PM Modi-Sheikh Hasina bilateral meeting: ಬಾಂಗ್ಲಾದೇಶೀಯರಿಗೆ ಇ-ವೈದ್ಯಕೀಯ ವೀಸಾ ಪ್ರಾರಂಭಿಸಲಿದೆ ಭಾರತ

|

Updated on: Jun 22, 2024 | 7:06 PM

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು, "ಬಾಂಗ್ಲಾದೇಶದ 12 ನೇ ಸಂಸತ್ತಿನ ಚುನಾವಣೆಗಳು ಮತ್ತು 2024 ರ ಜನವರಿಯಲ್ಲಿ ನಮ್ಮ ಹೊಸ ಸರ್ಕಾರ ರಚನೆಯ ನಂತರ ಇದು ಯಾವುದೇ ದೇಶಕ್ಕೆ ನನ್ನ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ. ಭಾರತವು ನಮ್ಮ ಪ್ರಮುಖ ನೆರೆಯ, ವಿಶ್ವಾಸಾರ್ಹ ಸ್ನೇಹಿತ ಮತ್ತು ಪ್ರಾದೇಶಿಕ ಪಾಲುದಾರ ಎಂದು ಹೇಳಿದ್ದಾರೆ.

PM Modi-Sheikh Hasina bilateral meeting: ಬಾಂಗ್ಲಾದೇಶೀಯರಿಗೆ ಇ-ವೈದ್ಯಕೀಯ ವೀಸಾ ಪ್ರಾರಂಭಿಸಲಿದೆ ಭಾರತ
ಮೋದಿ-ಶೇಖ್ ಹಸೀನಾ
Follow us on

ದೆಹಲಿ ಜೂನ್ 22: ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು (ಶನಿವಾರ) ಬಾಂಗ್ಲಾದೇಶದ (Bangladesh) ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರೊಂದಿಗೆ ಶನಿವಾರ ಹೈದರಾಬಾದ್ ಹೌಸ್‌ನಲ್ಲಿ ದ್ವಿಪಕ್ಷೀಯ ಸಭೆ ನಡೆಸಿದ್ದಾರೆ. ಇದು ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ಹಸೀನಾ ಅವರಿಗೆ ವಿಧ್ಯುಕ್ತ ಸ್ವಾಗತ ನೀಡಿದ ನಂತರ ಇಬ್ಬರೂ ನಾಯಕರು ಹೈದರಾಬಾದ್ ಹೌಸ್‌ನಲ್ಲಿ ನಿಯೋಗ ಮಟ್ಟದ ಸಭೆಯನ್ನು ನಡೆಸಿದರು. ಇದಾದ ನಂತರ ಉಭಯ ರಾಷ್ಟ್ರಗಳ ನಾಯಕರು ತಿಳುವಳಿಕೆ ಒಪ್ಪಂದಗಳು (ಎಂಒಯುಗಳು)ಗಳಿಗೆ ಸಹಿ ಹಾಕಿದರು.

ಹೈದರಾಬಾದ್ ಹೌಸ್ ನಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು?

  •  ಕಳೆದ ಒಂದು ವರ್ಷದಲ್ಲಿ, ನಾವು ಸುಮಾರು 10 ಬಾರಿ ಭೇಟಿಯಾಗಿದ್ದೇವೆ. ಆದರೆ, ಇಂದಿನ ಸಭೆ ವಿಶೇಷವಾಗಿದೆ ಏಕೆಂದರೆ ಶೇಖ್ ಹಸೀನಾ ಅವರು ನಮ್ಮ ಸರ್ಕಾರದ ಮೂರನೇ ಅವಧಿಯಲ್ಲಿ ನಮ್ಮ ಮೊದಲ ರಾಜ್ಯ ಅತಿಥಿಯಾಗಿದ್ದಾರೆ.
  • ಇಂದು, ನಾವು ಹೊಸ ಕ್ಷೇತ್ರಗಳಲ್ಲಿ ಪಾಲುದಾರಿಕೆಗಾಗಿ ಭವಿಷ್ಯದ ದೃಷ್ಟಿಕೋನವನ್ನು ಸಿದ್ಧಪಡಿಸಿದ್ದೇವೆ. ಹಸಿರು ಸಹಭಾಗಿತ್ವ, ಡಿಜಿಟಲ್ ಪಾಲುದಾರಿಕೆ, ಬ್ಲೂ ಇಕಾನಮಿ, ಬಾಹ್ಯಾಕಾಶ ಮತ್ತು ಇತರ ಹಲವು ಕ್ಷೇತ್ರಗಳಿಗೆ ಒಪ್ಪಿಗೆಯಾದ ಸಹಕಾರದಿಂದ ಉಭಯ ದೇಶಗಳ ಯುವಕರು ಪ್ರಯೋಜನ ಪಡೆಯುತ್ತಾರೆ. ಭಾರತ್-ಬಾಂಗ್ಲಾದೇಶ ಮೈತ್ರಿ ಉಪಗ್ರಹ ನಮ್ಮ ಸಂಬಂಧಗಳಿಗನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತದೆ.
  • ವೈದ್ಯಕೀಯ ಚಿಕಿತ್ಸೆಗಾಗಿ ಬಾಂಗ್ಲಾದೇಶದಿಂದ ಭಾರತಕ್ಕೆ ಬರುವ ಜನರಿಗೆ ಭಾರತವು ಇ-ವೈದ್ಯಕೀಯ ವೀಸಾ ಸೌಲಭ್ಯವನ್ನು ಪ್ರಾರಂಭಿಸುತ್ತದೆ. ಬಾಂಗ್ಲಾದೇಶದ ವಾಯುವ್ಯ ಪ್ರದೇಶದ ಜನರ ಅನುಕೂಲಕ್ಕಾಗಿ ರಂಗ್‌ಪುರದಲ್ಲಿ ಹೊಸ ಸಹಾಯಕ ಹೈಕಮಿಷನ್ ತೆರೆಯಲು ನಾವು ಉಪಕ್ರಮವನ್ನು ತೆಗೆದುಕೊಂಡಿದ್ದೇವೆ. ಇಂದು ಸಂಜೆ ನಡೆಯುವ ಕ್ರಿಕೆಟ್ ವಿಶ್ವಕಪ್ ಪಂದ್ಯಕ್ಕೆ ಎರಡೂ ತಂಡಗಳಿಗೆ ಶುಭ ಹಾರೈಸುತ್ತೇನೆ. ಬಾಂಗ್ಲಾದೇಶದೊಂದಿಗಿನ ನಮ್ಮ ಸಂಬಂಧಗಳಿಗೆ ನಾವು ಹೆಚ್ಚಿನ ಆದ್ಯತೆ ನೀಡುತ್ತೇವೆ.
  •  ಭಾರತ ಮತ್ತು ಬಾಂಗ್ಲಾದೇಶದ ನಡುವೆ ಗಂಗಾ ನದಿಯಲ್ಲಿ ವಿಶ್ವದ ಅತಿದೊಡ್ಡ ನದಿ ವಿಹಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಗಡಿಯಾಚೆಗಿನ ಫ್ರೆಂಡ್ ಶಿಪ್ ಪೈಪ್‌ಲೈನ್ ಪೂರ್ಣಗೊಂಡಿದೆ.
  •  ಬಾಂಗ್ಲಾದೇಶವು ನಮ್ಮ ನೆರೆಹೊರೆಯ ಮೊದಲ ನೀತಿ, ಆಕ್ಟ್ ಈಸ್ಟ್ ಪಾಲಿಸಿ, ವಿಷನ್ ಸಾಗರ್ ಮತ್ತು ಇಂಡೋ-ಪೆಸಿಫಿಕ್ ವಿಷನ್‌ನ ಸಂಗಮದಲ್ಲಿದೆ. ಕಳೆದ ಒಂದು ವರ್ಷದಲ್ಲಿ ನಾವೆಲ್ಲರೂ ಸೇರಿ ಅನೇಕ ಜನಕಲ್ಯಾಣ ಯೋಜನೆಗಳನ್ನು ಪೂರ್ಣಗೊಳಿಸಿದ್ದೇವೆ. ಉಭಯ ದೇಶಗಳ ನಡುವೆ ಭಾರತೀಯ ರೂಪಾಯಿಗಳಲ್ಲಿ ವ್ಯಾಪಾರ ಆರಂಭವಾಗಿದೆ.
  • ನೇಪಾಳದಿಂದ ಬಾಂಗ್ಲಾದೇಶಕ್ಕೆ ಭಾರತೀಯ ಗ್ರಿಡ್ ಮೂಲಕ ವಿದ್ಯುತ್ ರಫ್ತು ಇಂಧನ ವಲಯದಲ್ಲಿ ಉಪ-ಪ್ರಾದೇಶಿಕ ಸಹಕಾರದ ಮೊದಲ ಉದಾಹರಣೆಯಾಗಿದೆ. ಕೇವಲ ಒಂದು ವರ್ಷದಲ್ಲಿ ಹಲವು ಕ್ಷೇತ್ರಗಳಲ್ಲಿ ಇಂತಹ ದೊಡ್ಡ ಉಪಕ್ರಮವನ್ನು ಕಾರ್ಯಗತಗೊಳಿಸುವುದು ನಮ್ಮ ಸಂಬಂಧಗಳ ವೇಗ ಮತ್ತು ಪ್ರಮಾಣವನ್ನು ಪ್ರತಿಬಿಂಬಿಸುತ್ತದೆ.
  •  ನಮ್ಮ ರಕ್ಷಣಾ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು, ನಾವು ರಕ್ಷಣಾ ಉತ್ಪಾದನೆಯಿಂದ ಸಶಸ್ತ್ರ ಪಡೆಗಳ ಆಧುನೀಕರಣದವರೆಗೆ ವಿವರವಾದ ಚರ್ಚೆಗಳನ್ನು ನಡೆಸಿದ್ದೇವೆ. ಭಯೋತ್ಪಾದನೆ, ಮೂಲಭೂತವಾದ ಮತ್ತು ಗಡಿಯ ಶಾಂತಿಯುತ ನಿರ್ವಹಣೆಯಲ್ಲಿ ನಮ್ಮ ಸಹಕಾರವನ್ನು ಬಲಪಡಿಸಲು ನಾವು ನಿರ್ಧರಿಸಿದ್ದೇವೆ.
  • ಹಿಂದೂ ಮಹಾಸಾಗರ ಪ್ರದೇಶದ ನಮ್ಮ ದೃಷ್ಟಿ ಒಂದೇ ಆಗಿದೆ. ಇಂಡೋ-ಪೆಸಿಫಿಕ್ ಸಾಗರಗಳ ಉಪಕ್ರಮಕ್ಕೆ ಸೇರುವ ಬಾಂಗ್ಲಾದೇಶದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ನಾವು BIMSTEC ಮತ್ತು ಇತರ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ನಮ್ಮ ಸಹಕಾರವನ್ನು ಮುಂದುವರಿಸುತ್ತೇವೆ.

ಭಾರತದೊಂದಿಗಿನ ಬಾಂಧವ್ಯದ ಬಗ್ಗೆ ಶೇಖ್ ಹಸೀನಾ ಹೇಳಿದ್ದೇನು?

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು, “ಬಾಂಗ್ಲಾದೇಶದ 12 ನೇ ಸಂಸತ್ತಿನ ಚುನಾವಣೆಗಳು ಮತ್ತು 2024 ರ ಜನವರಿಯಲ್ಲಿ ನಮ್ಮ ಹೊಸ ಸರ್ಕಾರ ರಚನೆಯ ನಂತರ ಇದು ಯಾವುದೇ ದೇಶಕ್ಕೆ ನನ್ನ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ. ಭಾರತವು ನಮ್ಮ ಪ್ರಮುಖ ನೆರೆಯ, ವಿಶ್ವಾಸಾರ್ಹ ಸ್ನೇಹಿತ ಮತ್ತು ಪ್ರಾದೇಶಿಕ ಪಾಲುದಾರ. 1971 ರಲ್ಲಿ ನಮ್ಮ ವಿಮೋಚನಾ ಯುದ್ಧದ ಸಮಯದಲ್ಲಿ ಜನಿಸಿದ ಭಾರತದೊಂದಿಗಿನ ನಮ್ಮ ಸಂಬಂಧವನ್ನು ಬಾಂಗ್ಲಾದೇಶವು ಬಹಳವಾಗಿ ಗೌರವಿಸುತ್ತದೆ. 1971 ರಲ್ಲಿ ನಮ್ಮ ವಿಮೋಚನಾ ಯುದ್ಧದ ಸಮಯದಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಭಾರತದ ವೀರ, ಮಡಿದ ವೀರರಿಗೆ ನಾನು ಗೌರವ ಸಲ್ಲಿಸುತ್ತೇನೆ.
ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಬಾಂಗ್ಲಾದೇಶಕ್ಕೆ ಭೇಟಿ ನೀಡುವಂತೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದರು.

ಹೈದರಾಬಾದ್ ಹೌಸ್​​ನಲ್ಲಿ ದ್ವಿಪಕ್ಷೀಯ ಸಭೆ

ಪ್ರಧಾನಿ ಮೋದಿ ಮತ್ತು ಶೇಖ್ ಹಸೀನಾ ಅವರು ಹೈದರಾಬಾದ್ ಹೌಸ್‌ನಲ್ಲಿ ದ್ವಿಪಕ್ಷೀಯ ಸಭೆ ನಡೆಸಿದ್ದು, ತಮ್ಮ ದೇಶಗಳ ಸಂಬಂಧದ ವಿವಿಧ ಅಂಶಗಳನ್ನು ಚರ್ಚಿಸಿದರು. ಚರ್ಚೆಗಳು ಸಂಭಾವ್ಯ ವ್ಯಾಪಾರ ಒಪ್ಪಂದ ಮತ್ತು ಪ್ರಾದೇಶಿಕ ಸಹಕಾರವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಇತರ ಉಪಕ್ರಮಗಳನ್ನು ಒಳಗೊಂಡಿವೆ. ಕಳೆದ ದಶಕದಲ್ಲಿ, ಈ ದೃಢವಾದ ಪಾಲುದಾರಿಕೆಯ ಭಾಗವಾಗಿ ಅನೇಕ ಗಡಿಯಾಚೆಗಿನ ಯೋಜನೆಗಳನ್ನು ಪ್ರಾರಂಭಿಸಲಾಗಿದೆ.

ಇದನ್ನೂ ಓದಿ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಪಿಎಂ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ (MEA), ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಮತ್ತು ಶೇಖ್ ಹಸೀನಾ ಅವರು 2019 ರಿಂದ ಕನಿಷ್ಠ ಹತ್ತು ಬಾರಿ ಭೇಟಿಯಾಗಿದ್ದಾರೆ. ಬಾಂಗ್ಲಾದೇಶದ ಪ್ರಧಾನಿ ಹಸೀನಾ ಅವರು ಹಿಂದೂ ಮಹಾಸಾಗರ ಪ್ರದೇಶ (IOR) ಮತ್ತು ನೆರೆಯ ರಾಷ್ಟ್ರಗಳ ಏಳು ಪ್ರಮುಖ ನಾಯಕರಲ್ಲಿ ಒಬ್ಬರು ಜೂನ್ 9 ರಂದು ಪ್ರಧಾನಿ ಮೋದಿಯವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದರು. ಅವರ ಪ್ರಸ್ತುತ ಭೇಟಿಯು ಭಾರತ ಮತ್ತು ಬಾಂಗ್ಲಾದೇಶದ ನಡುವೆ ಬೆಳೆಯುತ್ತಿರುವ ಸ್ನೇಹ ಮತ್ತು ಸಹಕಾರವನ್ನು ಎತ್ತಿ ತೋರಿಸುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:05 pm, Sat, 22 June 24