ಅಧಿಕ ಹಾಲಿನ ಇಳುವರಿ ನೀಡುವ ನೂತನ ಎಮ್ಮೆ ತಳಿ ಸೃಷ್ಟಿಸಿದ ಭಾರತದ NDRI ಸಂಸ್ಥೆ

| Updated By: KUSHAL V

Updated on: Sep 20, 2020 | 7:20 PM

ಚಂಡೀಗಢ: ಹರಿಯಾಣದ ಕರ್ನಾಲ್​ನಲ್ಲಿರುವ ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯು (NDRI) ಅಧಿಕ ಹಾಲಿನ ಇಳುವರಿ ನೀಡುವ ಎಮ್ಮೆ ತಳಿಯ ಕರು ಒಂದನ್ನು ತದ್ರೂಪಿ ಸೃಷ್ಟಿ (ಕ್ಲೋನ್) ತಂತ್ರಜ್ಞಾನದ ಮುಖಾಂತರ ಅಭಿವೃದ್ಧಿಪಡಿಸಿದೆ. ಈ ಗಂಡು ಕರುವಿಗೆ ತೇಜಸ್​ ಎಂದು ನಾಮಕರಣ ಸಹ ಮಾಡಿದೆ. ಈ ನೂತನ ತಳಿ ದೇಶಾದ್ಯಂತ ಹಾಲು ಉತ್ಪಾದನೆ ಹಾಗೂ ರೈತರ ಆದಾಯವನ್ನು ಹೆಚ್ಚಿಸಲು ಸಹಕಾರಿ ಆಗಲಿದೆ ಎಂದು ಎಂದು ಸಂಸ್ಥೆಯ ನಿರ್ದೇಶಕ ಮನ್ಮೋಹನ್​ ಸಿಂಗ್​ ಚೌಹಾನ್ ತಿಳಿಸಿದ್ದಾರೆ. ಈ ಹೊಸ ತದ್ರೂಪಿ ತೇಜಸ್ ಕರುವನ್ನು […]

ಅಧಿಕ ಹಾಲಿನ ಇಳುವರಿ ನೀಡುವ ನೂತನ ಎಮ್ಮೆ ತಳಿ ಸೃಷ್ಟಿಸಿದ ಭಾರತದ NDRI ಸಂಸ್ಥೆ
Follow us on

ಚಂಡೀಗಢ: ಹರಿಯಾಣದ ಕರ್ನಾಲ್​ನಲ್ಲಿರುವ ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯು (NDRI) ಅಧಿಕ ಹಾಲಿನ ಇಳುವರಿ ನೀಡುವ ಎಮ್ಮೆ ತಳಿಯ ಕರು ಒಂದನ್ನು ತದ್ರೂಪಿ ಸೃಷ್ಟಿ (ಕ್ಲೋನ್) ತಂತ್ರಜ್ಞಾನದ ಮುಖಾಂತರ ಅಭಿವೃದ್ಧಿಪಡಿಸಿದೆ. ಈ ಗಂಡು ಕರುವಿಗೆ ತೇಜಸ್​ ಎಂದು ನಾಮಕರಣ ಸಹ ಮಾಡಿದೆ. ಈ ನೂತನ ತಳಿ ದೇಶಾದ್ಯಂತ ಹಾಲು ಉತ್ಪಾದನೆ ಹಾಗೂ ರೈತರ ಆದಾಯವನ್ನು ಹೆಚ್ಚಿಸಲು ಸಹಕಾರಿ ಆಗಲಿದೆ ಎಂದು ಎಂದು ಸಂಸ್ಥೆಯ ನಿರ್ದೇಶಕ ಮನ್ಮೋಹನ್​ ಸಿಂಗ್​ ಚೌಹಾನ್ ತಿಳಿಸಿದ್ದಾರೆ.

ಈ ಹೊಸ ತದ್ರೂಪಿ ತೇಜಸ್ ಕರುವನ್ನು ಎಮ್ಮೆ ಜಾತಿಯ ಮುರ್ರಾ ತಳಿಯಿಂದ ಅಭಿವೃದ್ಧಿಪಡಿಸಲಾಗಿದೆ. ಮುರ್ರಾ ಎಮ್ಮೆ ತಳಿ ಹೆಚ್ಚಿನ ಹಾಲು ಇಳುವರಿಗೆ ಹೆಸರುವಾಸಿಯಾಗಿದೆ ಎಂದು ಚೌಹಾನ್ ಹೇಳಿದ್ದಾರೆ. ಜೊತೆಗೆ, 2021-22ರ ವೇಳೆಗೆ ಎಮ್ಮೆಗಳ ಕೃತಕ ಗರ್ಭಧಾರಣೆಗೆ ದೇಶದಲ್ಲಿ 140 ದಶಲಕ್ಷ ವೀರ್ಯದ ಡೋಸ್​ನ ಅವಶ್ಯಕತೆಯಿದೆ. ಆದರೆ ಪ್ರಸ್ತುತ, 85 ದಶಲಕ್ಷ ಡೋಸ್‌ ಮಾತ್ರ ಲಭ್ಯವಿದೆ ಎಂಬ ಮಾಹಿತಿಯನ್ನು ಚೌಹಾನ್​ ನೀಡಿದ್ದಾರೆ.

ಕಳೆದ ಹತ್ತು ವರ್ಷಗಳಲ್ಲಿ ಎಮ್ಮೆಯ ಹಾಲು, ಕಿವಿ, ಮೂತ್ರ, ರಕ್ತ ಮತ್ತು ವೀರ್ಯದಲ್ಲಿರುವ ಜೀವಕೋಶಗಳನ್ನು ಬಳಸಿ ದೇಶದಲ್ಲಿ 16 ತದ್ರೂಪಿ ಎಮ್ಮೆಗಳನ್ನುಅಭಿವೃದ್ಧಿಪಡಿಸಲಾಗಿದೆ ಎಂದು ಚೌಹಾನ್ ಹೇಳಿದ್ದಾರೆ. 2009ರಲ್ಲಿ, NDRI ಸಂಸ್ಥೆಯು ಗರಿಮಾ ಎಂಬ ಹೆಸರಿನ ತದ್ರೂಪಿ ಎಮ್ಮೆಯನ್ನು ಅಭಿವೃದ್ಧಿಪಡಿಸಿತ್ತು. ನಂತರ, ಗರಿಮಾ ಸಾಮಾನ್ಯ ಜನನದ ಮೂಲಕ 2013 ಮತ್ತು 2014 ರಲ್ಲಿ ಮಹಿಮಾ ಮತ್ತು ಕರಿಷ್ಮಾ ಎಂಬ ಎಮ್ಮೆ ಕರುಗಳಿಗೆ ಜನ್ಮ ನೀಡಿತ್ತು.