NCP ಅಧ್ಯಕ್ಷ ಶರದ್ ಪವಾರ್​ಗೆ 80ರ ಸಂಭ್ರಮ; ಹಿರಿಯ ನಾಯಕನಿಗೆ ಅದೃಷ್ಟ ತರಲಿದೆಯಾ ಈ ಬರ್ತ್​ ಡೇ?

|

Updated on: Dec 12, 2020 | 10:49 AM

ಇಂದು (ಡಿ.12) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಶರದ್​ ಪವಾರ್​​ಗೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ. ದೇವರು ಶರದ್​ ಪವಾರ್ ಅವರಿಗೆ ಆಯುರಾರೋಗ್ಯ ನೀಡಿ, ಆಶೀರ್ವದಿಸಲಿ ಎಂದು ಹಾರೈಸಿದ್ದಾರೆ.

NCP ಅಧ್ಯಕ್ಷ ಶರದ್ ಪವಾರ್​ಗೆ 80ರ ಸಂಭ್ರಮ; ಹಿರಿಯ ನಾಯಕನಿಗೆ ಅದೃಷ್ಟ ತರಲಿದೆಯಾ ಈ ಬರ್ತ್​ ಡೇ?
ಶರದ್​ ಪವಾರ್​
Follow us on

ನವದೆಹಲಿ: ಎನ್​ಸಿಪಿ ಅಧ್ಯಕ್ಷ ಶರದ್ ಪವಾರ್​ಗೆ ಇಂದು 80ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಇದೊಂದು ವಿಶೇಷವಾದರೆ, ಇನ್ನೊಂದು ವಿಶೇಷ ಕಾರಣಕ್ಕೆ ಅವರು ಕಳೆದ ಎರಡು ದಿನಗಳಿಂದ ಸುದ್ದಿಯಲ್ಲಿದ್ದಾರೆ.

ಯುಪಿಎ ಮೈತ್ರಿಕೂಟದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು  ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನಿರಾಕರಿಸಿದ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ಶರದ್ ಪವಾರ್ ಏರಲಿದ್ದಾರೆ ಎಂಬ ಸುದ್ದಿ ಬಲವಾಗಿ ಕೇಳಿಬರುತ್ತಿದೆ. ಹೊಸ ಅಧ್ಯಕ್ಷ ಸ್ಥಾನಕ್ಕೆ ಮುಂದಿನ ವರ್ಷ ಆರಂಭದಲ್ಲೇ ಚುನಾವಣೆ ನಡೆಯಲಿದ್ದು, ಈಗಾಗಲೇ ಅನೇಕ ನಾಯಕರು ಶರದ್ ಪವಾರ್​ ಬಗ್ಗೆ ಒಲವು ತೋರಿಸುತ್ತಿದ್ದಾರೆ ಎನ್ನಲಾಗಿದೆ.

ಹಿಂದೆ ಕಾಂಗ್ರೆಸ್​ನಲ್ಲೇ ಇದ್ದ ಶರದ್​ ಪವಾರ್ ಅವರು ಸೋನಿಯಾ ಗಾಂಧಿ ವಿರುದ್ಧವೇ ತೊಡೆತಟ್ಟಿ, ಪ್ರತ್ಯೇಕ ಪಕ್ಷ ಕಟ್ಟಿದವರು. ಮಾಜಿ ಕೇಂದ್ರ ಸಚಿವ, ಮುಖ್ಯಮಂತ್ರಿಯಾಗಿ ಕೆಲಸ ನಿರ್ವಹಿಸಿ, ರಾಜಕೀಯದಲ್ಲಿ ಅಪಾರ ಅನುಭವ ಹೊಂದಿರುವವರು.

ಇದೀಗ ಮತ್ತೆ ತಮ್ಮ ಪಕ್ಷವನ್ನು ಕಾಂಗ್ರೆಸ್​ ಜತೆ ಸಂಪೂರ್ಣ ವಿಲೀನ ಮಾಡಿ, ಯುಪಿಎ ಮೈತ್ರಿಕೂಟದ ಅಧ್ಯಕ್ಷರಾಗುತ್ತಾರಾ ಎಂಬುದೇ ಪ್ರಶ್ನೆ. ಅದರಲ್ಲೂ 80ನೇ ವರ್ಷದಲ್ಲಿ ಈ ಮಹತ್ತರ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧರಾಗಿದ್ದಾರಾ ಎಂಬ ಕುತೂಹಲಕ್ಕೆ ಶೀಘ್ರವೇ ತೆರೆಬೀಳಲಿದೆ.

ಪ್ರಧಾನಿ ಮೋದಿ ವಿಶ್​
ಇಂದು (ಡಿ. 12) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಶರದ್​ ಪವಾರ್​​ಗೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ. ದೇವರು ಶರದ್​ ಪವಾರ್ ಅವರಿಗೆ ಆಯುರಾರೋಗ್ಯ ನೀಡಿ, ಆಶೀರ್ವದಿಸಲಿ ಎಂದು ಹಾರೈಸಿದ್ದಾರೆ.

 

 

ಯುಪಿಎ ಅಧ್ಯಕ್ಷ ಸ್ಥಾನಕ್ಕೆ ಸೋನಿಯಾ ನಂತರ ಶರದ್ ಪವಾರ್ ಆಯ್ಕೆ ಸಾಧ್ಯತೆ

Published On - 10:46 am, Sat, 12 December 20