ರಾಜಸ್ಥಾನ: ಚಲಿಸುತ್ತಿರುವ ಬಸ್​ನಲ್ಲಿ ಇಬ್ಬರು ಚಾಲಕರಿಂದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಚಲಿಸುತ್ತಿರುವ ಬಸ್​ನಲ್ಲಿ ಇಬ್ಬರು ಚಾಲಕರು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಬೆಳಕಿಗೆ ಬಂದಿದೆ. ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದೆ, ಜೈಪುರ ಪೊಲೀಸರು ಎರಡನೇ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕನೋಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡಿಸೆಂಬರ್ 9-10 ರ ಮಧ್ಯರಾತ್ರಿ ಈ ಘಟನೆ ನಡೆದಿದೆ.

Image Credit source: India Today
Follow us
ನಯನಾ ರಾಜೀವ್
|

Updated on: Dec 17, 2023 | 2:14 PM

ಚಲಿಸುತ್ತಿರುವ ಬಸ್​ನಲ್ಲಿ ಇಬ್ಬರು ಚಾಲಕರು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಬೆಳಕಿಗೆ ಬಂದಿದೆ. ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದೆ, ಜೈಪುರ ಪೊಲೀಸರು ಎರಡನೇ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕನೋಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡಿಸೆಂಬರ್ 9-10 ರ ಮಧ್ಯರಾತ್ರಿ ಈ ಘಟನೆ ನಡೆದಿದೆ.

ನಾವು ಆರೋಪಿಗಳಲ್ಲಿ ಒಬ್ಬನನ್ನು ಆರಿಫ್ ಖಾನ್ (22) ಎಂದು ಗುರುತಿಸಿದ್ದೇವೆ ಮತ್ತು ಎರಡನೇ ಶಂಕಿತ ಲಲಿತ್ ಕುಮಾರ್ (24) ಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರಕ್ಕಾಗಿ ಎಫ್‌ಐಆರ್ ದಾಖಲಿಸಲಾಗಿದೆ. ಯುವತಿ ತನ್ನ ಚಿಕ್ಕಪ್ಪನನ್ನು ಭೇಟಿಯಾಗಲು ಉತ್ತರ ಪ್ರದೇಶದಿಂದ ಜೈಪುರಕ್ಕೆ ಪ್ರಯಾಣಿಸಿದ್ದಳು, ಅವರು ಹೊಲಿಗೆ ಕಂಪನಿಯಲ್ಲಿ ಕೆಲಸ ನೀಡುವುದಾಗಿ ಭರವಸೆ ನೀಡಿದ್ದರು.

ಯುವತಿ ಕಾನ್ಪುರದಲ್ಲಿ ಬಸ್​ ಹತ್ತಿದ್ದಳು, ತುಂಬಿದ ಬಸ್​ನಲ್ಲಿ ಪ್ರಯಾಣಿಸುತ್ತಿದ್ದಳು, ಜಾಗವಿಲ್ಲದ ಕಾರಣ ಡ್ರೈವರ್​ ಕ್ಯಾಬಿನ್​ನಲ್ಲಿ ಮಲಗುವಂತೆ ಕೇಳಿದ್ದರು. ಬಸ್​ನಲ್ಲಿರುವ ಇತರೆ ಪ್ರಯಾಣಿಕರಿಗೆ ಶಬ್ಧ ಕೇಳಿಸದಂತೆ ಮ್ಯೂಸಿಕ್​ ದೊಡ್ಡದಾಗಿ ಹಾಕಿದ್ದರು. ಅಲ್ಲೇ ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಓದಿ: ದೆಹಲಿ: 6 ಸ್ನೇಹಿತರಿಂದ ಅಪ್ರಾಪ್ತ ಬಾಲಕನ ಕೊಲೆ

ಕನೋಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಸ್ಸು ಹಾದು ಹೋಗುತ್ತಿದ್ದಾಗ ಕೆಲವು ಪ್ರಯಾಣಿಕರಿಗೆ ಕೂಗು ಕೇಳಿಸಿತ್ತು, ಪೆಟ್ರೋಲ್ ಪಂಪ್ ಬಳಿ ಬಸ್​ ನಿಲ್ಲಿಸಿದಾಗ ಪೊಲೀಸರು ಬಂದು ಆರೋಪಿಯನ್ನು ಬಂಧಿಸಿದ್ದಾರೆ ಮತ್ತೊಬ್ಬ ಪರಾರಿಯಾಗಿದ್ದಾನೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು

ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್

ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ

ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್

'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್

ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ

ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ

ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್