ಮುಖಂಡರನ್ನು ಸಂಬೋಧಿಸುತ್ತಾ ಸಿದ್ದರಾಮಯ್ಯ, ಶಿವಕುಮಾರ್​ಗೆ ಬುದ್ಧಿವಾದ ಹೇಳಿದ ಮಲ್ಲಿಕಾರ್ಜುನ ಖರ್ಗೆ

ಮುಖಂಡರನ್ನು ಸಂಬೋಧಿಸುತ್ತಾ ಸಿದ್ದರಾಮಯ್ಯ, ಶಿವಕುಮಾರ್​ಗೆ ಬುದ್ಧಿವಾದ ಹೇಳಿದ ಮಲ್ಲಿಕಾರ್ಜುನ ಖರ್ಗೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 31, 2024 | 4:20 PM

ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ದಿನಗಳನ್ನು ಜ್ಞಾಪಿಸಿಕೊಂಡ ಮಲ್ಲಿಕಾರ್ಜುನ ಖರ್ಗೆ, ಅರಸು ಅವರಿಗೆ ಯಾರೂ ಜೈಕಾರ ಹಾಕುತ್ತಿರಲಿಲ್ಲ, ಅದರೂ ಅವರು ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ಧರಾಗಿ ರಾಜ್ಯವನ್ನು ಅದ್ಭುತವಾಗಿ ಮುನ್ನಡೆಸಿದರು, ಅವರನ್ನು ಪಕ್ಷ ಬಿಟ್ಟು ಹೋಗುವಂತೆ ಯಾರೂ ಹೇಳಿರಲಿಲ್ಲ ಅವರಾಗೇ ಹೋದರು, ಪಕ್ಷದಲ್ಲೇ ಉಳಿದಿದ್ದರೆ ಇನ್ನೈದು ವರ್ಷಗಳ ಸಿಎಂ ಆಗಿ ಮುಂದುವರಿಯುತ್ತಿದ್ದರು ಎಂದರು.

ಬೆಂಗಳೂರು: ನಗರದ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದ ಕಾಂಗ್ರೆಸ್ ನಾಯಕರು, ಮುಖಂಡರಿಗೆ ಒಗ್ಗಟ್ಟಾಗಿರಲು ಹೇಳಿದರು. ವಿಘ್ನ ಸಂತೋಷ ಶಾಶ್ವತವಲ್ಲ, ನಿಮ್ಮ ಒಗ್ಗಟ್ಟಿನಲ್ಲೇ ಬಲವಿದೆ, ಸಂತೋಷವಿದೆ; ಪಕ್ಷದ ಒಬ್ಬ ನಾಯಕನಿಗೆ ಸಮಸ್ಯೆಯಾದಾಗ ಬೇರೆ ನಾಯಕರು ಸಂತೋಷಟ್ಟರೆ ಸಂಘಟನೆಯನ್ನು ಮುರಿಯಲು ಹೊರಗಿನವರ ಆವಶ್ಯಕತೆಯೇ ಇರಲ್ಲ ಎಂದು ಖರ್ಗೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಶಿಗ್ಗಾವಿ ಉಪ ಚುನಾವಣೆಗೆ ಪಠಾಣ್ ಹೆಸರನ್ನು ಮಲ್ಲಿಕಾರ್ಜುನ ಖರ್ಗೆ ಸೂಚಿಸಿದ್ದಾರೆ: ಸಿದ್ದರಾಮಯ್ಯ