NEET-PG admissions: ಆರ್ಥಿಕವಾಗಿ ದುರ್ಬಲ ವರ್ಗ ಕೋಟಾ ಪ್ರಕರಣದ ತುರ್ತು ವಿಚಾರಣೆ ಕೋರಿದ ಕೇಂದ್ರ

| Updated By: ರಶ್ಮಿ ಕಲ್ಲಕಟ್ಟ

Updated on: Jan 03, 2022 | 3:57 PM

ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಪೀಠವು ಕೋಟಾಕ್ಕೆ ಅರ್ಹರಾಗಲು ₹8 ಲಕ್ಷ ವಾರ್ಷಿಕ ಆದಾಯದ ಮಿತಿಯನ್ನು ತಲುಪಲು ಯಾವ ಪ್ರಕ್ರಿಯೆ ಕೈಗೊಂಡಿದೆ ಎಂಬುದನ್ನು ವಿವರಿಸಲು ಕೇಂದ್ರವನ್ನು ಕೇಳಿದೆ.

NEET-PG admissions: ಆರ್ಥಿಕವಾಗಿ ದುರ್ಬಲ ವರ್ಗ ಕೋಟಾ ಪ್ರಕರಣದ ತುರ್ತು ವಿಚಾರಣೆ ಕೋರಿದ  ಕೇಂದ್ರ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ನೀಟ್-ಪಿಜಿ (ಅಖಿಲ ಭಾರತ ಕೋಟಾ) (NEET-PG) ಪ್ರವೇಶದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳ (EWS) ಕೋಟಾದ ಮಾನದಂಡವನ್ನು ಪ್ರಶ್ನಿಸಿರುವ ಅರ್ಜಿಗಳನ್ನು ಕೈಗೆತ್ತಿಕೊಳ್ಳುವಂತೆ ಕೇಂದ್ರವು ಸೋಮವಾರ ಸುಪ್ರೀಂಕೋರ್ಟ್‌ಗೆ ಒತ್ತಾಯಿಸಿದ್ದು, ಈ ವಿಷಯದಲ್ಲಿ “ನಿಜವಾದ ತುರ್ತು” ಇದೆ ಎಂದು ಹೇಳಿದೆ. ಇದನ್ನು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ (Justice D Y Chandrachud) ನೇತೃತ್ವದ ಪೀಠಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ (Tushar Mehta) ತಿಳಿಸಿದಾಗ, ಈ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ((Chief Justice N V Ramana) ಅವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.  ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಪೀಠವು ಕೋಟಾಕ್ಕೆ ಅರ್ಹರಾಗಲು ₹8 ಲಕ್ಷ ವಾರ್ಷಿಕ ಆದಾಯದ ಮಿತಿಯನ್ನು ತಲುಪಲು ಯಾವ ಪ್ರಕ್ರಿಯೆ ಕೈಗೊಂಡಿದೆ ಎಂಬುದನ್ನು ವಿವರಿಸಲು ಕೇಂದ್ರವನ್ನು ಕೇಳಿದೆ. ಮಾನದಂಡವನ್ನು ಮರುಪರಿಶೀಲಿಸುವುದಾಗಿ ಮತ್ತು ಪ್ರಕ್ರಿಯೆ ಪೂರ್ಣಗೊಳಿಸಲು ಕೇಂದ್ರವು ನವೆಂಬರ್ 25, 2021 ರಂದು ನ್ಯಾಯಾಲಯದಲ್ಲಿ ನಾಲ್ಕು ವಾರಗಳ ಕಾಲಾವಕಾಶ ಕೋರಿತ್ತು. ನಂತರ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಜನವರಿ 6, 2022 ಕ್ಕೆ ನಿಗದಿಪಡಿಸಿತು.

ಡಿಸೆಂಬರ್ 31, 2021 ರಂದು ಸರ್ಕಾರವು ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದು, ತಾನು ರಚಿಸಿದ ಸಮಿತಿ ಮಾಡಿದ ಶಿಫಾರಸನ್ನು ಒಪ್ಪಿಕೊಂಡಿದೆ. ಪ್ರಸ್ತುತ ಪ್ರವೇಶ ಅವಧಿಯಲ್ಲಿ ರೂ 8 ಲಕ್ಷ ಆದಾಯದ ಮಿತಿಯನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ ಎಂದು ಹೇಳಿದೆ. ಆದಾಯ ಮಿತಿಯನ್ನು ಹೇಗೆ ಅನ್ವಯಿಸಬೇಕು ಎಂಬುದರ ಕುರಿತು ಶಿಫಾರಸುಗಳನ್ನು ಮುಂದಿನ ಪ್ರವೇಶ ಅವಧಿಯಿಂದ ಅಳವಡಿಸಿಕೊಳ್ಳಲಾಗುವುದು.  ಇತರ ಹಿಂದುಳಿದ ವರ್ಗಗಳಿಗೆ ಶೇ 27 ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ 10 ಮೀಸಲಾತಿ ನೀಡದ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿಯ ಜುಲೈ 29 ರ ಅಧಿಸೂಚನೆಯನ್ನು ಅರ್ಜಿಗಳು ಪ್ರಶ್ನಿಸಿವೆ.

ನೀಟ್-ಪಿಜಿ (ಆಲ್ ಇಂಡಿಯಾ ಕೋಟಾ)(NEET-PG )ಗಾಗಿ ಆರ್ಥಿಕವಾಗಿ ದುರ್ಬಲ ವರ್ಗ (EWS) ಕೋಟಾಕ್ಕೆ ರೂ 8 ಲಕ್ಷ ವಾರ್ಷಿಕ ಆದಾಯ ಮಿತಿಯನ್ನು ಉಳಿಸಿಕೊಳ್ಳಲು ತಾನು ರಚಿಸಿರುವ ಸಮಿತಿಯ ಶಿಫಾರಸುಗಳನ್ನು ಸ್ವೀಕರಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿತ್ತು. NEET-AIQ ನಲ್ಲಿ ಇಡಬ್ಲ್ಯೂಎಸ್ ಸಮಸ್ಯೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಸ್ವೀಕರಿಸಿದ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಸರ್ಕಾರ ಇದನ್ನು ಹೇಳಿದೆ. NEET-PG (ಅಖಿಲ ಭಾರತ ಕೋಟಾ) ನಲ್ಲಿ OBC ಗಳಿಗೆ ಶೇ 27 ಮತ್ತು EWS ವರ್ಗಕ್ಕೆ ಶೇ10 ಕೋಟಾವನ್ನು ಒದಗಿಸುವ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (MCC) ಜುಲೈ 29 ರ ಅಧಿಸೂಚನೆಯನ್ನು ಅರ್ಜಿಗಳು ಪ್ರಶ್ನಿಸಿವೆ. ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ₹8 ಲಕ್ಷ ಮಾನದಂಡಕ್ಕೆ ತಲುಪಲು ಯಾವ ಪ್ರಕ್ರಿಯೆ ಕೈಗೊಂಡಿದೆ ಎಂಬುದನ್ನು ವಿವರಿಸಲು ಕೇಂದ್ರವನ್ನು ಕೇಳಿದೆ. ಡಿಸೆಂಬರ್ 31 ರ ಹೊಸ ಅಫಿಡವಿಟ್‌ನಲ್ಲಿ, ನ್ಯಾಯಾಲಯಕ್ಕೆ ನೀಡಿದ ಭರವಸೆಗೆ ಅನುಗುಣವಾಗಿ ಮಾಜಿ ಹಣಕಾಸು ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ, ಸದಸ್ಯ ಕಾರ್ಯದರ್ಶಿ ICSSR ವಿ ಕೆ ಮಲ್ಹೋತ್ರಾ ಮತ್ತು ಭಾರತ ಸರ್ಕಾರದ ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್ ಅವರನ್ನು ಒಳಗೊಂಡ ಮೂರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ಸಮಿತಿಯು ಡಿಸೆಂಬರ್ 31 ರಂದು ತನ್ನ ವರದಿಯನ್ನು ಸಲ್ಲಿಸಿದ್ದು, “ಕೇಂದ್ರ ಸರ್ಕಾರವು ಹೊಸ ಮಾನದಂಡಗಳನ್ನು ನಿರೀಕ್ಷಿತವಾಗಿ ಅನ್ವಯಿಸುವ ಶಿಫಾರಸು ಸೇರಿದಂತೆ ಶಿಫಾರಸನ್ನು ಸ್ವೀಕರಿಸಲು ನಿರ್ಧರಿಸಿದೆ” ಎಂದು ಅಫಿಡವಿಟ್​​ನಲ್ಲಿ ಹೇಳಿದೆ.

ಇದನ್ನೂ ಓದಿ:  NEET-PG admissions ಆರ್ಥಿಕವಾಗಿ ದುರ್ಬಲ ವರ್ಗ ಎಂದು ನಿರ್ಧರಿಸಲು ₹8 ಲಕ್ಷ ಆದಾಯದ ಮಾನದಂಡ: ಕೇಂದ್ರ ಸರ್ಕಾರ

Published On - 2:44 pm, Mon, 3 January 22