ಒಮಾನ್‌ನ ಉನ್ನತ ನಾಯಕತ್ವವನ್ನು ಭೇಟಿ ಮಾಡಿದ ಎನ್‌ಎಸ್‌ಎ ಅಜಿತ್ ದೋವಲ್, ಭದ್ರತಾ ಸಂಬಂಧ ಬಗ್ಗೆ ಚರ್ಚೆ

|

Updated on: Jun 26, 2023 | 9:23 PM

ಅಲ್ ಬರಾಕಾ ಅರಮನೆಯಲ್ಲಿ ಸುಲ್ತಾನ್ ಹೈಥಮ್ ಅವರೊಂದಿಗೆ ದೋವಲ್ ಅವರ ಸಂವಾದದ ಸಮಯದಲ್ಲಿ, ಎರಡೂ ಕಡೆಯವರು ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚಿಸಿದ್ದಾರೆ. ಅದೇ ವೇಳೆ ಎಲ್ಲಾ ಕ್ಷೇತ್ರಗಳಲ್ಲಿ ಸಂಬಂಧಗಳನ್ನು ವಿಸ್ತರಿಸುವ ಮಾರ್ಗಗಳನ್ನು ಅನ್ವೇಷಿಸಿದ್ದು, ಸಾಮಾನ್ಯ ಆಸಕ್ತಿಯ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ಉಭಯ ರಾಷ್ಟ್ರಗಳ ನಾಯಕರು ವಿನಿಮಯ ಮಾಡಿದ್ದಾರೆ

ಒಮಾನ್‌ನ ಉನ್ನತ ನಾಯಕತ್ವವನ್ನು ಭೇಟಿ ಮಾಡಿದ ಎನ್‌ಎಸ್‌ಎ ಅಜಿತ್ ದೋವಲ್, ಭದ್ರತಾ ಸಂಬಂಧ ಬಗ್ಗೆ ಚರ್ಚೆ
ಅಜಿತ್ ದೋವಲ್
Follow us on

ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ (Ajit Doval) ಸೋಮವಾರ ಸುಲ್ತಾನ್ ಹೈತಮ್ ಬಿನ್ ತಾರಿಕ್ (Sultan Haitham bin Tarik) ಸೇರಿದಂತೆ ಒಮಾನ್‌ನ ಉನ್ನತ ನಾಯಕರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯಲ್ಲಿ ನಾಯಕರು ಉಭಯ ಕಡೆಯ ನಡುವಿನ ಭದ್ರತಾ ಸಂಬಂಧಗಳನ್ನು ಹೆಚ್ಚಿಸುವ ಮಾರ್ಗಗಳು ಮತ್ತು ತಂತ್ರಜ್ಞಾನ, ಮಿಲಿಟರಿ ವಿಷಯಗಳು ಮತ್ತು ಗಣಿಗಾರಿಕೆಯಲ್ಲಿ ಸಹಕಾರವನ್ನು ಚರ್ಚಿಸಿದ್ದಾರೆ. ಈಜಿಪ್ಟ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಈ ವರ್ಷ G20 ಪ್ರಕ್ರಿಯೆಯ ಭಾಗವಾಗಲು ಭಾರತವು ಆಹ್ವಾನಿಸಿದ ಅತಿಥಿ ದೇಶಗಳಲ್ಲಿ ಒಂದಾದ ಒಮಾನ್‌ಗೆ ದೋವಲ್ ಪ್ರಯಾಣಿಸಿದ್ದಾರೆ. ದೋವಲ್ ಅವರು “ಸಹಕಾರದ ವಿವಿಧ ಅಂಶಗಳ” ಕುರಿತು ವ್ಯವಹರಿಸುವ ಲಿಖಿತ ಸಂದೇಶವನ್ನು ಒಮಾನ್‌ನ ಆಡಳಿತಗಾರರಿಗೆ ಪ್ರಧಾನ ಮಂತ್ರಿಯಿಂದ ತಲುಪಿಸಿದ್ದಾರೆ ಎಂದು ಒಮಾನ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಅಲ್ ಬರಾಕಾ ಅರಮನೆಯಲ್ಲಿ ಸುಲ್ತಾನ್ ಹೈಥಮ್ ಅವರೊಂದಿಗೆ ದೋವಲ್ ಅವರ ಸಂವಾದದ ಸಮಯದಲ್ಲಿ, ಎರಡೂ ಕಡೆಯವರು ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚಿಸಿದ್ದಾರೆ. ಅದೇ ವೇಳೆ ಎಲ್ಲಾ ಕ್ಷೇತ್ರಗಳಲ್ಲಿ ಸಂಬಂಧಗಳನ್ನು ವಿಸ್ತರಿಸುವ ಮಾರ್ಗಗಳನ್ನು ಅನ್ವೇಷಿಸಿದ್ದು, ಸಾಮಾನ್ಯ ಆಸಕ್ತಿಯ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ಉಭಯ ರಾಷ್ಟ್ರಗಳ ನಾಯಕರು ವಿನಿಮಯ ಮಾಡಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಸುಲ್ತಾನರಿಗೆ ಪ್ರಧಾನ ಮಂತ್ರಿಯವರ ಶುಭಾಶಯಗಳನ್ನು ತಿಳಿಸಿದ ದೋವಲ್, ಒಮಾನ್‌ನ ಪ್ರಗತಿ ಮತ್ತು ಸಮೃದ್ಧಿಗಾಗಿ ಹಾರೈಸಿದರು.
ದೋವಲ್ ಮತ್ತು ಒಮಾನ್‌ನ ವಿದೇಶಾಂಗ ಸಚಿವ ಸಯ್ಯಿದ್ ಬದ್ರ್ ಹಮದ್ ಅಲ್ ಬುಸೈದಿ ನಡುವಿನ ಪ್ರತ್ಯೇಕ ಸಭೆಯಲ್ಲಿ, ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಸಂಬಂಧಗಳು ಮತ್ತು “ತಾಂತ್ರಿಕ, ಮಿಲಿಟರಿ ಮತ್ತು ಗಣಿಗಾರಿಕೆ ಕ್ಷೇತ್ರಗಳಲ್ಲಿನ ಭರವಸೆಯ ಕ್ಷೇತ್ರಗಳ ಕುರಿತು ಸಹಕಾರದ ಅಂಶಗಳು” ಕುರಿತು ಎರಡೂ ಕಡೆಯವರು ಚರ್ಚಿಸಿದ್ದಾರೆ ಎಂದು ಒಮಾನ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ವಾಣಿಜ್ಯ, ಹೂಡಿಕೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿನ ಸಂಬಂಧಗಳ ಬಗ್ಗೆ, ಹಲವಾರು ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ವಿಷಯಗಳ ಕುರಿತು ನಾಯಕರು ಚರ್ಚೆ ನಡೆಸಿದ್ದಾರೆ. ಸಯ್ಯದ್ ಬದ್ರ್ ಅವರು ಜಿ 20 ಸಭೆಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಭಾರತವನ್ನು ಅಭಿನಂದಿಸಿದರು.

ಇದನ್ನೂ ಓದಿ: ಪ್ರವಾಸದಿಂದ ಹಿಂದಿರುಗಿದ ಪ್ರಧಾನಿ ಮೋದಿಗೆ ಮಣಿಪುರ ಪರಿಸ್ಥಿತಿ ಬಗ್ಗೆ ಅಮಿತ್ ಶಾ ವಿವರಣೆ

ದೋವಲ್ ಅವರು ರಾಜಮನೆತನದ ಸಚಿವ ಜನರಲ್ ಸುಲ್ತಾನ್ ಮೊಹಮ್ಮದ್ ಅಲ್ ನುಅಮಾನಿ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದಾರೆ.ಅವರು ಎರಡೂ ದೇಶಗಳ ಜಂಟಿ ಹಿತಾಸಕ್ತಿಗಳನ್ನು ಸಾಧಿಸಲು ಸಹಕಾರದ ಮಾರ್ಗಗಳನ್ನು ಹೆಚ್ಚಿಸುವುದಕ್ಕಾಗಿ ಒಮಾನ್‌ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು ಎಂದು ಒಮಾನ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ದೋವಲ್ ಮತ್ತು ಜನರಲ್ ಸುಲ್ತಾನ್ ಮೊಹಮ್ಮದ್ ನಡುವಿನ ಸಭೆಯು ಪ್ರಸ್ತುತ ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ವಿಷಯಗಳ ಬಗ್ಗೆ ಒಮಾನ್ ನೀಡಿದ ಗಮನದ ಸಂದರ್ಭದಲ್ಲಿ ಮತ್ತು ಜಾಗತಿಕ ರಂಗದಲ್ಲಿ ಒಮಾನ್‌ನ ಸ್ಥಾನಮಾನವನ್ನು ಪುನರುಚ್ಚರಿಸುವ ಸಂದರ್ಭದಲ್ಲಿ ನಡೆಯಿತು ಎಂದು ವರದಿ ಹೇಳಿದೆ.

ಉಭಯ ಪಕ್ಷಗಳ ನಡುವಿನ ಚರ್ಚೆಗಳು ಭಯೋತ್ಪಾದನೆ ನಿಗ್ರಹ ಮತ್ತು ಕಡಲ ಭದ್ರತೆಯಲ್ಲಿ ಸಹಕಾರದ ಬಗ್ಗೆಯೂ ಗಮನಹರಿಸಿವೆ. ಭಾರತ ಪಶ್ಚಿಮ ಏಷ್ಯಾದ ಪ್ರಮುಖ ರಾಷ್ಟ್ರಗಳೊಂದಿಗೆ ಭದ್ರತಾ ಸಂಬಂಧಗಳನ್ನು ಬಲಪಡಿಸುವ ಪ್ರಯತ್ನಗಳನ್ನು ಹೆಚ್ಚಿಸುವುದರೊಂದಿಗೆ, ಭಾರತ ಮತ್ತು ಒಮಾನ್ ಹಿಂದೂ ಮಹಾಸಾಗರದಲ್ಲಿ ಭದ್ರತೆ ಮತ್ತು ಸ್ಥಿರತೆಯ ಬಗ್ಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ