AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಲಸಿಕೆ ಬಾಬತ್ತಿನಲ್ಲಿ APAC ರಾಷ್ಟ್ರಗಳಿಗೆ ADB ಸಂಸ್ಥೆಯಿಂದ 9 ಶತಕೋಟಿ ಡಾಲರ್ ಯೋಜನೆ ಜಾರಿ

ಏಷ್ಯಾ ಪೆಸಿಫಿಕ್ ವ್ಯಾಕ್ಸಿನ್ ಆ್ಯಕ್ಸೆಸ್ ಫೆಸಿಲಿಟಿ (ಎಪಿವಿಎಕ್ಸ್) ಎಂದು ಕರೆಯಲ್ಪಡುವ ಈ ಯೋಜನೆಯು ಆರ್ಥಿಕವಾಗಿ ಹಿಂದುಳಿದಿರುವ ರಾಷ್ಟ್ರಗಳು ಕೊರೊನಾ ಲಸಿಕೆ ಪಡೆಯಲು ವಂಚಿತರಾಗದಂತೆ ಗಮನಹರಿಸಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಕೊರೊನಾ ಲಸಿಕೆ ಬಾಬತ್ತಿನಲ್ಲಿ APAC ರಾಷ್ಟ್ರಗಳಿಗೆ ADB ಸಂಸ್ಥೆಯಿಂದ 9 ಶತಕೋಟಿ ಡಾಲರ್ ಯೋಜನೆ ಜಾರಿ
ಏಷ್ಯನ್ ಡೆವೆಲಪ್ಮೆಂಟ್ ಬ್ಯಾಂಕ್
sandhya thejappa
| Updated By: ಸಾಧು ಶ್ರೀನಾಥ್​|

Updated on: Dec 12, 2020 | 10:37 AM

Share

ದೆಹಲಿ: ಎಪಿಎಸಿ ( ಏಷ್ಯಾ ಪೆಸಿಫಿಕ್ ಮತ್ತು ಆಸ್ಟ್ರೇಲಿಯಾ ಖಂಡ) ಯ ದೇಶಗಳಿಗೆ ಕೊರೊನಾ ಲಸಿಕೆಗಳ ಪೂರೈಕೆಗೆ ನೆರವಾಗುವ ನಿಟ್ಟಿನಲ್ಲಿ ಏಷ್ಯನ್ ಡೆವೆಲಪ್ಮೆಂಟ್ ಬ್ಯಾಂಕ್ 9 ಬಿಲಿಯನ್ ಡಾಲರ್ ಮೊತ್ತದ ಯೋಜನೆಯನ್ನು ಜಾರಿಗೆ ತಂದಿದೆ.

ಏಷ್ಯಾ ಪೆಸಿಫಿಕ್ ವ್ಯಾಕ್ಸಿನ್ ಆ್ಯಕ್ಸೆಸ್ ಫೆಸಿಲಿಟಿ (ಎಪಿವಿಎಕ್ಸ್) ಎಂದು ಕರೆಯಲ್ಪಡುವ ಈ ಯೋಜನೆಯು ಆರ್ಥಿಕವಾಗಿ ಹಿಂದುಳಿದಿರುವ ರಾಷ್ಟ್ರಗಳು ಕೊರೊನಾ ಲಸಿಕೆ ಪಡೆಯಲು ವಂಚಿತವಾಗದಂತೆ ಗಮನಹರಿಸಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲಿ ಸುಮಾರು 14.3 ಮಿಲಿಯನ್ ಪ್ರಕರಣಗಳು ದಾಖಲಾಗಿದೆ. ಅಲ್ಲದೇ 2,00,000 ಕ್ಕೂ ಹೆಚ್ಚು ಸೋಂಕಿತರು ಕೊರೊನಾದಿಂದ ಜೀವ ಕಳೆದುಕೊಂಡಿದ್ದಾರೆ. ಇದರಿಂದ ಕೊರೊನಾ ಲಸಿಕೆ ಪೂರೈಕೆಗೆ ಆರ್ಥಿಕ ಪರಿಸ್ಥಿತಿ ಎದುರಾಗದಂತೆ ನಿಗಾ ವಹಿಸಲಾಗಿದೆ ಎಂದು ಎಡಿಬಿ ಅಧ್ಯಕ್ಷ ಮಸಾತ್ಸುಗಾ ಅಸಾಕಾವಾ ಅಭಿಪ್ರಾಯಪಟ್ಟರು.

ಜನರಿಗೆ ಆದಷ್ಟು ಬೇಗ ಲಸಿಕೆ ಹಾಕಲು ತಯಾರಿ ನಡೆಸುತ್ತಿರುವುದರಿಂದ, ಲಸಿಕೆಗಳನ್ನು ಸಂಗ್ರಹಿಸಲು ಹಣಕಾಸಿನ ಅಗತ್ಯವಿರುತ್ತದೆ ಮತ್ತು ಲಸಿಕೆ ಪ್ರಕ್ರಿಯೆಯನ್ನು ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲು ಈ ಯೋಜನೆಯಡಿ  ಸಾಧ್ಯವಾಗುತ್ತದೆ ಎಂದರು.

ಪಂಜಾಬ್​ನಲ್ಲಿ ನಿಲ್ಲದ ಕೊರೊನಾ ಹಾವಳಿ; ಹೊಸ ವರ್ಷದವರೆಗೆ ರಾತ್ರಿ ಕರ್ಫ್ಯೂ ವಿಸ್ತರಣೆ