ಸುಭಾಷ್​ಚಂದ್ರ ಬೋಸ್​ 125ನೇ ಜಯಂತಿ: ಶಂಖನಾದ ಮಾಡಿ ಮಮತಾ ಬ್ಯಾನರ್ಜಿ ಪಾದಯಾತ್ರೆ

ಇಂದು ಬೆಳಗ್ಗೆ ಟ್ವೀಟ್ ಮಾಡಿದ ಮಮತಾ ಬ್ಯಾನರ್ಜಿ, ಸುಭಾಷ್ ಚಂದ್ರ ಬೋಸ್​ರ ಜನ್ಮದಿನವನ್ನು ಪರಾಕ್ರಮ ದಿವಸ್​ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದನ್ನು ವಿರೋಧಿಸಿದರು. ನನಗೆ ಈ ಪರಾಕ್ರಮ ದಿವಸ್​ ಏನೆಂಬುದು ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಸುಭಾಷ್​ಚಂದ್ರ ಬೋಸ್​ 125ನೇ ಜಯಂತಿ: ಶಂಖನಾದ ಮಾಡಿ ಮಮತಾ ಬ್ಯಾನರ್ಜಿ ಪಾದಯಾತ್ರೆ
ಶಂಖನಾದ ಮಾಡಿ, ಪಾದಯಾತ್ರೆ ಪ್ರಾರಂಭಿಸಿದ ಮಮತಾ ಬ್ಯಾನರ್ಜಿ
Lakshmi Hegde

| Edited By: sadhu srinath

Jan 23, 2021 | 2:11 PM

ಕೋಲ್ಕತ್ತಾ: ಸದ್ಯ ಪಶ್ಚಿಮ ಬಂಗಾಳದಲ್ಲಿ ಸುಭಾಷ್​ಚಂದ್ರ ಬೋಸ್​ರ 125ನೇ ಜನ್ಮ ದಿನಾಚರಣೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ಪ್ರತಿಷ್ಠೆಯ ವಿಚಾರವಾಗಿ ಮಾರ್ಪಟ್ಟಿದೆ.

ಇಂದು ಪ್ರಧಾನಿ ನರೇಂದ್ರ ಮೋದಿಯವರು ಕೋಲ್ಕತ್ತಾಕ್ಕೆ ಭೇಟಿ ನೀಡಲಿದ್ದು, ಅದರ ಬೆನ್ನಲ್ಲೇ ಸಿಎಂ ಮಮತಾ ಬ್ಯಾನರ್ಜಿ ಶ್ಯಾಮ್ ಬಜಾರ್​ನಿಂದ ಕೋಲ್ಕತ್ತಾದ ರೆಡ್​ ರೋಡ್​ವರೆಗೆ ಸುಮಾರು 6 ಕಿಮೀ ಪಾದಯಾತ್ರೆ  ಪ್ರಾರಂಭ ಮಾಡಿದ್ದಾರೆ. ಇನ್ನು ಪಾದಯಾತ್ರೆ ಪ್ರಾರಂಭಕ್ಕೂ ಮೊದಲು ಮಮತಾ ಬ್ಯಾನರ್ಜಿ ಶಂಖನಾದ ಮಾಡಿದರು. ಬಳಿಕ ಪಕ್ಷದ ಕಾರ್ಯಕರ್ತರು, ಬೆಂಬಲಿಗರ ಜತೆ ಮೆರವಣಿಗೆ ಸಾಗಿದರು.

ಇಂದು ಬೆಳಗ್ಗೆ ಟ್ವೀಟ್ ಮಾಡಿದ ಮಮತಾ ಬ್ಯಾನರ್ಜಿ, ಸುಭಾಷ್ ಚಂದ್ರ ಬೋಸ್​ರ ಜನ್ಮದಿನವನ್ನು ಪರಾಕ್ರಮ ದಿವಸ್​ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದನ್ನು ವಿರೋಧಿಸಿದರು. ನನಗೆ ಈ ಪರಾಕ್ರಮ ದಿವಸ್​ ಏನೆಂಬುದು ಅರ್ಥವಾಗುತ್ತಿಲ್ಲ. ನಾನು ನೇತಾಜಿಯವರ ದೇಶಪ್ರೇಮದ ಬಗ್ಗೆ ಕೇಳಿದ್ದೇನೆ. ನೇತಾಜಿ ಎಂದರೆ ಅವರು ತತ್ವಶಾಸ್ತ್ರ, ಅವರೊಂದು ಭಾವನೆ.. ಧರ್ಮಗಳ ಐಕ್ಯತೆಯಲ್ಲಿ ಅವರು ನಂಬಿಕೆ ಇಟ್ಟಿದ್ದರು. ಅವರ ಜನ್ಮದಿನವನ್ನು ನಾವ್ಯಾಕೆ ದೇಶನಾಯಕ್​ ದಿವಸ್​ ಎಂದು ಘೋಷಿಸಬಾರದು? ಸುಭಾಷ್​ ಚಂದ್ರ ಬೋಸ್​ರನ್ನು ದೇಶನಾಯಕ್​ ಎಂದು ರವೀಂದ್ರನಾಥ್ ಟಾಗೋರ್​ರೇ ಕರೆದಿದ್ದರು ಎಂದು ಹೇಳಿದ್ದಾರೆ.

ಹಾಗೇ ಇಂದು ಪ್ರಧಾನಿ ನರೇಂದ್ರ ಮೋದಿಯವರು ಮುಂಬರುವ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡೇ ಪಶ್ಚಿಮಬಂಗಾಳಕ್ಕೆ ಬರುತ್ತಿದ್ದಾರೆ ಎಂದೂ ಟೀಕಿಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada