AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

9 ಶಂಕಿತ ಆಲ್-ಖೈದಾ ಉಗ್ರರು ಎನ್ಐಎ ಬಲೆಗೆ!

ದೆಹಲಿ: ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಉಗ್ರ ಕ್ರಿಮಿಗಳು ರೂಪಿಸಿದ್ದ ಕ್ರಿಮಿನಲ್ ಸ್ಕೆಚ್ ಫ್ಲಾಪ್ ಆಗಿದೆ. ದಾಳಿ ನಡೆಸಲು ಬೇಕಾದ ಸ್ಫೋಟಕ ಸಮೇತ ಕಿರಾತಕರು ಎನ್‌ಐಎ ಬಲೆಗೆ ಬಿದ್ದಿದ್ದಾರೆ. ಹಾಗಾದ್ರೆ ಎನ್‌ಐಎ ಬಲೆಗೆ ಬಿದ್ದವರಾದರೂ ಯಾರು? ಎಲ್ಲಿಲ್ಲಿ ದಾಳಿ ನಡೆಸಲು ಸ್ಕೆಚ್ ರೂಪಿಸಿದ್ದರು ಅನ್ನೋದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ. ಭಯೋತ್ಪಾದನಾ ಪ್ರಕರಣಗಳ ವಿರುದ್ಧ ತನಿಖೆ ಮಾಡಲು ರಚಿಸಿರುವ ರಾಷ್ಟ್ರೀಯ ತನಿಖಾ ದಳ ನಿನ್ನೆ ಭರ್ಜರಿ ಬೇಟೆ ಆಡಿದೆ. ಈ ಮೂಲಕ ದೊಡ್ಡ ಅನಾಹುತವನ್ನ ಎನ್​ಐಎ ಅಧಿಕಾರಿಗಳು ತಪ್ಪಿಸಿದ್ದಾರೆ. […]

9 ಶಂಕಿತ ಆಲ್-ಖೈದಾ ಉಗ್ರರು ಎನ್ಐಎ ಬಲೆಗೆ!
ಪ್ರಾತಿನಿಧಿಕ ಚಿತ್ರ
ಆಯೇಷಾ ಬಾನು
|

Updated on: Sep 20, 2020 | 7:03 AM

Share

ದೆಹಲಿ: ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಉಗ್ರ ಕ್ರಿಮಿಗಳು ರೂಪಿಸಿದ್ದ ಕ್ರಿಮಿನಲ್ ಸ್ಕೆಚ್ ಫ್ಲಾಪ್ ಆಗಿದೆ. ದಾಳಿ ನಡೆಸಲು ಬೇಕಾದ ಸ್ಫೋಟಕ ಸಮೇತ ಕಿರಾತಕರು ಎನ್‌ಐಎ ಬಲೆಗೆ ಬಿದ್ದಿದ್ದಾರೆ. ಹಾಗಾದ್ರೆ ಎನ್‌ಐಎ ಬಲೆಗೆ ಬಿದ್ದವರಾದರೂ ಯಾರು? ಎಲ್ಲಿಲ್ಲಿ ದಾಳಿ ನಡೆಸಲು ಸ್ಕೆಚ್ ರೂಪಿಸಿದ್ದರು ಅನ್ನೋದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ಭಯೋತ್ಪಾದನಾ ಪ್ರಕರಣಗಳ ವಿರುದ್ಧ ತನಿಖೆ ಮಾಡಲು ರಚಿಸಿರುವ ರಾಷ್ಟ್ರೀಯ ತನಿಖಾ ದಳ ನಿನ್ನೆ ಭರ್ಜರಿ ಬೇಟೆ ಆಡಿದೆ. ಈ ಮೂಲಕ ದೊಡ್ಡ ಅನಾಹುತವನ್ನ ಎನ್​ಐಎ ಅಧಿಕಾರಿಗಳು ತಪ್ಪಿಸಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಕ್ತದೋಕುಳಿ ಹರಿಸಲು ಉಗ್ರರು ರೂಪಿಸಿದ್ದ ಸಂಚನ್ನ ವಿಫಲಗೊಳಿಸಿದ್ದಾರೆ. ಶಂಕಿತ ಉಗ್ರರು ಫೀಲ್ಡಿಗಿಳಿಯುವ ಮುನ್ನ ಅವರ ಪ್ಲ್ಯಾನ್ ಫ್ಲಾಪ್ ಮಾಡಿದ್ದಾರೆ.

ದೆಹಲಿಯಲ್ಲಿ ದಾಳಿಗೆ ಸಂಚು ಹೂಡಿದ್ದವರು ಅಂದರ್ ಗಡಿಯಲ್ಲಿ ವಿದ್ವಂಸಕ ಕೃತ್ಯ ನಡೆಸಿದ್ದು ಸಾಲದು ಅನ್ನೋ ರೀತಿ ಪಾಪಿ ಪಾಕ್ ಪ್ರೇರೇಪಿತ ಉಗ್ರರು ದೇಶದ ಒಳಗೂ ಶಾಂತಿ ಕದಡಲು ಮುಂದಾಗಿದ್ದಾರೆ. ಹೀಗೆ ದೆಹಲಿಯಲ್ಲಿ ದಾಳಿಗೆ ಸಂಚು ಹೂಡಿದ್ದವರು ಅಂದರ್ ಆಗಿದ್ದಾರೆ. ಒಟ್ಟು 9 ಮಂದಿ ಶಂಕಿತ ಆಲ್-ಖೈದಾ ಉಗ್ರರು ಎನ್ಐಎ ಬಲೆಗೆ ಬಿದ್ದಿದ್ದಾರೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮತ್ತು ಕೇರಳದ ಎರ್ನಾಕುಲಂನಲ್ಲಿ ಉಗ್ರರ ಹೆಡೆಮುರಿ ಕಟ್ಟಲಾಗಿದೆ.

ಪಾಕ್ ಪಾಕಿಗಳದ್ದೇ ಪ್ಲ್ಯಾನ್: ಬಂಧಿತರು ಪಾಕಿಸ್ತಾನದಲ್ಲಿರುವ ಟೆರರಿಸ್ಟ್​ಗಳ ಸೂಚನೆಯಂತೆ ದಾಳಿಗೆ ಸ್ಕೆಚ್ ಹಾಕಿದ್ದರು ಎನ್ನಲಾಗಿದೆ. ತಮ್ಮ ಕೃತ್ಯಕ್ಕೆ ದೆಹಲಿ ಮತ್ತು ಕಾಶ್ಮೀರಕ್ಕೆ ತೆರಳಿ ಶಸ್ತ್ರಾಸ್ತ್ರ ಸಂಗ್ರಹಕ್ಕೂ ಪ್ಲ್ಯಾನ್ ರೂಪಿಸಿದ್ದರು. ದೆಹಲಿಯ ಸುತ್ತಮುತ್ತ ದಾಳಿ ನಡೆಸಲು ಶಂಕಿತರ ಪಡೆ ಸ್ಕೆಚ್ ರೂಪಿಸಿತ್ತು. ಪಶ್ಚಿಮ ಬಂಗಾಳದ ಮುರ್ಷಿದಾಬಾದ್​ನಲ್ಲಿ 6 ಶಂಕಿತರು ಅರೆಸ್ಟ್ ಆಗಿದ್ರೆ, ಮೂವರು ಶಂಕಿತರು ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಎನ್​ಐಎ ಬಲೆಯಲ್ಲಿ ಲಾಕ್ ಆಗಿದ್ದಾರೆ. ಇವರೆಲ್ಲಾ ಸೋಷಿಯಲ್ ಮೀಡಿಯಾ ಮೂಲಕ ಪ್ರಚೋದಿತರಾಗಿದ್ದರಂತೆ. ಶಂಕಿತರಿಂದ ಪಟಾಕಿ, ಸ್ವಿಚ್ ಸೇರಿದಂತೆ ಬ್ಯಾಟರಿಗಳನ್ನ ಎನ್​ಐಎ ಟೀಂ ವಶಕ್ಕೆ ಪಡೆದಿದೆ. ಅಲ್ಲದೆ ಬುಲೆಟ್ ಪ್ರೂಫ್ ಜಾಕೆಟ್ ಮಾದರಿ ವಸ್ತು ಕೂಡ ಸಿಕ್ಕಿದೆ. ಹಾಗೇ ಈ ವಸ್ತುವನ್ನ ಪೊಲೀಸರ ದಾಳಿ ಹಿಮ್ಮೆಟ್ಟಿಸಲು ಬಳಸಿಕೊಳ್ಳುವುದಕ್ಕೆ ಪ್ಲ್ಯಾನ್ ಮಾಡಿದ್ರಂತೆ. ಎನ್​ಐಎ ಬಲೆಗೆ ಬೀಳುತ್ತಿದ್ದಂತೆ ತಾವು ರೂಪಿಸಿದ್ದ ಖತರ್ನಾಕ್ ಪ್ಲ್ಯಾನ್ ಬಗ್ಗೆ ಕಿರಾತಕರು ಇಂಚಿಂಚು ಮಾಹಿತಿ ಹೊರಹಾಕಿದ್ದಾರೆ.

ಒಟ್ನಲ್ಲಿ ಒಂದ್ಕಡೆ ಉಗ್ರರು ಬಲೆಗೆ ಬಿದ್ದಿರುವುದು ದೊಡ್ಡ ಅನಾಹುತ ತಪ್ಪಿಸಿದ್ದರೆ, ಪಶ್ಚಿಮ ಬಂಗಾಳದಲ್ಲಿ ಇದು ರಾಜಕೀಯ ಕೆಸರೆರಚಾಟಕ್ಕೆ ವೇದಿಕೆ ಕಲ್ಪಿಸಿದೆ. ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ರಾಜ್ಯಪಾಲರೇ ಆಕ್ರೋಶ ವ್ಯಕ್ತಪಡಿಸಿದ್ದು, ಇದಕ್ಕೆ ಮಮತಾ ಬ್ಯಾನರ್ಜಿ ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಿದೆ.