ಸರ್ಕಾರಿ ನೌಕರರು ವಾರಕ್ಕೆ ಒಂದು ದಿನ ಖಾದಿ ಬಟ್ಟೆ ಧರಿಸುವುದು ಕಡ್ಡಾಯ
ಡಿಸೆಂಬರ್ 7 ರಂದು ರಾಜ್ಯ ಸರ್ಕಾರದ ಸಾಮಾನ್ಯ ಆಡಳಿತ ವಿಭಾಗವು ತನ್ನ ಎಲ್ಲಾ ಉದ್ಯೋಗಿಗಳಿಗೆ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಜಾರಿಗೆ ತರುವ ನಿರ್ಣಯವನ್ನು ಹೊರಡಿಸಿದ್ದು, ನಾವು ರಾಜ್ಯದ ಪ್ರತಿನಿಧಿಗಳು ಸೂಕ್ತವಲ್ಲದ ಡ್ರೇಸ್ ಕೋಡ್ ಜನರ ಮನಸ್ಸಿನಲ್ಲಿ ಸರ್ಕಾರದ ಮೇಲಿನ ಚಿತ್ರಣವನ್ನು ಕೆಟ್ಟದಾಗಿ ಪ್ರತಿಬಿಂಬಿಸಬಹುದು. ಹೀಗಾಗಿ ಖಾದಿ ಧರಿಸುವಂತೆ ಸೂಚಿಸಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.
ಮುಂಬೈ: ಸರ್ಕಾರಿ ಉದ್ಯೋಗಿಗಳು ಮತ್ತು ಅಧಿಕಾರಿಗಳಿಗೆ ಔಪಚಾರಿಕ ವಸ್ತ್ರಸಂಹಿತೆಯ ಕೆಲವು ನಿಯಮಗಳನ್ನು ಮಹಾರಾಷ್ಟ್ರ ಸರ್ಕಾರ ಜಾರಿಗೆ ತಂದಿದ್ದು, ಅದರಂತೆ ವಾರಕ್ಕೊಮ್ಮೆ ಖಾದಿ ಬಟ್ಟೆ ಧರಿಸುವುದು ಕಡ್ಡಾಯ ಎಂದು ಸೂಚಿಸಲಾಗಿದೆ.
ಜೀನ್ಸ್ ಪ್ಯಾಂಟ್, ಟೀ ಶರ್ಟ್ ಮತ್ತು ಚಪ್ಪಲಿಗಳನ್ನು ವಾರದಲ್ಲಿ ಒಂದು ದಿನ ತ್ಯಾಗ ಮಾಡುವಂತೆ ತಿಳಿಸಲಾಗಿದ್ದು, ಅದಕ್ಕೆ ಬದಲಾಗಿ ಖಾದಿ ಬಟ್ಟೆಯನ್ನು ಧರಿಸುವಂತೆ ಸೂಚಿಸಲಾಗಿದೆ. ಅದರಂತೆ ಶುಕ್ರವಾರದಂದು ಖಾದಿ ಬಟ್ಟೆ ಧರಿಸುವುದು ಬಹುತೇಕ ಖಚಿತವಾಗಿದೆ.
ಡಿಸೆಂಬರ್ 7 ರಂದು ರಾಜ್ಯ ಸರ್ಕಾರದ ಸಾಮಾನ್ಯ ಆಡಳಿತ ವಿಭಾಗವು ತನ್ನ ಎಲ್ಲಾ ಉದ್ಯೋಗಿಗಳಿಗೆ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಜಾರಿಗೆ ತರುವ ನಿರ್ಣಯವನ್ನು ಹೊರಡಿಸಿದ್ದು, ನಾವು ರಾಜ್ಯದ ಪ್ರತಿನಿಧಿಗಳು ಸೂಕ್ತವಲ್ಲದ ಡ್ರೇಸ್ ಕೋಡ್ ಜನರ ಮನಸ್ಸಿನಲ್ಲಿ ಸರ್ಕಾರದ ಮೇಲಿನ ಚಿತ್ರಣವನ್ನು ಕೆಟ್ಟದಾಗಿ ಪ್ರತಿಬಿಂಬಿಸಬಹುದು. ಈ ಕಾರಣಕ್ಕಾಗಿಯೇ ಖಾದಿ ಧರಿಸುವಂತೆ ಸೂಚಿಸಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.
ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಬಹಳಷ್ಟು ಅಧಿಕಾರಿಗಳು, ನೌಕರರು, ವಿಶೇಷವಾಗಿ ಗುತ್ತಿಗೆ ಪಡೆದವರು ಅಥವಾ ಸಲಹೆಗಾರರಾಗಿ ನೇಮಕಗೊಂಡವರು ಕಚೇರಿಗೆ ಬರುವಾಗ ಸರ್ಕಾರಿ ಪ್ರತಿನಿಧಿಗಳು ಎಂದು ಗುರುತಿಸಿಕೊಳ್ಳುವಂತಹ ಬಟ್ಟೆಗಳನ್ನು ಧರಿಸುವುದಿಲ್ಲ ಇದರ ಪರಿಣಾಮವಾಗಿ ಸಮಾಜದಲ್ಲಿ ಸರ್ಕಾರಿ ಅಧಿಕಾರಿಗಳ ಚಿತ್ರಣವು ಇತ್ತೀಚೆಗೆ ಬದಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಸರ್ಕಾರಿ ಅಧಿಕಾರಿಯ ಬಟ್ಟೆ ಅಶುದ್ಧವಾಗಿದ್ದರೆ ಅಥವಾ ಸೂಚನೆಗೆ ವಿರುದ್ಧವಾಗಿದ್ದರೆ ಅದು ಅವನ ಅಥವಾ ಅವಳ ಒಟ್ಟಾರೆ ಕೆಲಸದ ಮೇಲೆ ಪರೋಕ್ಷವಾಗಿ ಪರಿಣಾಮ ಬೀರುತ್ತದೆ ಎಂದು ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ದೇಶ್ಪಾಂಡೆ ಹೇಳಿದ್ದಾರೆ.
Published On - 12:31 pm, Sat, 12 December 20