Delhi Chalo: ಪಂಜಾಬ್ನಿಂದ ಹೊರಟಿವೆ 1300 ಟ್ರ್ಯಾಕ್ಟರ್ಗಳು, ಪ್ರತಿಭಟನೆಯ ಕಾವಿಗೆ ಟೋಲ್ಗಳು ಮುಕ್ತ ಮುಕ್ತ ಮುಕ್ತ..
ಪಂಜಾಬ್ ರೈತರ ಪ್ರತಿಭಟನೆ ವಿಭಿನ್ನ ಸ್ವರೂಪಗಳನ್ನು ಪಡೆಯಲಾರಂಭಿಸಿದೆ. ದೆಹಲಿ- ಹರಿಯಾಣ ಗಡಿ ಸಮೀಪದ ಬಸ್ತಾರಾ, ಶಂಭು ಟೋಲ್ ಗಳಲ್ಲಿ ನಿನ್ನೆ ರಾತ್ರಿ 12ರಿಂದ ಟೋಲ್ ಪಡೆಯುವುದನ್ನು ತಡೆಯಲಾಗಿದೆ. ಜೊತೆಗೆ, ಪಂಜಾಬ್ನಿಂದ ಇನ್ನೂ 1500 ವಾಹನಗಳು ದೆಹಲಿ ಚಲೋ ಸೇಲು ಹೊರಟಿವೆ.
ದೆಹಲಿ: ಪಂಜಾಬ್ನ 7 ಜಿಲ್ಲೆಗಳಿಂದ 1300 ಟ್ರ್ಯಾಕ್ಟರ್ಗಳೂ ಸೇರಿ, 1500 ವಾಹನಗಳು ದೆಹಲಿ ಚಲೋ ಸೇರಲು ಹೊರಟಿವೆ ಎಂದು ಕಿಸಾನ್ ಮಜ್ದೂರ್ ಸಂಘರ್ಷ್ ಸಮೀತಿ ತಿಳಿಸಿದೆ. ಈ ವಾರಾಂತ್ಯದಲ್ಲಿ ಈ ವಾಹನಗಳು ದೆಹಲಿ ಸೇರುವ ಸಾಧ್ಯತೆಯಿದೆ.
ವಿಭಿನ್ನ ಸ್ವರೂಪ ಪಡೆಯುತ್ತಿದೆ ದೆಹಲಿ ಚಲೋ ಪಂಜಾಬ್ ರೈತರ ಪ್ರತಿಭಟನೆ ವಿಭಿನ್ನ ಸ್ವರೂಪಗಳನ್ನು ಪಡೆಯಲಾರಂಭಿಸಿದೆ. ಪ್ರತಿಭಟನಾ ನಿರತರು ಇಂದು ಟೋಲ್ ಪ್ಲಾಜಾಗಳನ್ನು ಮುಕ್ತಗೊಳಿಸಿದ್ದಾರೆ. ದೆಹಲಿ- ಹರಿಯಾಣ ಗಡಿ ಸಮೀಪದ ಬಸ್ತಾರಾ, ಶಂಭು ಟೋಲ್ ಗಳಲ್ಲಿ ನಿನ್ನೆ ರಾತ್ರಿ 12ರಿಂದ ಟೋಲ್ ಪಡೆಯುವುದನ್ನು ತಡೆಗಟ್ಟಿದ್ದಾರೆ ಎಂದು ಟೋಲ್ ನಿರ್ವಾಹಕರು ತಿಳಿಸಿದ್ದಾರೆ. ಇಂದು ರಾತ್ರಿ 12ರವರೆಗೂ ಟೋಲ್ನಲ್ಲಿ ಹಣ ತೆಗೆದುಕೊಳ್ಳದಂತೆ ಎಚ್ಚರಿಕೆ ವಿಧಿಸಲಾಗಿದೆ.
#WATCH Haryana: Vehicles move through Shambhu Toll Plaza in Ambala after farmers closed the toll today, making it toll-free, as a part of their protest against #FarmLaws. pic.twitter.com/rdCM8BnQWO
— ANI (@ANI) December 12, 2020
ಅರ್ಧ ತಿಂಗಳಿಂದ ಪ್ರತಿಭಟನೆಯಲ್ಲಿ ಭಾಗಿಯಾದ ಹಿರಿಯ ರೈತರಿಗೆಂದು ಖಾಲ್ಸಾ ಏಡ್ ಸಂಸ್ಥೆ 25 ಫೂಟ್ ಮಸಾಜ್ ಕೇಂದ್ರಗಳನ್ನು ಆರಂಭಿಸಿದೆ. ವೃದ್ಧ ರೈತರ ಕಾಲುಗಳಿಗೆ ಉಚಿತವಾಗಿ ಮಸಾಜ್ ಮಾಡಿಕೊಡಲಿದ್ದೇವೆ ಎಂದು ಸಂಸ್ಥೆ ತಿಳಿಸಿದೆ.
ರೈತರ ಸಹನೆ ಪರೀಕ್ಷಿಸಬೇಡಿ ಎಂದ ಶರದ್ ಪವಾರ್ ಇತ್ತ ಎನ್ಸಿಪಿ ನಾಯಕ ಶರದ್ ಪವಾರ್ ಮತ್ತೊಮ್ಮೆ ಕೇಂದ್ರ ಸರ್ಕಾರವನ್ನು ಕುಟುಕಿದ್ದಾರೆ. ರೈತರ ಸಹನೆ ಪರೀಕ್ಷಿಸಬೇಡಿ ಎಂದಿರುವ ಅವರು, ಪ್ರತಿಭಟನೆ ದೇಶಾದ್ಯಂತ ವ್ಯಾಪಿಸುವ ಮುನ್ನವೇ ರೈತರ ಬೇಡಿಕೆಗೆ ಮಣಿಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇತ್ತ ಬಿಜೆಪಿ, ನೂತನ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಳ್ಳುತ್ತಿದೆ. ಮೊದಲಿನಂತೆಯೇ, ಕೃಷಿ ಮಂಡಿಗಳು ಮುಂದುವರೆಯಲಿವೆ. ವಿಪಕ್ಷಗಳು ರೈತರ ದಾರಿ ತಪ್ಪಿಸುವ ಕೆಲಸದಲ್ಲಿ ನಿರತವಾಗಿವೆ ಎಂದು ಆರೋಪಿಸಿದೆ.
ಎಂ.ಎಸ್. ಶ್ರೀರಾಮ್ ಸಂದರ್ಶನ| ಕೃಷಿ ಕಾಯ್ದೆಗಳ ಉಪಯುಕ್ತತೆ ಬಗ್ಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಇದೆ
Published On - 11:23 am, Sat, 12 December 20