AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳ್ಳನ ಪಶ್ಚಾತ್ತಾಪ: ಸಾರಿ, ಅದು ಕೊರೊನಾ ಲಸಿಕೆ ಅಂತ ಗೊತ್ತಾಗಿದ್ರೆ ಕದೀತಾ ಇರ್ಲಿಲ್ಲ

ಆದರೆ ಲಸಿಕೆ ಕದ್ದ ಅಪರಿಚಿತ ವ್ಯಕ್ತಿ ಚೀಟಿ ಬರೆದು ಲಸಿಕೆಗಳನ್ನು ಹಿಂತಿರುಗಿಸಿದ್ದಾರೆ. ಆ ಬ್ಯಾಗ್​ನಲ್ಲಿ ಕೊರೊನಾ ಲಸಿಕೆ ಇತ್ತು ಎಂಬುದು ತಿಳಿದಿರಲಿಲ್ಲ. ಮಾಹಿತಿ ಕೊರತೆಯಿಂದ ಕೊರೊನಾ ಲಸಿಕೆ ಇದ್ದ ಬ್ಯಾಗ್ ಕದ್ದುಬಿಟ್ಟೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಕಳ್ಳನ ಪಶ್ಚಾತ್ತಾಪ: ಸಾರಿ, ಅದು ಕೊರೊನಾ ಲಸಿಕೆ ಅಂತ ಗೊತ್ತಾಗಿದ್ರೆ ಕದೀತಾ ಇರ್ಲಿಲ್ಲ
ಪತ್ರ
guruganesh bhat
| Edited By: |

Updated on:Apr 23, 2021 | 12:35 PM

Share

ಚಂಡೀಗಢ: ಕ್ಷಮಿಸಿ, ಅದರಲ್ಲಿ ಕೊರೊನಾ ಲಸಿಕೆ ಇದೆ ಎಂದು ನನಗೆ ಖಂಡಿತಾ ತಿಳಿದಿರಲಿಲ್ಲ ಎಂದು ಹಿಂದಿಯಲ್ಲಿ ಬರೆದಿದ್ದ ಅಪರಿಚಿತ ಚೀಟಿಯೊಂದು ಸುದ್ದಿ ಮಾಡುತ್ತಿದೆ. ಇಂದು ಬೆಳಗ್ಗೆಯಷ್ಟೇ ಹರಿಯಾಣದ ಜಿಂದ್​ನಲ್ಲಿರುವ ಸಿವಿಲ್​ ಆಸ್ಪತ್ರೆಯ ಪಿಪಿಸಿ ಸೆಂಟರ್​ನಲ್ಲಿ ಕಳ್ಳರ ಕೈಚಳಕಕ್ಕೆ ಬರೋಬ್ಬರಿ 1,710 ಡೋಸ್ ಕೊರೊನಾ ಲಸಿಕೆ ಮಾಯವಾಗಿತ್ತು. ಈ ಸುದ್ದಿ ದೇಶದಾದ್ಯಂತ ಸಂಚಲನ ಮೂಡಿಸಿತ್ತು. ಆದರೆ ಲಸಿಕೆ ಕದ್ದ ಅಪರಿಚಿತ ವ್ಯಕ್ತಿ ಚೀಟಿ ಬರೆದು ಲಸಿಕೆಗಳನ್ನು ಹಿಂತಿರುಗಿಸಿದ್ದಾರೆ. ಆ ಬ್ಯಾಗ್​ನಲ್ಲಿ ಕೊರೊನಾ ಲಸಿಕೆ ಇತ್ತು ಎಂಬುದು ತಿಳಿದಿರಲಿಲ್ಲ. ಮಾಹಿತಿ ಕೊರತೆಯಿಂದ ಕೊರೊನಾ ಲಸಿಕೆ ಇದ್ದ ಬ್ಯಾಗ್ ಕದ್ದುಬಿಟ್ಟೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಕೊರೊನಾ ಲಸಿಕೆ ಕದ್ದ ವ್ಯಕ್ತಿ ಹತ್ತಿರದ ಚಹಾ ಅಂಗಡಿಯೊಂದರ ಬಳಿ ಇನ್ನೋರ್ವ ವ್ಯಕ್ತಿಗೆ ಲಸಿಕೆ ಇದ್ದ ಬ್ಯಾಗ್​ನ್ನು ಕೊಟ್ಟು ಮರಳಿ ಆಸ್ಪತ್ರೆಗೆ ನೀಡುವಂತೆ ಕೇಳಿಕೊಂಡಿದ್ದಾರೆ. ತಾನು ಪೊಲೀಸ್ ಸಿಬ್ಬಂದಿಗೆ ಆಹಾರ ಸರಬರಾಜು ಮಾಡಲೆಂದು ಆಗಮಿಸಿದ್ದೆ, ಆನಂತರ ಇನ್ನೊಂದು ಕಡೆ ಆಹಾರ ಸರಬರಾಜು ಮಾಡಬೇಕಿದೆ ಎಂದು ಆ ವ್ಯಕ್ತಿ ತಿಳಿಸಿದ್ದಾಗಿ ವರದಿಯಾಗಿದೆ. ಕೊರೊನಾ ಲಸಿಕೆ ಕದ್ದ ಕುರಿತು ಪಶ್ಚಾತಾಪ ಪಟ್ಟು ಲಸಿಕೆಯ ಬ್ಯಾಗ್ ಮರಳಿಸಿದ್ದಾರೆ ಎಂದು ಸಹ ಹೇಳಲಾಗುತ್ತಿದೆ.

ಭಾರತದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹರಡಿದ್ದು ಹಲವೆಡೆ ಪರಿಸ್ಥಿತಿ ಗಂಭೀರ ಸ್ವರೂಪಕ್ಕೆ ತಿರುಗಿರುವುದರಿಂದ ಸೋಂಕಿನ ತೀವ್ರತೆಗೆ ಆರೋಗ್ಯ ವ್ಯವಸ್ಥೆ ಅಕ್ಷರಶಃ ನಲುಗಿ ಹೋಗಿದೆ. ಮೊದಲ ಅಲೆಗಿಂತಲೂ ಹೆಚ್ಚಿನ ಕಠಿಣತೆ ಈಗ ಎದುರಾಗಿದೆ. ಸದ್ಯದ ಸಂದರ್ಭದಲ್ಲಿ ಸೋಂಕು ತಡೆಗಟ್ಟಲು ಕೊರೊನಾ ಲಸಿಕೆಗೆ ಸರ್ಕಾರ ಹೆಚ್ಚು ಮಹತ್ವ ನೀಡುತ್ತಿದ್ದು, ಲಸಿಕೆ ಉತ್ಪಾದನೆಯನ್ನೂ ಹೆಚ್ಚಿಸಲಾಗುತ್ತಿದೆ. ಆದರೆ, ಇಂತಹ ಸಂಕಷ್ಟದ ಸಂದರ್ಭದಲ್ಲೇ ಆಸ್ಪತ್ರೆಗಳ ಮೇಲೆ ಕಣ್ಣಿಟ್ಟಿರುವ ಕಳ್ಳರು ಲಸಿಕೆಯನ್ನೇ ಕದ್ದಿದ್ದಾರೆ ಎಂದು ವರದಿಯಾಗಿತ್ತು.

ಜಿಂದ್​ನ ಸಿವಿಲ್ ಆಸ್ಪತ್ರೆಯ ಪಿಪಿಸಿ ಸೆಂಟರ್‌ನಿಂದ ಲಸಿಕೆ ಕಳ್ಳತನವಾಗಿತ್ತು. ಕೊವಿಶೀಲ್ಡ್​ ಹಾಗೂ ಕೊವ್ಯಾಕ್ಸಿನ್ ಎರಡೂ ಲಸಿಕೆಗಳನ್ನು ಕಳ್ಳರು ಹೊತ್ತೊಯ್ದಿರುವುದು ಗಮನಕ್ಕೆ ಬಂದಿತ್ತು. ಇದೇ ಸಂದರ್ಭದಲ್ಲಿ ಆಸ್ಪತ್ರೆಗೆ ಸಂಬಂಧಿಸಿದ ಕೆಲ ಕಡತಗಳು ಸಹ ಕಣ್ಮರೆಯಾಗಿದ್ದವು. ಈ ಕುರಿತು ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ: Explainer: ಕೊವಿಡ್ ನಿರ್ವಹಣೆ ಕೈಪಿಡಿ, ನಿಮ್ಮ ಮನೆಯಲ್ಲಿಯೂ ಇರಲಿ ಈ ಆಪ್ತಮಿತ್ರ

1 ಲಕ್ಷ ಡೋಸ್ ಕೊರೊನಾ ಲಸಿಕೆ ಖರೀದಿಗೆ ರಾಜ್ಯ ಸರ್ಕಾರ ಆದೇಶ; 400 ಕೋಟಿ ವೆಚ್ಚ

(Haryana Covid vaccine thief returns vaccine and wrote a letter asking sorry )

Published On - 11:07 pm, Thu, 22 April 21