ಎಚ್ಚೆತ್ತ BJP: ತಳಮಟ್ಟದಲ್ಲಿ ಜನತೆಗೆ ಕೃಷಿ ಕಾಯ್ದೆ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮ
ನೂತನ ಕೃಷಿ ಕಾಯ್ದೆಗಳ ಕುರಿತು ಜನ ಜಾಗೃತಿ ಮೂಡಿಸಲು ದೇಶಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಬಿಜೆಪಿ ನಿರ್ಧರಿಸಿದೆ.
ದೆಹಲಿ: ಅರ್ಧ ತಿಂಗಳು ಕಳೆದರೂ ನೂತನ ಕೃಷಿ ಕಾಯ್ದೆಗಳ ಕುರಿತ ದೆಹಲಿ ಚಲೋ ಚಳವಳಿ ಮುಂದುವರೆದಿದೆ. ವಿಪಕ್ಷಗಳು ಬಿಜೆಪಿ ವಿರುದ್ಧ ಜನ ಬೆಂಬಲ ಗಳಿಸಲು ರೈತರ ಆಕ್ರೋಶವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿವೆ. ಕೊನೆಗೂ ಎಚ್ಚೆತ್ತಿಕೊಂಡಿರುವ ಬಿಜೆಪಿ, ನೂತನ ಕೃಷಿ ಕಾಯ್ದೆಗಳ ಕುರಿತು ಜನ ಜಾಗೃತಿ ಮೂಡಿಸಲು ದೇಶಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ.
ಜನ ಸಾಮಾನ್ಯರಲ್ಲಿ ಕೃಷಿ ಕಾಯ್ದೆಗಳು ರೈತರಿಗೆ ಪ್ರಯೋಜನಕಾರಿ ಎಂಬ ಭಾವನೆ ಮೂಡಿಸುವ ಉದ್ದೇಶದೊಂದಿಗೆ ಬಿಜೆಪಿ ಈ ಕಾರ್ಯಕ್ರಮ ರೂಪಿಸಲಿದೆ. ದೇಶದ 700 ಜಿಲ್ಲೆಗಳಲ್ಲಿ ಪತ್ರಿಕಾಗೋಷ್ಠಿ, ಬಹಿರಂಗ ಸಭೆಗಳ ಮೂಲಕ ತಳಮಟ್ಟದಲ್ಲಿ ಜನತೆಗೆ ಕೃಷಿ ಕಾಯ್ದೆಯ ಅರಿವು ಮೂಡಿಸಲಾಗುವುದು ಎಂದು ಬಿಜೆಪಿ ತಿಳಿಸಿದೆ.