ರಾಷ್ಟ್ರಧ್ವಜ ಸಂಹಿತೆ: ತ್ರಿವರ್ಣ ಧ್ವಜವನ್ನು ವಿಲೇವಾರಿ ಮಾಡುವುದು ಹೇಗೆ ? ಇಲ್ಲಿದೆ ಮಾಹಿತಿ

| Updated By: ವಿವೇಕ ಬಿರಾದಾರ

Updated on: Aug 13, 2022 | 8:34 PM

ರಾಷ್ಟ್ರಧ್ವಜ ವಿಲೇವಾರಿ ಹೇಗೆ ಮಾಡುವುದು ? ರಾಷ್ಟ್ರಧ್ವಜ ಹರಿದರೆ ಏನು ಮಾಡಬೇಕು.? ಎಂಬುದರ ಕುರಿತು ರಾಷ್ಟ್ರಧ್ವಜ ಸಂಹಿತೆಯಲ್ಲಿ ತಿಳಿಸಲಾಗಿದೆ.

ರಾಷ್ಟ್ರಧ್ವಜ ಸಂಹಿತೆ: ತ್ರಿವರ್ಣ ಧ್ವಜವನ್ನು ವಿಲೇವಾರಿ ಮಾಡುವುದು ಹೇಗೆ ? ಇಲ್ಲಿದೆ ಮಾಹಿತಿ
ತ್ರಿವರ್ಣ ಧ್ವಜ
Follow us on

ರಾಷ್ಟ್ರಧ್ವಜ ವಿಲೇವಾರಿ ಹೇಗೆ ಮಾಡುವುದು ? ರಾಷ್ಟ್ರಧ್ವಜ ಹರಿದರೆ ಏನು ಮಾಡಬೇಕು.? ಎಂಬುದರ ಕುರಿತು ರಾಷ್ಟ್ರಧ್ವಜ ಸಂಹಿತೆಯಲ್ಲಿ ತಿಳಿಸಲಾಗಿದೆ. ರಾಷ್ಟ್ರಧ್ವಜವನ್ನು ಹೇಗೆಂದರೆ ಹಾಗೆ ವಿಲೇವಾರಿ ಮಾಡುವಂತಿಲ್ಲ. ರಾಷ್ಟ್ರಧ್ವಜವನ್ನು ಖಾಸಗಿಯಾಗಿ ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡುವ ರಿತಿಯಲ್ಲಿಯೇ ಸುಟ್ಟು ಹಾಕಬೇಕು ಅಥವಾ ಹೂಳಬೇಕು ಎಂದು ಧ್ವಜ ಸಂಹಿತೆಯಲ್ಲಿ ತಿಳಿಸಲಾಗಿದೆ.

ಹಾನಿಯಾದ ಧ್ವಜ ಸಿಕ್ಕರೆ, ಅದನ್ನು ಅಲ್ಲಿಯೇ ಬಿಟ್ಟುಬಿಡಬಾರದು. ಅಲ್ಲಿಯೇ ಬಿಟ್ಟರೆ ಧ್ವಜಕ್ಕೆ ಎಸಗುವ ಅಪಮಾನವಾಗುತ್ತದೆ. ಸಿಕ್ಕ ಧ್ವಜವನ್ನು ಮಡಚಬೇಕು ನಂತರ ಹೂಳುವ ಅಥವಾ ಸುಡುವ ಮೊದಲು ಮರದ ಪೆಟ್ಟಿಗೆಯಲ್ಲಿ ಹಾಕಬೇಕು. ನಂತರ ಮಣ್ಣಿನಲ್ಲಿ ಹೂಳಬಹುದು ಅಥವಾ ಸುಡುವುದರ ಮೂಲಕ ವಿಲೇವಾರಿ ಮಾಡಬಹುದು.

ತ್ರಿವರ್ಣ ಧ್ವಜವನ್ನು ಹೇಗೆ ವಿಲೇವಾರಿ ಮಾಡುವುದು
ಧ್ವಜಗಳನ್ನು ಹೂಳಲು, ಎಲ್ಲಾ ಹಾನಿಗೊಳಗಾದ ಧ್ವಜಗಳನ್ನು ಸಂಗ್ರಹಿಸಿ, ಮಡಚಿ ಮತ್ತು ಮರದ ಪೆಟ್ಟಿಗೆಯಲ್ಲಿ ಇಡಬೇಕು. ಪೆಟ್ಟಿಗೆಯನ್ನು ನಂತರ ಭೂಮಿಯಲ್ಲಿ ಹೂಳಬೇಕು ಮತ್ತು ಧ್ವಜಗಳನ್ನು ಸಮಾಧಿ ಮಾಡಿದ ನಂತರ ಒಂದು ಕ್ಷಣ ಮೌನವನ್ನು ಆಚರಿಸಬೇಕು.

ಎರಡನೆಯ ಆಯ್ಕೆಗೆ (ಸುಡುವಿಕೆ), ಸುರಕ್ಷಿತ ಸ್ಥಳವನ್ನು ಆಯ್ಕೆಮಾಡಬೇಕು ಮತ್ತು ಸ್ವಚ್ಛಗೊಳಿಸಬೇಕು. ಹಾನಿಗೊಳಗಾದ ಧ್ವಜಗಳನ್ನು ಮಡಚಬೇಕು. ನಂತರ ಧ್ವಜವನ್ನು ಬೆಂಕಿಯಲ್ಲಿ ಎಚ್ಚರಿಕೆಯಿಂದ ಇಡಬೇಕು. ಧ್ವಜವನ್ನು ಮಡಚದೆ ಸುಡುವುದು ಅಪರಾಧ. ಧ್ವಜ ಸಂಪೂರ್ಣವಾಗಿ ಸುಟ್ಟ ಬೂದಿಯಾಗುವವರೆಗೆ ಕಾಯಬೇಕು.
ಹರಿದ ಧ್ವಜದ ಫೋಟೋಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಅದು ಕೂಡಾ ಧ್ವಜಕ್ಕೆ ಮಾಡುವ ಅವಮಾನವಾಗಲಿದೆ ಎಂದು ಸಂಹಿತೆಯಲ್ಲಿ ತಿಳಿಸಲಾಗಿದೆ.

Published On - 7:12 pm, Sat, 13 August 22