ಗುಜರಾತ್ನಲ್ಲಿ ವಿಶ್ವದ ಅತಿದೊಡ್ಡ ವಜ್ರ ವ್ಯಾಪಾರ ಕೇಂದ್ರ ಉದ್ಘಾಟಿಸಿದ ಪಿಎಂ ನರೇಂದ್ರ ಮೋದಿ; ಡೈಮಂಡ್ ಬೋರ್ಸ್ ಬಗ್ಗೆ ತಿಳಿಯಬೇಕಾದ ಸಂಗತಿಗಳು
Surat Diamond Bourse: ವಿಶ್ವದಲ್ಲೇ ಅತಿ ಹೆಚ್ಚು ಆಫೀಸ್ ಸ್ಪೇಸ್ ಹೊಂದಿರುವ ಸೂರತ್ ಡೈಮಂಡ್ ಬೋರ್ಸ್ ಎಂಬ ವಜ್ರ ವಹಿವಾಟು ಕೇಂದ್ರವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಇದರಲ್ಲಿ 4,200 ಕಚೇರಿಗಳನ್ನು ಒಳಗೊಳ್ಳುವಷ್ಟು ಸ್ಥಳಾವಕಾಶ ಇದೆ. ಅಮೆರಿಕದ ಪೆಂಟಗಾನ್ಗಿಂತಲೂ ಇದು ದೊಡ್ಡದಾಗಿದೆ. ಮುಂಬೈನಲ್ಲಿ ಇದ್ದ ಡೈಮಂಡ್ ವ್ಯಾಪಾರ ಕೇಂದ್ರವನ್ನು ಸೂರತ್ಗೆ ವರ್ಗಾಯಿಸಲಾಗುತ್ತಿದೆ. ಸೂರತ್ನಲ್ಲೇ ವಜ್ರ ತಯಾರಿಕೆ ಆಗುವುದರಿಂದ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ.
ಸೂರತ್, ಡಿಸೆಂಬರ್ 17: ಪ್ರಧಾನಿ ನರೇಂದ್ರ ಮೋದಿ ಇಂದು ಸೂರತ್ನಲ್ಲಿ ವಿಶ್ವದ ಅತಿದೊಡ್ಡ ಡೈಮಂಡ್ ವಹಿವಾಟು ಕೇಂದ್ರ (ಡೈಮಂಡ್ ಬೋರ್ಸ್) ಹಾಗೂ ಸೂರತ್ ಏರ್ಪೋರ್ಟ್ನ ಹೊಸ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿದ್ದಾರೆ. ಸೂರತ್ ಡೈಮಂಡ್ ಬೋರ್ಸ್ (SDB- Surat Diamond Bourse) ವಿಶ್ವದ ಅತಿದೊಡ್ಡ ಅಂತಾರಾಷ್ಟ್ರೀಯ ವಜ್ರ ಮತ್ತು ಆಭರಣ ವ್ಯಾಪಾರ ಕೇಂದ್ರ ಎನಿಸಲಿದೆ. ಇದರಲ್ಲಿ ರಫ್ ಮತ್ತು ಪಾಲಿಶ್ ಡೈಮಂಡ್ಗಳು ಹಾಗೂ ವಜ್ರ ಆಭರಣಗಳ ವ್ಯಾಪಾರ ನಡೆಯಲಿದೆ. ಭಾರತದಲ್ಲಿ ವಜ್ರ ವ್ಯಾಪಾರ ಈವರೆಗೆ ಹೆಚ್ಚು ಇದ್ದದ್ದು ಮುಂಬೈನಲ್ಲಿ. ಈಗ ಸೂರತ್ ಭಾರತದ ಹೊಸ ಡೈಮಂಡ್ ಹಬ್ ಎನಿಸಲಿದೆ.
ಸೂರತ್ ವಜ್ರ ವ್ಯಾಪಾರ ಕೇಂದ್ರದಲ್ಲಿ ಒಟ್ಟು 4,200 ಟ್ರೇಡಿಂಗ್ ಆಫೀಸ್ಗಳನ್ನು ಒಳಗೊಳ್ಳಲು ಸ್ಥಳಾವಕಾಶ ಇದೆ. ಅಮೆರಿಕದ ಪೆಂಟಗಾನ್ಗಿಂತಲೂ ಇದು ಬೃಹತ್ ಆದುದು (biggest office space) ಎನ್ನಲಾಗಿದೆ.
ಇದನ್ನೂ ಓದಿ: Semiconductors: ಭಾರತ ಸೆಮಿಕಂಡಕ್ಟರ್ ದೈತ್ಯನಾಗಲು ಬೆಂಗಳೂರಿನ ಸಾವಿರಾರು ಚಿಪ್ ಡಿಸೈನರ್ಗಳ ಶಕ್ತಿ: ಕ್ರಿಸ್ ಮಿಲ್ಲರ್
ಮುಂಬೈ ಬಿಟ್ಟು ಸೂರತ್ನಲ್ಯಾಕೆ ಡೈಮಂಡ್ ಬೋರ್ಸ್?
ಮುಂಬೈನಲ್ಲಿ ವಹಿವಾಟಾಗುವ ವಜ್ರವನ್ನು ಸೂರತ್ನಲ್ಲೇ ತಯಾರಿಸಲಾಗುತ್ತದೆ. ಸೂರತ್ನಲ್ಲಿ ಸರಿಯಾದ ಅಂತಾರಾಷ್ಟ್ರೀಯ ವಹಿವಾಟು ವ್ಯವಸ್ಥೆ ಇಲ್ಲದಿರುವ ಕಾರಣ ವ್ಯಾಪಾರಿಗಳು ತಮ್ಮ ವಜ್ರವನ್ನು ರೈಲುಗಳ ಮೂಲಕ ಮುಂಬೈಗೆ ಸಾಗಿಸುತ್ತಾರೆ. ಈ ವೇಳೆ ನಾಲ್ಕೈದು ಗಂಟೆ ವ್ಯಯವಾಗುತ್ತದೆ. ಜೊತೆಗೆ ಭದ್ರತೆಯ ಸಮಸ್ಯೆ.
ಹಾಗೆಯೇ, ಮುಂಬೈನಲ್ಲಿ ಆಫೀಸ್ ಸ್ಥಳ ಬಹಳ ದುಬಾರಿ. ದಿನೇ ದಿನೇ ರಿಯಲ್ ಎಸ್ಟೇಟ್ ಬೆಲೆ ಗಗನಕ್ಕೇರುತ್ತಲೇ ಇದೆ. ಈ ಕಾರಣಕ್ಕೆ ಡೈಮಂಡ್ ತಯಾರಿಕೆ ಆಗುವ ಸೂರತ್ನಲ್ಲೇ ಅಂತಾರಾಷ್ಟ್ರೀಯ ಡೈಮಂಡ್ ಕೇಂದ್ರ ಸ್ಥಾಪಿಸಲಾಗಿದೆ.
ಇದನ್ನೂ ಓದಿ: Photo Gallery: ಪ್ರಧಾನಿ ಮೋದಿಯವರಿಂದ ವಿಶ್ವದ ಅತಿ ದೊಡ್ಡ ‘ಸೂರತ್ ಡೈಮಂಡ್ ಬೋರ್ಸ್’ ಕಟ್ಟಡ ಉದ್ಘಾಟನೆ
ಈ ಸೂರತ್ ಡೈಮಂಡ್ ಬೋರ್ಸ್ ಅನ್ನು 66 ಲಕ್ಷ ಚದರ ಅಡಿ ವಿಸ್ತೀರ್ಣ ಜಾಗದಲ್ಲಿ ಕಟ್ಟಲಾಗಿದೆ. ಇದರಲ್ಲಿರುವ ಆಫೀಸ್ ಸ್ಪೇಸ್ ಅಮೆರಿಕದ ಪೆಂಟಗಾನ್ಗಿಂತಲೂ ದೊಡ್ಡದೆನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ