Viral Video: ಕೊವಿಡ್ ಉಲ್ಬಣದ ಆತಂಕದ ನಡುವೆಯೇ ಗೋವಾ ಬೀಚ್‌ನಲ್ಲಿ ಮುಗಿಬಿದ್ದ ಜನರು; ವಿಡಿಯೋ ವೈರಲ್

| Updated By: ಸುಷ್ಮಾ ಚಕ್ರೆ

Updated on: Jan 03, 2022 | 1:07 PM

Goa Beach New Year Party: ಕ್ರಿಸ್‌ಮಸ್-ಹೊಸ ವರ್ಷದ ಹಬ್ಬದ ಸೀಸನ್‌ಗಾಗಿ ಗೋವಾ ರಾಜ್ಯಕ್ಕೆ ಆಗಮಿಸುವ ಪ್ರವಾಸಿಗರೊಂದಿಗೆ ಡಿಸೆಂಬರ್ ಅಂತ್ಯದಿಂದ ಗೋವಾದಲ್ಲಿ ಪ್ರವಾಸಿಗರು ಹೆಚ್ಚಾಗಿದ್ದಾರೆ.

Viral Video: ಕೊವಿಡ್ ಉಲ್ಬಣದ ಆತಂಕದ ನಡುವೆಯೇ ಗೋವಾ ಬೀಚ್‌ನಲ್ಲಿ ಮುಗಿಬಿದ್ದ ಜನರು; ವಿಡಿಯೋ ವೈರಲ್
ಗೋವಾದಲ್ಲಿ ಜನರ ದಂಡು
Follow us on

ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕು (Coronavirus) ಹಾಗೂ ಒಮಿಕ್ರಾನ್ (Omicron) ವ್ಯಾಪಕವಾಗಿ ಹರಡುತ್ತಿರುವುದರಿಂದ ಈ ಬಾರಿಯ ಹೊಸ ವರ್ಷಾಚರಣೆಯನ್ನು ಅದ್ದೂರಿಯಾಗಿ ಮಾಡದಂತೆ, ಒಂದೇ ಕಡೆ ಹೆಚ್ಚು ಜನ ಸೇರಿ ಪಾರ್ಟಿ ಮಾಡದಂತೆ ಸರ್ಕಾರ ಆದೇಶಿಸಿತ್ತು. ಅದಕ್ಕಾಗಿ ದೇಶಾದ್ಯಂತ ಹಲವು ಮಾರ್ಗಸೂಚಿಗಳನ್ನು ಕೂಡ ಬಿಡುಗಡೆ ಮಾಡಲಾಗಿತ್ತು. ಆದರೆ, ಗೋವಾದ (Goa) ಸಮುದ್ರತೀರದಲ್ಲಿ ಹೊಸ ವರ್ಷವನ್ನು ಬರಮಾಡಿಕೊಂಡು, ಪಾರ್ಟಿ ಮಾಡಿರುವ ವಿಡಿಯೋಗಳು ವೈರಲ್ ಆಗಿದ್ದು, ಅಲ್ಲಿ ಸೇರಿರುವ ಜನಸಮೂಹ ಗಾಬರಿ ಹುಟ್ಟಿಸುವಂತಿದೆ.

ಟ್ವಿಟ್ಟರ್​ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಆತಂಕಕಾರಿ ಕೋವಿಡ್ ಉಲ್ಬಣದ ಹೊರತಾಗಿಯೂ ಗೋವಾದ ಜನಪ್ರಿಯ ಪ್ರವಾಸಿ ತಾಣದಲ್ಲಿ ಭಾರೀ ಜನಸಂದಣಿ ಕಂಡುಬಂದಿದೆ. ಕ್ರಿಸ್‌ಮಸ್-ಹೊಸ ವರ್ಷದ ಹಬ್ಬದ ಸೀಸನ್‌ಗಾಗಿ ಗೋವಾ ರಾಜ್ಯಕ್ಕೆ ಆಗಮಿಸುವ ಪ್ರವಾಸಿಗರೊಂದಿಗೆ ಡಿಸೆಂಬರ್ ಅಂತ್ಯದಿಂದ ಗೋವಾದಲ್ಲಿ ಪ್ರವಾಸಿಗರು ಹೆಚ್ಚಾಗಿದ್ದಾರೆ. ಗೋವಾಗೆ ನ್ಯೂ ಇಯರ್ ಪಾರ್ಟಿಗೆ ಬೇರೆ ಬೇರೆ ರಾಜ್ಯಗಳಿಂದ ಆಗಮಿಸಿರುವ ಪ್ರವಾಸಿಗರ ದಂಡು ಕೊವಿಡ್ ಪಾಸಿಟಿವಿಟಿ ದರವನ್ನು ಹೆಚ್ಚಿಸುವಂತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

“ಗೋವಾದಲ್ಲಿ ಕೊವಿಡ್ ಅಲೆಗೆ ಅದ್ದೂರಿಯಾಗಿ ಸ್ವಾಗತ ಕೋರಲಾಗುತ್ತಿದೆ. ಪ್ರವಾಸಿಗರಿಂದ ಹೊಸ ವರ್ಷದ ಜೊತೆಗೆ ಕೊವಿಡ್​ಗೂ ಸ್ವಾಗತ!” ಎಂದು ಟ್ವಿಟ್ಟರ್​ನಲ್ಲಿ ನೆಟ್ಟಿಗರು ಈ ವಿಡಿಯೋಗೆ ಆಕ್ರೋಶ ಹೊರಹಾಕಿದ್ದಾರೆ.

ಉತ್ತರ ಗೋವಾದ ಬಾಗಾ ಬೀಚ್ ಬಳಿಯ ರಸ್ತೆಯಲ್ಲಿ ನೂರಾರು ಜನರು ನಡೆದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕಳೆದ 24 ಗಂಟೆಗಳಲ್ಲಿ ಗೋವಾದಲ್ಲಿ ಸುಮಾರು 388 ಜನರಿಗೆ ಕೊವಿಡ್ ಪಾಸಿಟಿವ್ ಕಂಡುಬಂದಿದೆ ಎಂದು ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳು ತೋರಿಸಿವೆ.

ಗೋವಾದಲ್ಲಿ ಹೊಸ ಪ್ರಕರಣಗಳು 1,81,570ಕ್ಕೆ ತಲುಪಿದರೆ, ಸಾವಿನ ಸಂಖ್ಯೆ 3,523ಕ್ಕೆ ಏರಿದೆ. ಕೊವಿಡ್​ನ ಇತ್ತೀಚಿನ ರೂಪಾಂತರವನ್ನು ನಿಗ್ರಹಿಸಲು ಸರ್ಕಾರವು ಕಠಿಣ ನಿರ್ಬಂಧಗಳನ್ನು ವಿಧಿಸಿದ್ದರೂ ಸಹ ಸಾವಿರಾರು ದೇಶೀಯ ಪ್ರವಾಸಿಗರು ಹೊಸ ವರ್ಷದಲ್ಲಿ ಗೋವಾದ ಬೀಚ್‌ಗಳು, ಪಬ್‌ಗಳು ಮತ್ತು ನೈಟ್‌ಕ್ಲಬ್‌ಗಳಲ್ಲಿ ಜನರು ಸೇರಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಇದನ್ನೂ ಓದಿ: Viral Video: ನನ್ನನ್ನೂ ವಾಕಿಂಗ್ ಕರೆದುಕೊಂಡು ಹೋಗು; ಕಣ್ಣಲ್ಲೇ ಒಡೆಯನಿಗೆ ಮನವಿ ಮಾಡಿದ ನಾಯಿಯ ವಿಡಿಯೋ ವೈರಲ್

Shocking Video: ಪಟಾಕಿಗೆ ಬೆಂಕಿ ಹೊತ್ತಿಸಿ ಪೆಟ್ರೋಲ್ ಬಂಕ್​ ಮೇಲೆ ಎಸೆದ ಯುವಕರು; ಆಮೇಲೇನಾಯ್ತು?