ತೆಲಂಗಾಣದಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ (National Highway projects )ಭೂಮಿ ಮಂಜೂರು ಮಾಡುವಲ್ಲಿ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ (G Kishan Reddy) ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (K Chandrasekhar Rao) ಅವರಿಗೆ ಪತ್ರ ಬರೆದಿದ್ದಾರೆ. 32,383 ಕೋಟಿ ರೂಪಾಯಿಗಳ ಯೋಜನೆಗಳು ನೆನೆಗುದಿಗೆ ಬಿದ್ದಿದೆ ಎಂದು ರೆಡ್ಡಿ ಹೇಳಿದ್ದು, ತೆಲಂಗಾಣ ರಾಜ್ಯ ಸರ್ಕಾರದ ನಿರಾಸಕ್ತಿಯಿಂದಾಗಿ ಅದು ಅಗತ್ಯವಾದ ಭೂಸ್ವಾಧೀನವನ್ನು ಮಾಡುತ್ತಿಲ್ಲ ಎಂದಿದ್ದಾರೆ. 750 ಕಿ.ಮೀ ಉದ್ದದ 11 ರಾಷ್ಟ್ರೀಯ ಹೆದ್ದಾರಿ ಯೋಜನೆಗಳು, ಇದಕ್ಕಾಗಿ ಅಂದಾಜು 4,332 ಹೆಕ್ಟೇರ್ ಭೂಮಿ ಅಗತ್ಯವಿದೆ, ಇವು ಸದ್ಯ ಸ್ಥಗಿತಗೊಂಡಿದೆ ಎಂದು ರೆಡ್ಡಿ ಹೇಳಿದ್ದಾರೆ. ಉಳಿದ ಭೂಮಿಯನ್ನು ಸಮಯಕ್ಕೆ ಒದಗಿಸಲು ಮತ್ತು ಯೋಜನೆಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸಹಕರಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾನು ಕೆಸಿಆರ್ ಅವರಿಗೆ ಪತ್ರ ಬರೆದಿದ್ದೇನೆ ಎಂದು ಸಚಿವರು ತೆಲುಗಿನಲ್ಲಿ ಟ್ವೀಟ್ ಮಾಡಿದ್ದಾರೆ.
₹32,383 కోట్లతో 751 కి.మీ.ల పొడవున తెలంగాణలో నిర్మించనున్న 11 జాతీయ రహదారులకు 4,332హెక్టార్ల భూమి అవసరం కాగా కేవలం 284హెక్టార్ల భూమిని మాత్రమే NHAIకు అప్పగించారు. pic.twitter.com/tyz1PsdWNZ
— G Kishan Reddy (@kishanreddybjp) March 16, 2023
13,163.18 ಕೋಟಿ ವೆಚ್ಚದ ಹೈದರಾಬಾದ್ ಪ್ರಾದೇಶಿಕ ವರ್ತುಲ ರಸ್ತೆಯ 158 ಕಿಲೋಮೀಟರ್ ಉತ್ತರ ಭಾಗದ ಯೋಜನೆ, ತೆಲಂಗಾಣ ರಾಜ್ಯದಲ್ಲಿ ಸರಿಸುಮಾರು 275 ಕಿಲೋಮೀಟರ್‌ಗಳನ್ನು ಹೊಂದಿರುವ ನಾಗ್‌ಪುರ ವಿಜಯವಾಡ ಕಾರಿಡಾರ್‌ನ NH163G ಕೂಡ ಸ್ಥಗಿತವಾಗಿದೆ ಎಂದು ರೆಡ್ಡಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದು NH163 G ಯ ವಾರಂಗಲ್-ಖಮ್ಮಂ ವಿಭಾಗದ 108 ಕಿಲೋಮೀಟರ್ ವ್ಯಾಪ್ತಿಯ 4 ಲೇನಿಂಗ್ ವೆಚ್ಚ 3,397.01 ಕೋಟಿ, NH163 G ನ ಮಂಚೇರಿಯಲ್-ವಾರಂಗಲ್ ವಿಭಾಗದ 109 ಕಿಲೋಮೀಟರ್ ವ್ಯಾಪ್ತಿಯ 4 ಲೇನಿಂಗ್ ವೆಚ್ಚ 3,441 ಕೋಟಿ ಮತ್ತು ತೆಲಂಗಾಣ ರಾಜ್ಯದಲ್ಲಿ ಬರುವ ಖಮ್ಮಂ-ವಿಜಯವಾಡ ವಿಭಾಗದಲ್ಲಿ 4 ಲೇನಿಂಗ್‌ನ 61 ಕಿಲೋಮೀಟರ್‌ಗಳು ರೂ. 3,007 ಕೋಟಿ ಒಳಗೊಂಡಿದೆ ಎಂದು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ:19 ಹೊಸ ಜಿಲ್ಲೆಗಳನ್ನು ಘೋಷಿಸಿದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್; ಇದು ರಾಜಕೀಯ ನಡೆ ಎಂದ ಬಿಜೆಪಿ
2014 ರಿಂದ ಹೆದ್ದಾರಿಗಳ ಅಭಿವೃದ್ಧಿ ಮತ್ತು ಅಧುನಿಕ ಅತ್ಯಾಧುನಿಕ ರಾಷ್ಟ್ರೀಯ ಹೆದ್ದಾರಿ ರಸ್ತೆ ಜಾಲವನ್ನು ನಿರ್ಮಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರವನ್ನು ರೆಡ್ಡಿ ಹೊಗಳಿದ್ದಾರೆ.
ಸ್ವಾತಂತ್ರ್ಯದ ನಂತರ 2014 ರವರೆಗಿನ ಅವಧಿಯಲ್ಲಿ, ತೆಲಂಗಾಣ ಪ್ರದೇಶವು ಒಟ್ಟು 2,500 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿತ್ತು. 2014 ರಿಂದ, ನರೇಂದ್ರ ಮೋದಿ ಪ್ರಧಾನಿಯಾದ ನಂತರ ಕಳೆದ ಎಂಟೂವರೆ ವರ್ಷಗಳಲ್ಲಿ ಇನ್ನೂ 2,500 ನಿರ್ಮಿಸಲಾಗಿದೆ ಎಂದು ರೆಡ್ಡಿ ಅವರು ತೆಲಂಗಾಣ ಮುಖ್ಯಮಂತ್ರಿಗೆ ಪತ್ರದಲ್ಲಿ ಬರೆದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:01 am, Sat, 18 March 23