ವಾರಾಣಸಿಯಲ್ಲಿ ನರೇಂದ್ರ ಮೋದಿಗೆ ಭವ್ಯ ಸ್ವಾಗತ; ವಿಕಸಿತ ಭಾರತ ಸಂಕಲ್ಪ ಯಾತ್ರೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ

|

Updated on: Dec 17, 2023 | 7:30 PM

Narendra Modi @ Varanasi: ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 17ರಂದು ವಾರಾಣಸಿಗೆ ಭೇಟಿ ನೀಡಿದ್ದಾರೆ. ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ನರೇಂದ್ರ ಮೋದಿ ಅವರಿಗೆ ಕಾಶಿ ಜನರು ಭವ್ಯ ಸ್ವಾಗತ ನೀಡಿದ್ದಾರೆ. ವಿಕಸಿತ್ ಯಾತ್ರೆಯಲ್ಲಿ ಪ್ರಧಾನಿ ಜೊತೆ ಉ.ಪ್ರ. ಸಿಎಂ ಭಾಗಿಯಾದರು. ಇಂದು ಮತ್ತು ನಾಳೆ ಪ್ರಧಾನಿಗಳು ತಮ್ಮ ಸ್ವಕ್ಷೇತ್ರವಾದ ವಾರಾಣಸಿಯಲ್ಲಿ ಎರಡು ದಿನ ಭೇಟಿಯಲ್ಲಿದ್ದಾರೆ.

ವಾರಾಣಸಿಯಲ್ಲಿ ನರೇಂದ್ರ ಮೋದಿಗೆ ಭವ್ಯ ಸ್ವಾಗತ; ವಿಕಸಿತ ಭಾರತ ಸಂಕಲ್ಪ ಯಾತ್ರೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ
ನರೇಂದ್ರ ಮೋದಿಗೆ ವಾರಾಣಸಿಯಲ್ಲಿ ಸ್ವಾಗತ
Follow us on

ವಾರಾಣಸಿ, ಡಿಸೆಂಬರ್ 17: ಗುಜರಾತ್​ನಲ್ಲಿ ಸೂರತ್​ನಲ್ಲಿ ಡೈಮಂಡ್ ಬೋರ್ಸ್ ಉದ್ಘಾಟನೆ ಬಳಿಕ ವಾರಾಣಸಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ (Narendra Modi Varanasi visit) ಭವ್ಯವಾದ ಸ್ವಾಗತ ಸಿಕ್ಕಿತು. ವಿಮಾನ ನಿಲ್ದಾಣದಿಂದ ನಗರದವರೆಗೂ ಪ್ರಧಾನಿ ರೋಡ್ ಶೋ ನಡೆಯಿತು. ನರೇಂದ್ರ ಮೋದಿ ಹಾದಿಯುದ್ಧಕ್ಕೂ ಜನರು ಪುಷ್ಪಾರ್ಚಣೆ ಮಾಡಿ ಸ್ವಾಗತಿಸಿದರು. ತಮ್ಮ ಸ್ವಕ್ಷೇತ್ರವೂ ಆದ ವಾರಾಣಸಿಯಲ್ಲಿ ಪ್ರಧಾನಿ ಎರಡು ದಿನದ ಭೇಟಿಯಲ್ಲಿದ್ದಾರೆ. ಈ ವೇಳೆ ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯಲ್ಲಿ ಪ್ರಧಾನಿ ಪಾಲ್ಗೊಂಡರು.

ವಾರಾಣಸಿಯ ಕಟಿಂಗ್ ಮೆಮೋರಿಯಲ್ ಇಂಟರ್ ಕಾಲೇಜಿನಲ್ಲಿ ನಡೆದ ಯಾತ್ರೆಯ ಪ್ರದರ್ಶನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪಾಲ್ಗೊಂಡರು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಈ ಯಾತ್ರೆಯ ಯಶಸ್ಸಿಗೆ ಕಾರಣವಾಗಿರುವ ಎಲ್ಲಾ ಜನರಿಗೂ ಧನ್ಯವಾದ ಹೇಳಿದರು.

ಇದನ್ನೂ ಓದಿ: ಭಾರತ-ಪಾಕಿಸ್ತಾನ 1971ರ ಯುದ್ಧ ಚೆಸ್ ಆಟದಂತಿತ್ತಾ? ಭಾರತದ ಆ ಒಂದು ನಡೆಗೆ 93,000 ಪಾಕ್ ಸೈನಿಕರು ಶರಣಾಗತಿ; ಯಾವುದದು ನಡೆ?

‘ನಮ್ಮ ದೇಶದಲ್ಲಿ ಹಲವು ಸರ್ಕಾರಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ನನ್ನ ಅನುಭವದ ಪ್ರಕಾರ, ಬಹಳ ಮುಖ್ಯವಾದ ಸಂಗತಿ ಎಂದರೆ, ಸರ್ಕಾರೀ ಯೋಜನೆಗಳು ಸರಿಯಾದ ಸಮಯಕ್ಕೆ ಜನರನ್ನು ಯಾವ ತಡೆ ಇಲ್ಲದೇ ತಲುಪುವುದಾಗಿದೆ’ ಎಂದು ಹೇಳಿದರು.

ನರೇಂದ್ರ ಮೋದಿ ಅವರು ಇಂದು ಮತ್ತು ನಾಳೆ ಇನ್ನೂ ಕೆಲ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಕಾಶಿ ತಮಿಳ್ ಸಂಗಮಮ್ 2023ಯ ಎರಡನೇ ಹಂತದ ಕಾರ್ಯಕ್ರಮವನ್ನು ಇಂದು ಉದ್ಘಾಟಿಸಿದ್ದಾರೆ.

ಇದನ್ನೂ ಓದಿ: ಗುಜರಾತ್​ನಲ್ಲಿ ವಿಶ್ವದ ಅತಿದೊಡ್ಡ ವಜ್ರ ವ್ಯಾಪಾರ ಕೇಂದ್ರ ಉದ್ಘಾಟಿಸಿದ ಪಿಎಂ ನರೇಂದ್ರ ಮೋದಿ; ಡೈಮಂಡ್ ಬೋರ್ಸ್ ಬಗ್ಗೆ ತಿಳಿಯಬೇಕಾದ ಸಂಗತಿಗಳು

ನಾಳೆ ಸೋಮವಾರ (ಡಿ. 18) ಸರ್ವವೇದ ಮಹಾಮಂದಿರಕ್ಕೆ ಭೇಟಿ ನೀಡಿ ಅಲ್ಲಿ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. 20,000 ಕೋಟಿ ರೂ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಅವರು ಅಡಿಗಲ್ಲು ಹ ಆಕಲಿದ್ದಾರೆ. ವಾರಾಣಸಿಯಿಂದ ಇನ್ನೊದು ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿಗೆ ಚಾಲನೆ ಕೊಡಲಿದ್ದಾರೆ. ಕನ್ಯಾಕುಮಾರಿ ವಾರಾಣಸಿ ತಮಿಳ್ ಸಂಗಮಮ್ ರೈಲನ್ನೂ ಉದ್ಘಾಟಿಸಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:28 pm, Sun, 17 December 23