ಕೊರೊನಾ ಸೋಂಕು ಹೆಚ್ಚಳ: ವಿಭಿನ್ನ ರೀತಿಯಲ್ಲಿ ಜಾಗೃತಿ ಮೂಡಿಸಿದ ಮುಂಬೈ ಪೊಲೀಸರು
ಇತ್ತೀಚೆಗೆ ಮುಂಬೈ ಪೊಲೀಸರು ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವುದು ಇದೀಗ ವೈರಲ್ ಆಗಿದೆ.
ದಿನ ಸಾಗುತ್ತಿದ್ದಂತೆಯೇ ಕೊವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಕೊರೊನಾ ಮಹಾಮಾರಿಯ ಆರ್ಭಟ ಎಲ್ಲರನ್ನೂ ಚಿಂತೆಗೀಡು ಮಾಡಿದೆ. ನಾಗರಿಕರು ಮತ್ತು ಸರ್ಕಾರಿ ಸಂಸ್ಥೆಗಳು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಯ ಮೂಲಕ ಜನರಿಗೆ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಅಂತೆಯೇ ಹೊರಗಡೆ ತಿರುಗಾಡದೇ ಮನೆಯಲ್ಲಿಯೇ ಇರುವಂತೆ ಸೂಚನೆ ನೀಡುತ್ತಿದ್ದಾರೆ. ಈ ಕುರಿತಂತೆ ನಾಗರಿಕರಿಗೆ ಜಾಗೃತಿ ಮೂಡಿಸಲು ಮುಂಬೈ ಪೊಲೀಸರು ಹಂಚಿಕೊಂಡ ಪೋಸ್ಟ್ ಇಲ್ಲಿದೆ.
ಸೋಷಿಯಲ್ ಮೀಡಿಯಾದಲ್ಲಿ ಮುಂಬೈ ಪೊಲೀಸರನ್ನು ಅನುಸರಿಸುವ ನೆಟ್ಟಿಗರು, ಕೊವಿಡ್ ತಡೆ ಕ್ರಮಗಳಿಗೆ ಸಂಬಂಧಿಸಿದಂತೆ ಮುಖಗವಸು ಧರಿಸುವುದು ಮತ್ತು ಇತರ ಮಾರ್ಗಸೂಚಿಗಳ ಕುರಿತಾಗಿ ನಿರಂತರವಾಗಿ ಮಾತನಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ಮುಂಬೈ ಪೊಲೀಸರು ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವುದು ಇದೀಗ ವೈರಲ್ ಆಗಿದೆ.
ಮುಂಬೈ ಪೊಲೀಸರು ಹಂಚಿಕೊಂಡ ಒಟ್ಟು ನಾಲ್ಕು ಫೋಟೊಗಳಲ್ಲಿ ಪ್ರತಿ ಫೋಟೋವೂ ಕೂಡಾ ತಿಂಡಿ-ತಿನಿಸುಗಳಿಗೆ ಸಂಬಂಧಿಸಿದ ಪೋಸ್ಟ್ ಆಗಿದೆ. ಇದರಿಂದ ಪ್ರತಿಯೊಬ್ಬರೂ ಮನೆಯಲ್ಲಿಯೇ ಇರಬೇಕು, ಕೊವಿಡ್ ಸಾಂಕ್ರಾಮಿಕ ಎಲ್ಲೆಡೆ ಹರಡುತ್ತಿದೆ. ಹೊರಗಡೆಯ ಆಹಾರವನ್ನು ಸೇವಿಸುವುದರ ಬದಲು ಮನೆಯಲ್ಲಿಯೇ ಆನ್ಲೈನ್ ಆರ್ಡರ್ ಮಾಡಿ ವಿವಿಧ ತಿಂಡಿಗಳನ್ನು ಸೇವಿಸಿರಿ ಎಂಬ ಕಿವಿಮಾತು ಅಡಗಿದೆ.
ಈ ಪೋಸ್ಟ್ ಗಮನಿಸಿದ ನೆಟ್ಟಿಗರು ಸಾವಿರಾರು ಲೈಕ್ ನೀಡಿದ್ದಾರೆ. ನೂರಾರು ಕಮೆಂಟ್ಗಳು ಕೂಡಾ ಬಂದಿವೆ. ಮುಂಬೈ ಪೊಲೀಸರ ಸೃಜನಾತ್ಮಕತೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಅತ್ಯುತ್ತಮವಾದ ಸಾಮಾಜಿಕ ಮಾಧ್ಯಮದ ವಿಷಯವಿದು’ ಎಂಬ ಅಭಿಪ್ರಾಯಗಳೂ ನೆಟ್ಟಿಗರಿಂದ ಬಂದಿವೆ.
View this post on Instagram
ಇದರ ಜೊತೆಗೆ, ನಮ್ಮ ಅಗತ್ಯ ಹಾಗೂ ಅನಿವಾರ್ಯತೆಗಳ ಅಡಿಯಲ್ಲಿ ಇದು ಸೇರುವುದಿಲ್ಲ. ಆದರೆ ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ. ಜೊತೆಗೆ, ಆರೋಗ್ಯಕರ ಕ್ರಮವೂ ಹೌದು. ಸ್ಟೇ ಹೋಮ್.. ಸ್ಟೇ ಸೇಫ್ ಎಂದು ಮುಂಬೈ ಪೊಲೀಸ್ ಟ್ವೀಟ್ ಮಾಡಿದ್ದಾರೆ.
We understand it’s essential for you sir but unfortunately it doesn’t fall under our essentials or emergency categories!
Distance makes the heart grow fonder & currently, you healthier
P.S. We wish you lifetime together. This is just a phase. #StayHomeStaySafe https://t.co/5221kRAmHp
— Mumbai Police (@MumbaiPolice) April 22, 2021
ಇದನ್ನೂ ಓದಿ: ಕಳ್ಳನ ಪಶ್ಚಾತ್ತಾಪ: ಸಾರಿ, ಅದು ಕೊರೊನಾ ಲಸಿಕೆ ಅಂತ ಗೊತ್ತಾಗಿದ್ರೆ ಕದೀತಾ ಇರ್ಲಿಲ್ಲ
1 ಲಕ್ಷ ಡೋಸ್ ಕೊರೊನಾ ಲಸಿಕೆ ಖರೀದಿಗೆ ರಾಜ್ಯ ಸರ್ಕಾರ ಆದೇಶ; 400 ಕೋಟಿ ವೆಚ್ಚ