ಲಸಿಕೆ ವಿತರಣೆಗೆ ಮೊದಲು ಇನ್ನೊಮ್ಮೆ ತಾಲೀಮು.. ಇಂದೇ ನಡೆಯಲಿದೆ ಕೊವಿನ್​ ಸಾಫ್ಟ್​ವೇರ್​ ಪರಿಶೀಲನೆ

ಇಂದು ದೇಶದ ಕೆಲವು ರಾಜ್ಯಗಳಲ್ಲಿ 2ನೇ ಹಂತ ಮತ್ತು ಇನ್ನು ಕೆಲವೆಡೆ 3ನೇ ಹಂತದ ಕೊರೊನಾ ಲಸಿಕೆ ತಾಲೀಮು ನಡೆಸಲಾಗುತ್ತಿದೆ. ಕೇಂದ್ರ ಆರೋಗ್ಯ ಇಲಾಖೆ ಅಭಿವೃದ್ಧಿಪಡಿಸಿರುವ ಕೊವಿನ್​ ಸಾಫ್ಟ್​ವೇರ್​ ಕುರಿತಾದ ಪರಿಶೀಲನೆಯೂ ಇಂದು ನಡೆಯಲಿದೆ.

ಲಸಿಕೆ ವಿತರಣೆಗೆ ಮೊದಲು ಇನ್ನೊಮ್ಮೆ ತಾಲೀಮು.. ಇಂದೇ ನಡೆಯಲಿದೆ ಕೊವಿನ್​ ಸಾಫ್ಟ್​ವೇರ್​ ಪರಿಶೀಲನೆ
ಪ್ರಾತಿನಿಧಿಕ ಚಿತ್ರ
Edited By:

Updated on: Jan 08, 2021 | 11:02 AM

ದೆಹಲಿ: ಭಾರತದಲ್ಲಿ ಕೊರೊನಾ ಲಸಿಕೆ ವಿತರಣೆಗೆ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗುತ್ತಿದೆ. ಲಸಿಕೆ ವಿತರಣೆ ಸುಸೂತ್ರವಾಗಿ ನಡೆಯಬೇಕೆಂಬ ಉದ್ದೇಶದಿಂದ ಪೂರ್ವಭಾವಿಯಾಗಿ ತಾಲೀಮು ನಡೆಸಲಾಗುತ್ತಿದೆ. ಅದರ ಪ್ರಯುಕ್ತ ಇಂದು ದೇಶದ ಕೆಲವು ರಾಜ್ಯಗಳಲ್ಲಿ 2ನೇ ಹಂತ ಮತ್ತು ಇನ್ನು ಕೆಲವೆಡೆ 3ನೇ ಹಂತದ ಕೊರೊನಾ ಲಸಿಕೆ ತಾಲೀಮು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಉತ್ತರಪ್ರದೇಶ ಮತ್ತು ಹರಿಯಾಣ ರಾಜ್ಯಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ಕಡೆ ನಡೆಯುತ್ತಿರುವ ತಾಲೀಮು ಪ್ರಕ್ರಿಯೆ ಕುರಿತು ನಿನ್ನೆಯೇ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್​ ರಾಜ್ಯ ಸಚಿವರೊಂದಿಗೆ ಸಭೆ ನಡೆಸಿದ್ದಾರೆ. ಜಿಲ್ಲಾಸ್ಪತ್ರೆ, ವೈದ್ಯಕೀಯ ಕಾಲೇಜು,ಸಾರ್ವಜನಿಕ ಆರೋಗ್ಯ ಕೇಂದ್ರ, ಖಾಸಗಿ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರಿಗೆ ಲಸಿಕೆ ವಿತರಣೆ ಕುರಿತು ತರಬೇತಿ ನೀಡಲಾಗುತ್ತಿದೆ.

ಇಂದು ದೇಶಾದ್ಯಂತ ನಡೆಯಲಿರುವ ತಾಲೀಮು ಪ್ರಕ್ರಿಯೆ ಅತಿ ದೊಡ್ಡ ಮಟ್ಟದ್ದಾಗಿದ್ದು, ಕೇಂದ್ರ ಆರೋಗ್ಯ ಇಲಾಖೆ ಅಭಿವೃದ್ಧಿಪಡಿಸಿರುವ ಕೊವಿನ್​ ಸಾಫ್ಟ್​ವೇರ್​ ಕುರಿತಾದ ಪರಿಶೀಲನೆಯನ್ನೂ ನಡೆಸಲಾಗುವುದು ಎಂದು ಇಲಾಖೆ ತಿಳಿಸಿದೆ.

ಡ್ರೈ ರನ್-2ಗೆ ಸಿದ್ಧವಾಯ್ತು ಕರುನಾಡು, ವ್ಯಾಕ್ಸಿನ್ ರಿಹರ್ಸಲ್ ಸ್ಟಾರ್ಟ್