ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗದ (Research and Analysis Wing (R&AW) ಕಾರ್ಯದರ್ಶಿ ಸಮಂತ್ ಕುಮಾರ್ ಗೋಯೆಲ್ ಮತ್ತು ಗುಪ್ತಚರ ದಳದ ನಿರ್ದೇಶಕ ಅರವಿಂದ್ ಕುಮಾರ್ ಅವರ ಅಧಿಕಾರಿ ಅವಧಿಯನ್ನು ಇನ್ನೂ ಒಂದು ವರ್ಷಗಳ ಕಾಲ ಹೆಚ್ಚಿಸಿ, ಕೇಂದ್ರ ಸರ್ಕಾರ ಇಂದು ಆದೇಶ ಹೊರಡಿಸಿದೆ.
ಇವರಿಬ್ಬರೂ 1984ನೇ ಇಸ್ವಿಯ ಬ್ಯಾಚ್ನ ಐಪಿಎಸ್ ಅಧಿಕಾರಿಗಳಾಗಿದ್ದಾರೆ. ಇವರಲ್ಲಿ ಸಮಂತ್ ಕುಮಾರ್ ಗೋಯೆಲ್ ಪಂಜಾಬ್ ಕೇಡರ್ನವರಾದರೆ, ಅರವಿಂದ್ ಕುಮಾರ್ ಅಸ್ಸಾಂ-ಮೇಘಾಲಯ ಕೇಡರ್ನ ಅಧಿಕಾರಿಯಾಗಿದ್ದಾರೆ. ಇವರಿಬ್ಬರ ಅಧಿಕಾರ ಅವಧಿ 2021ರ ಜೂನ್ 30ರವರೆಗೆ ಇತ್ತು. ಇದೀಗ 2022ರ ಜೂನ್ 30ರವರೆಗೆ ಮುಂದುವರಿಯಲಿದೆ.
ಈ ಇಬ್ಬರು ಅಧಿಕಾರಿಗಳ ಕಾರ್ಯವೈಖರಿಯನ್ನು ಪರಿಗಣಿಸಿ, ಎರಡೂ ಇಲಾಖೆಗಳನ್ನು ಉತ್ತಮವಾಗಿ ನಡೆಸುವ ದೃಷ್ಟಿಯಿಂದ ಅಧಿಕಾರ ಅವಧಿ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇವರಿಬ್ಬರೂ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: 15 ದಿನಗಳ ಒಳಗೆ ನಿಯಮಪಾಲನೆ ವಿವರ ನೀಡಲು ಆನ್ಲೈನ್ ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ಸೂಚನೆ
ಸಂಪುಟ ಸಭೆಯಲ್ಲಿ ರಾಜೀನಾಮೆ ಪ್ರಸ್ತಾಪವಿಟ್ಟ ಸಚಿವ ಮಾಧುಸ್ವಾಮಿ; ಹೇ, ಸುಮ್ಮನಿರಪ್ಪ ನೀನು ಎಂದ ಸಿಎಂ