ಸುಮಾರು 11 ವರ್ಷಗಳ ನಂತರ ನರೇಂದ್ರ ದಾಭೋಲ್ಕರ್(Narendra Dabholkar) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪು ನೀಡಿದೆ. ನ್ಯಾಯಾಲಯ ಇಬ್ಬರು ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ. ಮೂವರು ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ.
ಸಚಿನ್ ಅಂದುರೆ ಮತ್ತು ಶರದ್ ಕಲಾಸ್ಕರ್ ಅವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಮಹಾರಾಷ್ಟ್ರ ಅಂಧಶ್ರದ್ಧ ನಿರ್ಮೂಲನ ಸಮಿತಿಯ ಮುಖ್ಯಸ್ಥ ನರೇಂದ್ರ ದಾಭೋಲ್ಕರ್ ಅವರನ್ನು 20 ಆಗಸ್ಟ್ 2013 ರಂದು ಪುಣೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಪುಣೆಯಲ್ಲಿ ದಾಭೋಲ್ಕರ್ ಹತ್ಯೆಯ ನಂತರ, ಫೆಬ್ರವರಿ 2015 ರಲ್ಲಿ ಗೋವಿಂದ್ ಪನ್ಸಾರೆ ಮತ್ತು ಅದೇ ವರ್ಷ ಆಗಸ್ಟ್‌ನಲ್ಲಿ ಕೊಲ್ಲಾಪುರದಲ್ಲಿ ಎಂಎಂ ಕಲಬುರ್ಗಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಇದಲ್ಲದೆ, ಗೌರಿ ಲಂಕೇಶ್ ಅವರನ್ನು ಸೆಪ್ಟೆಂಬರ್ 2017 ರಲ್ಲಿ ಬೆಂಗಳೂರಿನ ತಮ್ಮ ಮನೆಯ ಹೊರಗೆ ಗುಂಡಿಕ್ಕಿ ಕೊಲ್ಲಲಾಗಿತ್ತು.
ಬಾಂಬೆ ಹೈಕೋರ್ಟಿನ ಆದೇಶದ ನಂತರ 2014 ರಲ್ಲಿ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ( ಸಿಬಿಐ) ತನಿಖೆಯನ್ನು ವಹಿಸಿಕೊಂಡಿತು ಮತ್ತು ಜೂನ್ 2016 ರಲ್ಲಿ ಹಿಂದೂ ಬಲಪಂಥೀಯ ಸಂಘಟನೆಯಾದ ಸನಾತನ ಸಂಸ್ಥೆಗೆ ಸಂಬಂಧಿಸಿದ ಇಎನ್ಟಿ ಶಸ್ತ್ರಚಿಕಿತ್ಸಕ ಡಾ.ವೀರೇಂದ್ರ ಸಿಂಗ್ ತಾವ್ಡೆ ಅವರನ್ನು ಬಂಧಿಸಿತು.
ಮತ್ತಷ್ಟು ಓದಿ: ಶಿವಮೊಗ್ಗ ಗ್ಯಾಂಗ್ವಾರ್ನಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ಸಾವು, ಸಾವಿನ ಸಂಖ್ಯೆ 3ಕ್ಕೆ ಏರಿಕೆ
ಪ್ರಾಸಿಕ್ಯೂಷನ್ ಪ್ರಕಾರ, ತಾವಡೆ ಕೊಲೆಯ ಮಾಸ್ಟರ್‌ಮೈಂಡ್‌ಗಳಲ್ಲಿ ಒಬ್ಬರು. ನರೇಂದ್ರ ದಾಭೋಲ್ಕರ್ ಮಹಾರಾಷ್ಟ್ರದ ಸಾಮಾಜಿಕ ಕಾರ್ಯಕರ್ತರಾಗಿದ್ದರು. 1 ನವೆಂಬರ್ 1945 ರಂದು ಜನಿಸಿದ ಅವರು ಗಾಂಧಿವಾದಿ ಸಮಾಜವಾದಿ ದೇವದತ್ತ್ ದಾಭೋಲ್ಕರ್ ಅವರ ಕಿರಿಯ ಸಹೋದರರಾಗಿದ್ದರು.
ಮೀರಜ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿದರು. ಇದಾದ ನಂತರ ದಾಭೋಲ್ಕರ್ ರಾಷ್ಟ್ರೀಯ ಸೇವಾದಳದೊಂದಿಗೆ ಸಂಪರ್ಕಕ್ಕೆ ಬಂದರು ಮತ್ತು ಅದರ ಸಿದ್ಧಾಂತದಿಂದ ಹೆಚ್ಚು ಪ್ರಭಾವಿತರಾದರು. ಸಮಾಜದಲ್ಲಿ ಪ್ರಚಲಿತದಲ್ಲಿರುವ ಮೂಢನಂಬಿಕೆಯನ್ನು ಎದುರಿಸಲು ಮತ್ತು ವೈಚಾರಿಕತೆ ಮತ್ತು ವೈಜ್ಞಾನಿಕ ತರ್ಕವನ್ನು ತರುವ ಉದ್ದೇಶದಿಂದ ಅವರು ನಂತರ ರಾಷ್ಟ್ರೀಯ ಸೇವಾ ದಳಕ್ಕೆ ಸೇರಿದರು.
ದಾಭೋಲ್ಕರ್ 12 ವರ್ಷಗಳ ಕಾಲ ವೈದ್ಯರಾಗಿ ಕೆಲಸ ಮಾಡಿದರು. ಸಮಾಜಸೇವೆಯ ಒಲವು ಹೆಚ್ಚಾದಂತೆ ಅವರು ತಮ್ಮ ವೃತ್ತಿಯನ್ನು ಸಂಪೂರ್ಣವಾಗಿ ತೊರೆದರು. ಆರಂಭದಲ್ಲಿ, ಪ್ರೊಫೆಸರ್ ಶ್ಯಾಮ್ ಮಾನವ್ ನೇತೃತ್ವದ ಅಖಿಲ ಭಾರತ ಅಂಧಾಶ್ರದ್ಧಾ ನಿರ್ಮೂಲನ್ ಸಮಿತಿ (ABANS) ಗೆ ದಾಭೋಲ್ಕರ್ ಸೇರಿಕೊಂಡರು. ಆದಾಗ್ಯೂ, ಪ್ರೊಫೆಸರ್ ಮಾನವ್ ಅವರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ದಾಭೋಲ್ಕರ್ ಕೆಲವು ವರ್ಷಗಳ ನಂತರ ABANS ಅನ್ನು ತೊರೆದರು. ಇದರ ನಂತರ ದಾಭೋಲ್ಕರ್ ಅವರು 2013 ರಲ್ಲಿ ಮೃತಪಟ್ಟರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ