ಚತ್ತೀಸ್ಗಡ್: ಇತ್ತೀಚೆಗಷ್ಟೇ 22 ಯೋಧರನ್ನು ಹತ್ಯೆ ಮಾಡಿದ್ದ ಚತ್ತೀಸ್ಗಡ್ ನಕ್ಸಲರು ಈಗೊಂದು ಹೇಳಿಕೆ ಬಿಡುಗಡೆ ಮಾಡಿದ್ದು, ತಾವು ರಕ್ಷಣಾ ಪಡೆಗೆ ಸೇರಿದ ಎರಡು ಡ್ರೋನ್ಗಳನ್ನು ಹೊಡೆದುರುಳಿಸಿದ್ದಾಗಿ ತಿಳಿಸಿದ್ದಾರೆ. ಅಲ್ಲದೆ, ಆ ಫೋಟೋವನ್ನೂ ಬಿಡುಗಡೆ ಮಾಡಿದ್ದಾರೆ. ತಾವು ಹೊಡೆದುರುಳಿಸಿದ್ದೇವೆ ಎಂದು ಹೇಳಿರುವ ಕ್ವಾಡ್ಕಾಪ್ಟರ್ನ ಫೋಟೋದೊಂದಿಗೆ ಆಡಿಯೋ ಸಂದೇಶವನ್ನೊಂದನ್ನು ಬಿಡುಗಡೆ ಮಾಡಿರುವ ನಕ್ಸಲರ ದಂಡಕಾರಣ್ಯ ವಿಶೇಷ ವಲಯ ಸಮಿತಿ ಪೊಲೀಸರಿಗೆ, ರಕ್ಷಣಾ ಸಿಬ್ಬಂದಿಗೆ ಸವಾಲನ್ನೂ ಹಾಕಿದೆ.
ಬಾಂಬ್ ಸ್ಫೋಟಿಸಿ ಡ್ರೋಣ್ನ್ನು ಕೆಡವಲಾಗಿದೆ. ಈ ಸ್ಥಳಕ್ಕೆ ಬಸ್ತಾರಾದ ಐಜಿ, ಪೊಲೀಸ್ ಸಿಬ್ಬಂದಿಯನ್ನು ಕಳಿಸಿ ಪರಿಶೀಲನೆ ಮಾಡಬೇಕು. ಅದು ರಕ್ಷಣಾ ಪಡೆಯ ಡ್ರೋನ್ ಹೌದೋ, ಅಲ್ಲವೋ ಎಂಬುದನ್ನು ದೃಢೀಕರಿಸಬೇಕು ಎಂದು ನಕ್ಸಲ್ ಮುಖಂಡರು ಹೇಳಿದ್ದು ಆಡಿಯೋದಲ್ಲಿ ಕೇಳುತ್ತದೆ. ಇನ್ನು, ಕೇಂದ್ರೀಯ ಮತ್ತು ರಾಜ್ಯ ರಕ್ಷಣಾ ಪಡೆಗಳು ಜಂಟಿಯಾಗಿ ನಮ್ಮ ವಿರುದ್ಧ ಕಾರ್ಯಾಚರಣೆ ನಡೆಸಿದ್ದು, ಈ ಪ್ರಯತ್ನದ ಭಾಗವಾಗಿ ಬಿಜಾಪುರ ಜಿಲ್ಲೆಯ ಎರಡು ಹಳ್ಳಿಗಳ ಸಮೀಪ ಬಾಂಬ್ ಹಾಕಿವೆ ಎಂದು ನಕ್ಸಲರು ಹೇಳಿಕೊಂಡಿದ್ದಾರೆ. ಆದರೆ ಇದನ್ನು ಪೊಲೀಸ್ ಇಲಾಖೆ ಅಲ್ಲಗಳೆದಿದೆ.
ರಕ್ಷಣಾ ಪಡೆಗಳ ಡ್ರೋಣ್ ವಿರುದ್ಧ ಏಪ್ರಿಲ್ 19ರಂದು ನಾವು ಏರ್ಸ್ಟ್ರೈಕ್ ಮಾಡಿದ್ದೇವೆ ಎಂದು ಹೇಳಿಕೊಂಡಿರುವ ನಕ್ಸಲರು, ಈ ಡ್ರೋಣ್ಗಳನ್ನು ನಮ್ಮ ಮೇಲೆ ಅಟ್ಯಾಕ್ ಮಾಡಲೆಂದೇ ಸಿದ್ಧಪಡಿಸಲಾಗಿತ್ತು ಎಂದು ಪ್ರತಿಪಾದಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದರುವ ಬಸ್ತಾರ್ ವಲಯದ ಐಜಿ ಸುಂದರ್ ರಾಜ್ ಪಿ, ನಕ್ಸಲರು ಡ್ರೋಣ್ಗಳನ್ನು ಹೊಡೆದಿದ್ದೇವೆ ಎಂದು ಹೇಳುತ್ತಿರುವುದು ಸುಳ್ಳು. ಅವರಲ್ಲಿ ಭಯ ಕಾಡುತ್ತಿದೆ. ಹಾಗಾಗಿ ಇಂಥ ಹೇಳಿಕೆಗಳನ್ನು ಬಿಡುಗಡೆ ಮಾಡುತ್ತಿದ್ದಾರೆ ಎಂದಿದ್ದಾರೆ.
ನಕ್ಸಲಪೀಡಿತ ಚತ್ತೀಸ್ಗಡ್ದಲ್ಲಿ ಇದುವರೆಗೆ ನಕ್ಸಲರ ದಾಳಿಗೆ ಅದೆಷ್ಟೋ ಮುಗ್ಧ ಜೀವಗಳು ಬಲಿಯಾಗಿವೆ. ಪೊಲೀಸ್ ಸಿಬ್ಬಂದಿ, ಯೋಧರ ಪ್ರಾಣ ಹೋಗಿದೆ. ಇತ್ತೀಚೆಗಷ್ಟೇ ಸುಕ್ಮಾದಲ್ಲಿ ನಡೆದ ಎನ್ಕೌಂಟರ್ನಲ್ಲಿ 22ಕ್ಕೂ ಹೆಚ್ಚು ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ.
ಇದನ್ನೂ ಓದಿ: ವೇಗವಾಗಿ ಆಕ್ಸಿಜನ್ ಪೂರೈಕೆ ಮಾಡುವಂತೆ ಉನ್ನತ ಮಟ್ಟದ ಸಭೆಯಲ್ಲಿ ಸೂಚನೆ ನೀಡಿದ ಪ್ರಧಾನಿ ಮೋದಿ
ಈ ಮೋದಿ ಸರ್ಕಾರ ಸರಿ ಇಲ್ಲ, ಕಾಮನ್ ಮ್ಯಾನ್ ಜೀವನ ನೋಡಿ ಅಂತಾ ಸರ್ಕಾರದ ವಿರುದ್ಧ ಜನ ಕಿಡಿ
Naxals in Chhattisgarh claim that they shoot down police drones
Published On - 4:52 pm, Thu, 22 April 21