National Unity Day 2024: ರಾಷ್ಟ್ರೀಯ ಏಕತಾ ದಿನದ ಐತಿಹಾಸಿಕ ಹಿನ್ನೆಲೆಯೇನು?

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 31, 2024 | 10:19 AM

ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕವೂ ಕೆಲವೊಂದು ಭೂ ಪ್ರದೇಶಗಳು ಭಾರತದ ಒಕ್ಕೂಟವನ್ನು ಸೇರಲು ನಿರಾಕರಿಸಿದ್ದವು. ಆದರೆ ಈ ಪ್ರದೇಶಗಳನ್ನು ಭಾರತದ ಒಕ್ಕೂಟಕ್ಕೆ ಸೇರಿಸಿದ ಕೀರ್ತಿ ಸರ್ದಾರ್‌ ವಲ್ಲಭ್‌ಭಾಯಿ ಪಟೇಲ್‌ ಅವರಿಗೆ ಸಲ್ಲುತ್ತದೆ. ಆ ಸಂದರ್ಭದಲ್ಲಿ ವಿವಿಧ ರಾಜಮನೆತನಗಳ ಆಡಳಿತದಲ್ಲಿದ್ದ ಒಟ್ಟು 562 ರಾಜ್ಯಗಳನ್ನು ಭಾರತದ ಒಕ್ಕೂಟಕ್ಕೆ ಸೇರಿಸಿದ್ದ ಪಟೇಲ್‌ ಅವರು ಆಧುನಿಕ ಭಾರತವನ್ನು ನಿರ್ಮಾಣ ಮಾಡುವುದರಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ದೇಶಕ್ಕಾಗಿ ಅವರು ನೀಡಿರುವ ಅದ್ಭುತ ಸೇವೆಗಾಗಿ ಅವರನ್ನು ಗೌರವಿಸುವುದಕ್ಕಾಗಿ ಪ್ರತಿ ವರ್ಷ ಅ. 31 ರಂದು ರಾಷ್ಟ್ರೀಯ ಏಕತಾ ದಿನ ಎಂದು ಆಚರಣೆ ಮಾಡಲಾಗುತ್ತದೆ.

National Unity Day 2024: ರಾಷ್ಟ್ರೀಯ ಏಕತಾ ದಿನದ ಐತಿಹಾಸಿಕ ಹಿನ್ನೆಲೆಯೇನು?
ರಾಷ್ಟ್ರೀಯ ಏಕತಾ ದಿನ
Follow us on

ಉಕ್ಕಿನ ಮನುಷ್ಯ’ ಖ್ಯಾತಿಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು ‘ರಾಷ್ಟ್ರೀಯ ಏಕತಾ ದಿನ’ವನ್ನಾಗಿ ಆಚರಿಸಲಾಗುತ್ತದೆ. ಭಾರತದ ಏಕತೆಗಾಗಿ ಶ್ರಮಿಸಿದ ಹಾಗೂ ಏಕತೆಯನ್ನು ಸಾಧಿಸಿದ ಮಹಾನ್‌ ವ್ಯಕ್ತಿ. ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕವೂ ಕೆಲವೊಂದು ಭೂ ಪ್ರದೇಶಗಳು ಭಾರತದ ಒಕ್ಕೂಟವನ್ನು ಸೇರಲು ನಿರಾಕರಿಸಿದ್ದವು. ಆದರೆ ಈ ಪ್ರದೇಶಗಳನ್ನು ಭಾರತದ ಒಕ್ಕೂಟಕ್ಕೆ ಸೇರಿಸಿದ ಕೀರ್ತಿ ಸರ್ದಾರ್‌ ವಲ್ಲಭ್‌ಭಾಯಿ ಪಟೇಲ್‌ ಅವರಿಗೆ ಸಲ್ಲುತ್ತದೆ. ಆ ಸಂದರ್ಭದಲ್ಲಿ ವಿವಿಧ ರಾಜಮನೆತನಗಳ ಆಡಳಿತದಲ್ಲಿದ್ದ ಒಟ್ಟು 562 ರಾಜ್ಯಗಳನ್ನು ಭಾರತದ ಒಕ್ಕೂಟಕ್ಕೆ ಸೇರಿಸಿದ್ದ ಪಟೇಲ್‌ ಅವರು ಆಧುನಿಕ ಭಾರತವನ್ನು ನಿರ್ಮಾಣ ಮಾಡುವುದರಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ದೇಶಕ್ಕಾಗಿ ಅವರು ನೀಡಿರುವ ಅದ್ಭುತ ಸೇವೆಗಾಗಿ ಅವರನ್ನು ಗೌರವಿಸುವುದಕ್ಕಾಗಿ ಪ್ರತಿ ವರ್ಷ ಅ. 31 ರಂದು ರಾಷ್ಟ್ರೀಯ ಏಕತಾ ದಿನ ಎಂದು ಆಚರಣೆ ಮಾಡಲಾಗುತ್ತದೆ.

ರಾಷ್ಟ್ರೀಯ ಏಕತಾ ದಿನದ ಇತಿಹಾಸ

2014ರಲ್ಲಿ ಭಾರತ ಸರ್ಕಾರವು ದೇಶದ ಏಕತೆಗಾಗಿ ಸರ್ದಾರ್‌ ವಲ್ಲಭ್‌ಭಾಯಿ ಪಟೇಲ್‌ ನೀಡಿದ ಕೊಡುಗೆಯನ್ನು ಸ್ಮರಿಸಲು, ಅವರ ಜನ್ಮದಿನವಾದ ಅಕ್ಟೋಬರ್‌ 31‌ರಂದು ‘ರಾಷ್ಟ್ರೀಯ ಏಕತಾ ದಿನ’ವನ್ನು ಆಚರಿಸಲು ತೀರ್ಮಾನ ಕೈಗೊಂಡಿತ್ತು. ಅಂದಿನಿಂದ ಪ್ರತಿವರ್ಷ ಅಕ್ಟೋಬರ್‌ 31‌ರಂದು ದೇಶಾದ್ಯಂತ ‘ರಾಷ್ಟ್ರೀಯ ಏಕತಾ ದಿನ’ವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೇಶಕ್ಕಾಗಿ ಅವರು ನೀಡಿರುವ ಅದ್ಭುತ ಸೇವೆಗಾಗಿ ಅವರನ್ನು ಗೌರವಿಸಲಾಗುತ್ತಿದೆ.

ಆಚರಣೆಯ ಉದ್ದೇಶ

ಪ್ರತಿವರ್ಷ ‘ರಾಷ್ಟ್ರೀಯ ಏಕತಾ ದಿನ’ದ ಅಂಗವಾಗಿ ನಾನಾ ರೀತಿಯ ಅಭಿಯಾನಗಳನ್ನು ಕೂಡ ಹಮ್ಮಿಕೊಳ್ಳಲಾಗುತ್ತದೆ. ಸರ್ದಾರ್‌ ವಲ್ಲಭ್‌ಭಾಯಿ ಪಟೇಲ್ ಅವರು ಭಾರತದ ಇತಿಹಾಸಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಜಾಗೃತಿ ಮೂಡಿಸಲು ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತದೆ.

ಇದನ್ನೂ ಓದಿ: ಕೇರಳ ಸಿಎಂ ಕಾರಿಗೆ ಅಪತ್ತು ತಂದ ಸ್ಕೂಟಿ ಮಹಿಳೆ

ಏಕತಾ ಪ್ರತಿಮೆ ನಿರ್ಮಾಣ

ಸರ್ದಾರ್‌ ಪಟೇಲ್‌ ಅವರಿಗೆ ಗೌರವ ನೀಡುವ ಉದ್ದೇಶದಿಂದ ಗುಜರಾತ್‌ನ ಕೇವಾಡಿಯಾದಲ್ಲಿ, 182 ಮೀಟರ್‌(597 ಅಡಿ) ಎತ್ತರದ ಬೃಹತ್‌ ಪಟೇಲ್‌ ಅವರ ಮೂರ್ತಿಯನ್ನು ನಿರ್ಮಿಸಲಾಗಿದ್ದು, ಇದನ್ನು “ಏಕತಾ ಪ್ರತಿಮೆ” ಎಂದೇ ಕರೆಯಲಾಗುತ್ತದೆ. ಈ ಪ್ರತಿಮೆ ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ನಿರ್ಮಾಣ ಕಾಮಗಾರಿ ಅಕ್ಟೋಬರ್ 2013ರಲ್ಲಿ ಆರಂಭವಾಗಿ. ಒಟ್ಟು 27 ಬಿಲಿಯನ್ ಅಮೆರಿಕನ್‌ ಡಾಲರ್‌ ವೆಚ್ಚದಲ್ಲಿ “ಏಕತಾ ಪ್ರತಿಮೆ” ನಿರ್ಮಾಣಗೊಂಡಿದ್ದು, ಇದನ್ನು ಭಾರತೀಯ ಶಿಲ್ಪಿ ರಾಮ್ ವಿ. ಸುತಾರ್ ವಿನ್ಯಾಸಗೊಳಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ