ಗೇಮಿಂಗ್ ಚಟ: ಅಮ್ಮನ ATM ಕಾರ್ಡಿಂದ 90ಸಾವಿರ ಉಜ್ಜಾಡಿದ ಮಗನಿಗೆ ಅಪ್ಪ ಕೊಟ್ಟ ಶಿಕ್ಷೆ ಏನು?
ಮದುರೈ: ದೇಶಕ್ಕೆ ಮಹಾಮಾರಿ ಕೊರೊನಾ ಆವರಿಸಿದಾಗಿನಿಂದ ಜನ ಬಹಳಷ್ಟು ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಲಾಕ್ಡೌನ್ನಿಂದಾಗಿ ಶಾಲೆ ಕಾಲೇಜುಗಳಿಲ್ಲದೆ ಮಕ್ಕಳು ಮನೆಯಲ್ಲೆ ಕಾಲ ಕಳೆಯುವಂತ ಪರಿಸ್ಥಿತಿ ಎದುರಾಗಿದೆ. ಈ ಸಮಯದಲ್ಲಿ ಶಾಲೆಗಳಿಲ್ಲದೆ ಮಕ್ಕಳು ಬೇರೆ ಬೇರೆ ಕೆಲಸಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಳ್ಳುತ್ತಿದ್ದಾರೆ. ಮೊಬೈಲ್ಗಳಲ್ಲಿ ಹೆಚ್ಚಾಗಿ ಸಮಯ ಕಳೆಯುತ್ತಿದ್ದಾರೆ. ಅದೇ ರೀತಿ ಇಲ್ಲೊಬ್ಬ 12 ವರ್ಷದ ಬಾಲಕ ಲಾಕ್‌ಡೌನ್ ಮಧ್ಯೆ ಆನ್‌ಲೈನ್ ಆಟಕ್ಕೆ 90,000 ರೂ ಖರ್ಚು ಮಾಡಿದ್ದಾರೆ. 12 ವರ್ಷದ ಬಾಲಕ ಲಾಕ್‌ಡೌನ್ ಸಮಯದಲ್ಲಿ ತನ್ನ ತಾಯಿಯ ATM ಕಾರ್ಡ್ […]
ಮದುರೈ: ದೇಶಕ್ಕೆ ಮಹಾಮಾರಿ ಕೊರೊನಾ ಆವರಿಸಿದಾಗಿನಿಂದ ಜನ ಬಹಳಷ್ಟು ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಲಾಕ್ಡೌನ್ನಿಂದಾಗಿ ಶಾಲೆ ಕಾಲೇಜುಗಳಿಲ್ಲದೆ ಮಕ್ಕಳು ಮನೆಯಲ್ಲೆ ಕಾಲ ಕಳೆಯುವಂತ ಪರಿಸ್ಥಿತಿ ಎದುರಾಗಿದೆ. ಈ ಸಮಯದಲ್ಲಿ ಶಾಲೆಗಳಿಲ್ಲದೆ ಮಕ್ಕಳು ಬೇರೆ ಬೇರೆ ಕೆಲಸಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಳ್ಳುತ್ತಿದ್ದಾರೆ. ಮೊಬೈಲ್ಗಳಲ್ಲಿ ಹೆಚ್ಚಾಗಿ ಸಮಯ ಕಳೆಯುತ್ತಿದ್ದಾರೆ. ಅದೇ ರೀತಿ ಇಲ್ಲೊಬ್ಬ 12 ವರ್ಷದ ಬಾಲಕ ಲಾಕ್‌ಡೌನ್ ಮಧ್ಯೆ ಆನ್‌ಲೈನ್ ಆಟಕ್ಕೆ 90,000 ರೂ ಖರ್ಚು ಮಾಡಿದ್ದಾರೆ.
12 ವರ್ಷದ ಬಾಲಕ ಲಾಕ್‌ಡೌನ್ ಸಮಯದಲ್ಲಿ ತನ್ನ ತಾಯಿಯ ATM ಕಾರ್ಡ್ ಬಳಸಿ ಆನ್‌ಲೈನ್‌ನಲ್ಲಿ ಆಟಗಳನ್ನು ಆಡಲು ಪ್ರಾರಂಭಿಸಿ ಅದು ಈಗ 90,000 ರೂ ನಷ್ಟಕ್ಕೆ ಕಾರಣವಾಗಿರುವ ಘಟನೆ ತಮಿಳುನಾಡಿನ ಮೇಲಕಿದಾರಂ ಪ್ರದೇಶದಲ್ಲಿ ನಡೆದಿದೆ.
ತಾಯಿ ಎಟಿಎಂನಿಂದ ಹಣ ಡ್ರಾ ಮಾಡಲು ಹೋದಾಗ ಆಕೆಗೆ ತನ್ನ ಕಾರ್ಡ್ನಿಂದ ಹಣ ಖಾಲಿಯಾಗಿರುವುದು ಗೊತ್ತಾಗಿದೆ. ಮಗನ ಆನ್‌ಲೈನ್ ಗೇಮಿಂಗ್ನಿಂದಾಗಿ 90 ಸಾವಿರ ಹಣ ಖರ್ಚಾಗಿದೆ. ಕೊರೊನಾ ಸಮಯದಲ್ಲಿ ಮಗ ಹೊರಗೆ ಹೋದರೆ ಅವನಿಗೆ ಅಪಾಯ ಎಂದು ಪೋಷಕರು ಮಗನನ್ನು ಆಚೆ ಬಿಡುತ್ತಿರಲಿಲ್ಲ. ಮನೆಯಲ್ಲೇ ಇರಲು ಹೇಳುತ್ತಿದ್ದರು. ಹೀಗಾಗಿ ಬಾಲಕ ಆನ್‌ಲೈನ್ ಗೇಮ್ ವ್ಯಸನಿಯಾಗಿದ್ದಾರೆ ಎಂದು ಬಾಲಕನ ತಂದೆ ಸೆಂಥಿಲ್ ಕುಮಾರ್ ಹೇಳಿದ್ದಾರೆ.
ಕುಮಾರ್ ಇ-ಸೇವಾ ಕೇಂದ್ರವನ್ನು ನಡೆಸುತ್ತಿದ್ದಾರೆ. ಅವರ ಪತ್ನಿ ಕೆಲವೊಮ್ಮೆ ಆನ್‌ಲೈನ್‌ನಲ್ಲಿ ವಸ್ತುಗಳನ್ನು ಖರೀದಿಸುತ್ತಿದ್ದರು. ಈ ವೇಲೆ ಹಣ ಪಾವತಿಸಲು ತಮ್ಮ ಮಗನ ಸಹಾಯ ಪಡೆಯುತ್ತಿದ್ದರು. ಹೀಗಾಗಿ ಬಾಲಕನು ಆನ್‌ಲೈನ್‌ನಲ್ಲಿ ಹಣ ಪಾವತಿಸುವುದನ್ನು ಕಲಿತಿದ್ದ ಹಾಗೂ ಕಾರ್ಡ್ನ ಪಾಸ್ ವರ್ಡ್ ತಿಳಿದುಕೊಂಡಿದ್ದ. ಹೀಗಾಗಿ ರಾಜಾರೋಷವಾಗಿ ಆನ್‌ಲೈನ್ ಗೇಮ್ ಆಡಿ ಹಣ ಪೋಲು ಮಾಡಿದ್ದಾನೆ.
ಮಗನಿಗೆ ತಂದೆಕೊಟ್ಟ ಶಿಕ್ಷೆ ಏನು ಗೊತ್ತಾ: ಇನ್ನು 90 ಸಾವಿರ ಕಳೆದುಕೊಂಡ ಪೋಷಕರು ಮಗನನ್ನು ಬೈಯಲಿಲ್ಲ. ಹೊಡೆಯಲೂ ಇಲ್ಲ. ಬದಲಿಗೆ 1ರಿಂದ 90 ಸಾವಿರದವರೆಗೆ ಅಂಕಿಗಳನ್ನು ಬರೆಯುವ ಶಿಕ್ಷೆ ನೀಡಿದ್ರು. ಆದರೆ 5 ದಿನಗಳಲ್ಲಿ 3,500 ಮೀರಿ ಹೋಗಲು ಸಾಧ್ಯವಾಗಲಿಲ್ಲ. ನಂತರ ಬಾಲಕ ಮೊಬೈಲ್ ಆಟಗಳನ್ನು ಆಡುವುದನ್ನು ಬಿಟ್ಟುಬಿಡುವುದಾಗಿ ಹೇಳಿದ್ದಾನೆ ಎಂದು ಕುಮಾರ್ ತಿಳಿಸಿದ್ರು.
Published On - 4:55 pm, Mon, 21 September 20