30 ವರ್ಷದಲ್ಲಿ 3 ಕಿ.ಮಿ ಉದ್ದದ ಕಾಲುವೆ ತೋಡಿದ ರೈತನ ಸ್ವಪ್ರಯತ್ನಕ್ಕೆ ಸಿಕ್ತು ಭರ್ಜರಿ ಗಿಫ್ಟ್!
ಪಾಟ್ನಾ: ದೇಶದ ಪ್ರತಿಷ್ಠಿತ ಮಹೀಂದ್ರಾ ಸಂಸ್ಥೆಯ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಅರ್ಹರನ್ನು ಗುರುತಿಸಿ ಅವರನ್ನು ಗೌರವಿಸುವ ತಮ್ಮ ನಿಸ್ವಾರ್ಥ ಕಾರ್ಯವನ್ನು ಮುಂದುವರೆಸಿದ್ದಾರೆ. ಈ ಬಾರಿ, ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ತನ್ನ ಕೃಷಿಭೂಮಿಗೆ ನೀರಾವರಿ ವ್ಯವಸ್ಥೆ ಮಾಡಲು 3 ಕಿ.ಮೀ ಉದ್ದದ ಕಾಲುವೆ ನಿರ್ಮಿಸಿದ ರೈತನಿಗೆ ತಮ್ಮ ಸಹಾಯಹಸ್ತ ಚಾಚಿದ್ದಾರೆ. ತನ್ನ ಕೃಷಿಭೂಮಿಗೆ ನೀರಾವರಿ ವ್ಯವಸ್ಥೆ ಮಾಡಲು 30 ವರ್ಷಗಳ ಅವಧಿಯಲ್ಲಿ 3 ಕಿ.ಮೀ ಉದ್ದದ ಕಾಲುವೆಯನ್ನು ಒಂಟಿಯಾಗಿ ತೋಡಿದ್ದ ರೈತನಿಗೆ ಆನಂದ್ ಮಹೀಂದ್ರಾ ಮಾನ್ಯತೆಯ […]
ಪಾಟ್ನಾ: ದೇಶದ ಪ್ರತಿಷ್ಠಿತ ಮಹೀಂದ್ರಾ ಸಂಸ್ಥೆಯ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಅರ್ಹರನ್ನು ಗುರುತಿಸಿ ಅವರನ್ನು ಗೌರವಿಸುವ ತಮ್ಮ ನಿಸ್ವಾರ್ಥ ಕಾರ್ಯವನ್ನು ಮುಂದುವರೆಸಿದ್ದಾರೆ. ಈ ಬಾರಿ, ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ತನ್ನ ಕೃಷಿಭೂಮಿಗೆ ನೀರಾವರಿ ವ್ಯವಸ್ಥೆ ಮಾಡಲು 3 ಕಿ.ಮೀ ಉದ್ದದ ಕಾಲುವೆ ನಿರ್ಮಿಸಿದ ರೈತನಿಗೆ ತಮ್ಮ ಸಹಾಯಹಸ್ತ ಚಾಚಿದ್ದಾರೆ.
ತನ್ನ ಕೃಷಿಭೂಮಿಗೆ ನೀರಾವರಿ ವ್ಯವಸ್ಥೆ ಮಾಡಲು 30 ವರ್ಷಗಳ ಅವಧಿಯಲ್ಲಿ 3 ಕಿ.ಮೀ ಉದ್ದದ ಕಾಲುವೆಯನ್ನು ಒಂಟಿಯಾಗಿ ತೋಡಿದ್ದ ರೈತನಿಗೆ ಆನಂದ್ ಮಹೀಂದ್ರಾ ಮಾನ್ಯತೆಯ ಬಹುಮಾನವನ್ನು ನೀಡಿದ್ದಾರೆ.
ಬಿಹಾರದ ಗಯಾ ಜಿಲ್ಲೆಯ ರೈತ ಲೌಂಗಿ ಭುಯಾನ್ ತನ್ನ ಕೃಷಿಭೂಮಿಗೆ ನೀರಿನ ವ್ಯವಸ್ಥೆ ಕಲ್ಪಿಸಲು ಕಳೆದ 30 ವರ್ಷಗಳಲ್ಲಿ 3 ಕಿ.ಮೀ ಉದ್ದದ ಕಾಲುವೆಯನ್ನು ಒಂಟಿಯಾಗಿ ತೋಡಿದ್ದಾನೆ. ಲೌಂಗಿ ಭುಯಾನ್ರ ಈ ಕಾರ್ಯವನ್ನು ಕಂಡ ಆನಂದ್ ಮಹೀಂದ್ರಾ ಇದೀಗ, ರೈತನಿಗೆ ಒಂದು ಮಹೀಂದ್ರಾ ಟ್ರ್ಯಾಕ್ಟರ್ನ ಉಡುಗೊರೆಯಾಗಿ ನೀಡಿದ್ದಾರೆ.
ಮಹೀಂದ್ರಾ ಸಂಸ್ಥೆಯ ಪ್ರಾದೇಶಿಕ ವ್ಯಾಪಾರಿ ಸಿದ್ಧಿನಾಥ್ ವಿಶ್ವಕರ್ಮ ಲಾಂಗಿ ಭುಯಾನ್ಗೆ ಕಳೆದ ಶನಿವಾರ ಮಹೀಂದ್ರಾ ಟ್ರ್ಯಾಕ್ಟರ್ನ ಹಸ್ತಾಂತರಿಸಿದ್ದಾರೆ.
उनको ट्रैक्टर देना मेरा सौभाग्य होगा। As you know, I had tweeted that I think his canal is as impressive a monument as the Taj or the Pyramids. We at @MahindraRise would consider it an honour to have him use our tractor. How can our team reach him @rohinverma2410 ? https://t.co/tnGC5c4j8b
— anand mahindra (@anandmahindra) September 19, 2020
Published On - 11:28 am, Sun, 20 September 20