ಮಹಾರಾಷ್ಟ್ರದ ನಾಸಿಕ್‌ನಲ್ಲಿ ಧ್ವನಿವರ್ಧಕ, ಡಿಜೆಗೆ ಬ್ರೇಕ್; ಆದೇಶ ಹೊರಡಿಸಿದ ಪೊಲೀಸ್ ಆಯುಕ್ತ ದೀಪಕ್ ಪಾಂಡೆ

ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕ ಬಳಕೆ ವಿವಾದ ಹಿನ್ನೆಲೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಧ್ವನಿವರ್ಧಕ, ಡಿಜೆಗೆ ಬ್ರೇಕ್ ಹಾಕಲಾಗಿದೆ. ಧ್ವನಿವರ್ಧಕ, ಡಿಜೆ ಹಾಕದಂತೆ ನಾಸಿಕ್ ಪೊಲೀಸ್ ಆಯುಕ್ತ ದೀಪಕ್ ಪಾಂಡೆ ಕಟ್ಟುನಿಟ್ಟಿನ ಆದೇಶ ಮಾಡಿದ್ದಾರೆ.

ಮಹಾರಾಷ್ಟ್ರದ ನಾಸಿಕ್‌ನಲ್ಲಿ ಧ್ವನಿವರ್ಧಕ, ಡಿಜೆಗೆ ಬ್ರೇಕ್; ಆದೇಶ ಹೊರಡಿಸಿದ ಪೊಲೀಸ್ ಆಯುಕ್ತ ದೀಪಕ್ ಪಾಂಡೆ
ಮಹಾರಾಷ್ಟ್ರದ ನಾಸಿಕ್‌ನಲ್ಲಿ ಧ್ವನಿವರ್ಧಕ, ಡಿಜೆಗೆ ಬ್ರೇಕ್
Updated By: ಆಯೇಷಾ ಬಾನು

Updated on: Apr 05, 2022 | 7:33 AM

ಮಹಾರಾಷ್ಟ್ರ: ಮಸೀದಿಗಳಲ್ಲಿ ಎಷ್ಟು ಜೋರಾಗಿ ಸ್ಪೀಕರ್ ಹಾಕಿ ಆಜಾನ್ ಅಂದ್ರೆ ಪ್ರಾರ್ಥನೆ ಮಾಡ್ತಾರೋ, ಅದಕ್ಕಿಂತ ಡಬಲ್ ಸೌಂಡ್ ಇಟ್ಟು ನಾವು ಹನುಮಾನ್ ಚಾಲಿಸಾ ಹಾಕ್ತೀವಿ ಅಂತಾ . ಮಹಾರಾಷ್ಟ್ರ ನವ ನಿರ್ಮಾಣ ಸೇನಾ ಪಕ್ಷದ ಅಧ್ಯಕ್ಷ ರಾಜ್ ಠಾಕ್ರೆ, ಆಜಾನ್ ವಿರುದ್ಧ ಗುಡುಗಿದ್ರು. ಸದ್ಯ ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕ ಬಳಕೆ ವಿವಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಧ್ವನಿವರ್ಧಕ, ಡಿಜೆಗೆ ಹಾಕದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.

ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕ ಬಳಕೆ ವಿವಾದ ಹಿನ್ನೆಲೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಧ್ವನಿವರ್ಧಕ, ಡಿಜೆಗೆ ಬ್ರೇಕ್ ಹಾಕಲಾಗಿದೆ. ಧ್ವನಿವರ್ಧಕ, ಡಿಜೆ ಹಾಕದಂತೆ ನಾಸಿಕ್ ಪೊಲೀಸ್ ಆಯುಕ್ತ ದೀಪಕ್ ಪಾಂಡೆ ಕಟ್ಟುನಿಟ್ಟಿನ ಆದೇಶ ಮಾಡಿದ್ದಾರೆ. ಆದೇಶವನ್ನು ಉಲ್ಲಂಘಿಸಿದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ. ಹಾಗೂ ಶಾಂತಿ ಕದಡಲು ಯತ್ನಿಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ‘ಆಜಾನ್’ ಅಗ್ನಿಗೆ ನೀರಸ ಸ್ಪಂದನೆ; ಧ್ವನಿವರ್ಧಕ ಬಳಕೆಗೆ ಸಿದ್ಧವಾಗಿದ್ದ ದೇವಸ್ಥಾನಗಳಲ್ಲಿ ಎಂದಿನಂತೆ ಪೂಜೆ, ಹಿಂದೂ ಕಾರ್ಯಕರ್ತರು ಕಣ್ಮರೆ

ರಿಯಲ್ ಎಸ್ಟೇಟ್ ವಲದ ಬಗ್ಗೆ ನಿಮಗೆಷ್ಟು ಗೊತ್ತು..! ಇಲ್ಲಿದೆ ನೋಡಿ ಮಾಹಿತಿ

Published On - 7:32 am, Tue, 5 April 22