ಭಾರತ-ಪಾಕಿಸ್ತಾನ ಗಡಿಯಲ್ಲಿ ಸೈನಿಕರಿಗೆ ಸ್ವೀಟ್ ತಿನ್ನಿಸಿ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

ಭಾರತ-ಪಾಕಿಸ್ತಾನ ಗಡಿಯಲ್ಲಿ ಸೈನಿಕರಿಗೆ ಸ್ವೀಟ್ ತಿನ್ನಿಸಿ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

ಸುಷ್ಮಾ ಚಕ್ರೆ
|

Updated on: Oct 31, 2024 | 2:55 PM

ನರೇಂದ್ರ ಮೋದಿ ಪ್ರಧಾನಮಂತ್ರಿಯಾದಾಗಿನಿಂದ ಪ್ರತಿ ವರ್ಷ ಸೈನಿಕರ ಜೊತೆ ದೀಪಾವಳಿ ಆಚರಿಸುವ ಸಂಪ್ರದಾಯ ರೂಢಿಸಿಕೊಂಡು ಬಂದಿದ್ದಾರೆ. ಈ ಬಾರಿ ಕೂಡ ಗುಜರಾತ್​​ನ ಕಚ್​ನಲ್ಲಿ ಸೈನಿಕರಿಗೆ ಸ್ವೀಟ್ ತಿನ್ನಿಸುವ ಮೂಲಕ ಪಿಎಂ ಮೋದಿ ದೀಪಾವಳಿಯನ್ನು ಆಚರಿಸಿದ್ದಾರೆ.

ಕಚ್: ಗುಜರಾತ್​ನ ಕಚ್​ನಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಯೋಧರೊಂದಿಗೆ ಪ್ರಧಾನಿ ನರೇಂದ್ರ ಮೋದಿ ದೀಪಾವಳಿ ಆಚರಿಸಿದ್ದಾರೆ. ಕಚ್‌ನಲ್ಲಿ ಬಿಎಸ್‌ಎಫ್ ಯೋಧರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ, ಅವರಿಗೆ ಸ್ವೀಟ್ ಹಂಚಿದ್ದಾರೆ. ಕಚ್​ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಸರ್ ಕ್ರೀಕ್ ಬಳಿಯ ಲಕ್ಕಿ ನಾಲಾದಲ್ಲಿ ಸೈನಿಕರೊಂದಿಗೆ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಿದ ಪ್ರಧಾನಿ ಮೋದಿ ಭಾರತೀಯ ಸೈನಿಕರಿಗೆ ಸಿಹಿತಿಂಡಿಗಳನ್ನು ತಿನ್ನಿಸಿದ್ದಾರೆ. 2014ರಿಂದ ಪ್ರಧಾನಿ ನರೇಂದ್ರ ಮೋದಿ ಪ್ರತಿ ವರ್ಷವೂ ದೀಪಾವಳಿಯನ್ನು ದೇಶದ ವಿವಿಧ ಮೂಲೆಗಳಲ್ಲಿ ನಿಯೋಜಿಸಲಾದ ಸೈನಿಕರೊಂದಿಗೆ ಆಚರಿಸುವ ಸಂಪ್ರದಾಯ ರೂಢಿಸಿಕೊಂಡಿದ್ದಾರೆ. ಸೇನೆಯ ಸಮವಸ್ತ್ರವನ್ನು ಧರಿಸಿರುವ ಪ್ರಧಾನಿ ಮೋದಿ ಕಚ್​ನಲ್ಲಿ ನಿಯೋಜಿಸಲಾದ ಸೈನಿಕರಿಗೆ ಸಿಹಿತಿಂಡಿಗಳನ್ನು ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ