NCP ಅಧ್ಯಕ್ಷ ಶರದ್ ಪವಾರ್ಗೆ 80ರ ಸಂಭ್ರಮ; ಹಿರಿಯ ನಾಯಕನಿಗೆ ಅದೃಷ್ಟ ತರಲಿದೆಯಾ ಈ ಬರ್ತ್ ಡೇ?
ಇಂದು (ಡಿ.12) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಶರದ್ ಪವಾರ್ಗೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ. ದೇವರು ಶರದ್ ಪವಾರ್ ಅವರಿಗೆ ಆಯುರಾರೋಗ್ಯ ನೀಡಿ, ಆಶೀರ್ವದಿಸಲಿ ಎಂದು ಹಾರೈಸಿದ್ದಾರೆ.
ನವದೆಹಲಿ: ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ಗೆ ಇಂದು 80ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಇದೊಂದು ವಿಶೇಷವಾದರೆ, ಇನ್ನೊಂದು ವಿಶೇಷ ಕಾರಣಕ್ಕೆ ಅವರು ಕಳೆದ ಎರಡು ದಿನಗಳಿಂದ ಸುದ್ದಿಯಲ್ಲಿದ್ದಾರೆ.
ಯುಪಿಎ ಮೈತ್ರಿಕೂಟದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನಿರಾಕರಿಸಿದ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ಶರದ್ ಪವಾರ್ ಏರಲಿದ್ದಾರೆ ಎಂಬ ಸುದ್ದಿ ಬಲವಾಗಿ ಕೇಳಿಬರುತ್ತಿದೆ. ಹೊಸ ಅಧ್ಯಕ್ಷ ಸ್ಥಾನಕ್ಕೆ ಮುಂದಿನ ವರ್ಷ ಆರಂಭದಲ್ಲೇ ಚುನಾವಣೆ ನಡೆಯಲಿದ್ದು, ಈಗಾಗಲೇ ಅನೇಕ ನಾಯಕರು ಶರದ್ ಪವಾರ್ ಬಗ್ಗೆ ಒಲವು ತೋರಿಸುತ್ತಿದ್ದಾರೆ ಎನ್ನಲಾಗಿದೆ.
ಹಿಂದೆ ಕಾಂಗ್ರೆಸ್ನಲ್ಲೇ ಇದ್ದ ಶರದ್ ಪವಾರ್ ಅವರು ಸೋನಿಯಾ ಗಾಂಧಿ ವಿರುದ್ಧವೇ ತೊಡೆತಟ್ಟಿ, ಪ್ರತ್ಯೇಕ ಪಕ್ಷ ಕಟ್ಟಿದವರು. ಮಾಜಿ ಕೇಂದ್ರ ಸಚಿವ, ಮುಖ್ಯಮಂತ್ರಿಯಾಗಿ ಕೆಲಸ ನಿರ್ವಹಿಸಿ, ರಾಜಕೀಯದಲ್ಲಿ ಅಪಾರ ಅನುಭವ ಹೊಂದಿರುವವರು.
ಇದೀಗ ಮತ್ತೆ ತಮ್ಮ ಪಕ್ಷವನ್ನು ಕಾಂಗ್ರೆಸ್ ಜತೆ ಸಂಪೂರ್ಣ ವಿಲೀನ ಮಾಡಿ, ಯುಪಿಎ ಮೈತ್ರಿಕೂಟದ ಅಧ್ಯಕ್ಷರಾಗುತ್ತಾರಾ ಎಂಬುದೇ ಪ್ರಶ್ನೆ. ಅದರಲ್ಲೂ 80ನೇ ವರ್ಷದಲ್ಲಿ ಈ ಮಹತ್ತರ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧರಾಗಿದ್ದಾರಾ ಎಂಬ ಕುತೂಹಲಕ್ಕೆ ಶೀಘ್ರವೇ ತೆರೆಬೀಳಲಿದೆ.
ಪ್ರಧಾನಿ ಮೋದಿ ವಿಶ್ ಇಂದು (ಡಿ. 12) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಶರದ್ ಪವಾರ್ಗೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ. ದೇವರು ಶರದ್ ಪವಾರ್ ಅವರಿಗೆ ಆಯುರಾರೋಗ್ಯ ನೀಡಿ, ಆಶೀರ್ವದಿಸಲಿ ಎಂದು ಹಾರೈಸಿದ್ದಾರೆ.
Best wishes to @PawarSpeaks Ji on his birthday. May Almighty bless with good health and a long life.
— Narendra Modi (@narendramodi) December 12, 2020
ಯುಪಿಎ ಅಧ್ಯಕ್ಷ ಸ್ಥಾನಕ್ಕೆ ಸೋನಿಯಾ ನಂತರ ಶರದ್ ಪವಾರ್ ಆಯ್ಕೆ ಸಾಧ್ಯತೆ
Published On - 10:46 am, Sat, 12 December 20