ಆಸ್ಸಾಂನಲ್ಲಿ ಪ್ರಧಾನಿ ಮೋದಿ: 1 ಲಕ್ಷ ಫಲಾನುಭವಿಗಳಿಗೆ ಭೂ ಮಾಲೀಕತ್ವದ ಪ್ರಮಾಣ ಪತ್ರ ವಿತರಣೆ

| Updated By: ಸಾಧು ಶ್ರೀನಾಥ್​

Updated on: Jan 23, 2021 | 12:56 PM

ಆಸ್ಸಾಂನಲ್ಲಿ 2016ರಲ್ಲಿ ಸುಮಾರು 5.75 ಲಕ್ಷ ಭೂ ಮಾಲೀಕತ್ವ ಹೊಂದಿಲ್ಲದ ಕುಟುಂಬಗಳು ಇದ್ದವು. 2016ರಿಂದ ಇಲ್ಲಿಯವರೆಗೆ ಒಟ್ಟು 2.28 ಲಕ್ಷ ಕು

ಆಸ್ಸಾಂನಲ್ಲಿ ಪ್ರಧಾನಿ ಮೋದಿ: 1 ಲಕ್ಷ ಫಲಾನುಭವಿಗಳಿಗೆ ಭೂ ಮಾಲೀಕತ್ವದ ಪ್ರಮಾಣ ಪತ್ರ ವಿತರಣೆ
ಆಸ್ಸಾಂನಲ್ಲಿ ಭೂ ಮಾಲೀಕತ್ವದ ಸರ್ಟಿಫಿಕೇಟ್ ವಿತರಿಸಿದ ಪ್ರಧಾನಿ ಮೋದಿ
Follow us on

ಶಿವ್​ಸಾಗರ್: ಪ್ರಧಾನಿ ನರೇಂದ್ರ ಮೋದಿ ಇಂದು ಆಸ್ಸಾಂಗೆ ಭೇಟಿ ನೀಡಿದರು. ಶಿವ್​ಸಾಗರ್​ದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಫಲಾನುಭವಿಗಳಿಗೆ ಭೂಮಿ ಹಂಚಿಕೆ ಪ್ರಮಾಣ ಪತ್ರ (ಪಟ್ಟಾ) ವಿತರಿಸಿದರು. ಈ ಅಭಿಯಾನದಡಿ ಸುಮಾರು 1 ಲಕ್ಷ ಮಂದಿಗೆ ಅವರ ಭೂ ಮಾಲೀಕತ್ವದ ಪಟ್ಟಾವನ್ನು ಪಡೆದರು.

ಸ್ವಾತಂತ್ರ್ಯ ನಂತರವೂ ಆಸ್ಸಾಂನಲ್ಲಿ ಲಕ್ಷಾಂತರ ಆದಿವಾಸಿಗಳು, ಸ್ಥಳೀಯ ಆಸ್ಸಾಂ ಕುಟುಂಬಗಳು ಭೂ ಮಾಲೀಕತ್ವದ ಹಕ್ಕಿನಿಂದ ವಂಚಿತರಾಗಿದ್ದಾರೆ. ಅವರೆಲ್ಲರಿಗೂ ಭೂ ಮಾಲೀಕತ್ವ ಹಕ್ಕು ನೀಡುವ ಸಲುವಾಗಿ, ಇಲ್ಲಿನ ರಾಜ್ಯ ಸರ್ಕಾರದ ಜತೆ ನಾವು ವಿಶೇಷ ಕಾರ್ಯಕ್ರಮ ರೂಪಿಸಿದ್ದೇವೆ. ಅದರಡಿ ಫಲಾನುಭವಿಗಳಿಗೆ ಭೂ ಹಂಚಿಕೆ ಪ್ರಮಾಣ ಪತ್ರ ವಿತರಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.

ಆಸ್ಸಾಂನಲ್ಲಿ 2016ರಲ್ಲಿ ಸುಮಾರು 5.75 ಲಕ್ಷ ಭೂ ಮಾಲೀಕತ್ವ ಹೊಂದಿಲ್ಲದ ಕುಟುಂಬಗಳು ಇದ್ದವು. 2016ರಿಂದ ಇಲ್ಲಿಯವರೆಗೆ ಒಟ್ಟು 2.28 ಲಕ್ಷ ಕುಟುಂಬಗಳಿಗೆ ಭೂ ಪ್ರಮಾಣ ಪತ್ರ ಹಂಚಿಕೆ ಮಾಡಲಾಗಿದೆ. ಹಾಗೇ ಈ ಪ್ರಕ್ರಿಯೆ ಮುಂದುವರಿಯುತ್ತದೆ ಎಂದು ಪ್ರಧಾನ ಮಂತ್ರಿ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ. ಹಾಗೇ, ಇಷ್ಟು ಪ್ರಮಾಣದಲ್ಲಿ ಭೂಮಿ ಪಟ್ಟಾ ವಿತರಣೆ ಮಾಡಲು ಸಾಧ್ಯವಾಗಿದ್ದು, ಪ್ರಧಾನಿ ಮೋದಿಯವರಿಂದ. ಅವರಿಗೆ ಕೃತಜ್ಞತೆ ಎಂದು ಆಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್​ ತಿಳಿಸಿದ್ದಾರೆ.​

ಸುಭಾಷ್‌ ಚಂದ್ರ ಬೋಸ್​ 125ನೇ ಜಯಂತಿ: ಟ್ವೀಟ್​ ಮೂಲಕ ಸ್ಮರಿಸಿದ ಗಣ್ಯರು