊನ್ಯಾಕ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ವಾಂಗ್ಲೆಂ ಕೊನ್ಯಾಕ್​​​​​ ಕಣದಲ್ಲಿದ್ದರು.

ಇದನ್ನೂ ಓದಿ: ನಾಗಾಲ್ಯಾಂಡ್ ಸಚಿವರು ವಡಾ ಪಾವ್​ ಮಾಡಿದ ವಿಡಿಯೋ ವೈರಲ್

ಉಪಚುನಾವಣೆಯಲ್ಲಿ 7,788 ಪುರುಷರು ಮತ್ತು 7,468 ಮಹಿಳೆಯರು ಸೇರಿದಂತೆ ಒಟ್ಟು 15,256 ಮತ ಚಲಾವಣೆ ನಡೆದಿದ್ದು. 23 ಮತಗಟ್ಟೆಗಳ ಪೈಕಿ ಏಳು ಮತಗಟ್ಟೆಗಳನ್ನು ದುರ್ಬಲ ಮತ್ತು ಆರು ನಿರ್ಣಾಯಕ ಎಂದು ವರ್ಗೀಕರಿಸಲಾಗಿದೆ. ಶೇಕಡಾ 96.25 ರಷ್ಟು ಮತದಾನ ನಡೆದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ