AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

15 ನಿಮಿಷಗಳ ಅಂತರದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ; ಮಕ್ಕಳು ಜನಿಸಿದ್ದು ಮಾತ್ರ ಬೇರೆ ಬೇರೆ ವರ್ಷದಲ್ಲಿ!

Viral News: ಫಾತಿಮಾ ಮಾಡ್ರಿಗಲ್ ಅವರಿಗೆ ಹೆರಿಗೆ ಮಾಡಿಸಿದ ಆಸ್ಪತ್ರೆಯು ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದೆ. ಅಯ್ಲಿನ್ ಮತ್ತು ಆಲ್ಫ್ರೆಡೊ ಟ್ರುಜಿಲ್ಲೊ ಎಂಬ ಇಬ್ಬರು ಮಕ್ಕಳು ಕೇವಲ 15 ನಿಮಿಷಗಳ ಅಂತರದಲ್ಲಿ ಜನಿಸಿದ್ದಾರೆ.

15 ನಿಮಿಷಗಳ ಅಂತರದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ; ಮಕ್ಕಳು ಜನಿಸಿದ್ದು ಮಾತ್ರ ಬೇರೆ ಬೇರೆ ವರ್ಷದಲ್ಲಿ!
ಅವಳಿ ಮಕ್ಕಳು
TV9 Web
| Edited By: |

Updated on:Jan 04, 2022 | 9:49 AM

Share

ಕ್ಯಾಲಿಫೋರ್ನಿಯಾದ ಫಾತಿಮಾ ಮಾಡ್ರಿಗಲ್ ಎಂಬ ಮಹಿಳೆ ನಾಟಿವಿಡಾಡ್ ವೈದ್ಯಕೀಯ ಕೇಂದ್ರದಲ್ಲಿ 15 ನಿಮಿಷಗಳ ಅಂತರದಲ್ಲಿ ಅವಳಿ (Twins) ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅರೆ ಇದರಲ್ಲೇನು ವಿಶೇಷ ಇದೆ. ಅವಳಿ ಮಕ್ಕಳಿಗೆ ಜನ್ಮ ನೀಡುವುದು ಹೊಸದೇನು ಅಲ್ಲವಲ್ಲಾ ಎಂದು ನೀವು ಯೋಚಿಸುತ್ತಿದ್ದೀರಾ? ಇದಕ್ಕೆ ಉತ್ತರ ಇಲ್ಲಿದೆ ನೋಡಿ. ಕ್ಯಾಲಿಫೋರ್ನಿಯಾದ ಮಹಿಳೆ ತನ್ನ ಅವಳಿ ಮಕ್ಕಳಿಗೆ ವಿಭಿನ್ನ ವರ್ಷ, ದಿನ ಮತ್ತು ತಿಂಗಳಲ್ಲಿ ಜನ್ಮ ನೀಡಿದ್ದಾರೆ.  ಹೌದು ಅವಳಿ ಮಕ್ಕಳಾದರೂ ಬೇರೆ ವರ್ಷದಲ್ಲಿ ಜನಿಸಿದ್ದಾರೆ. ಈ ಅಪರೂಪದ ಸಂಗತಿಯನ್ನು ಸಾಮಾಜಿಕ ಜಾಲತಾಣದಲ್ಲಿ  ಹಂಚಿಕೊಳ್ಳಲಾಗಿದ್ದು, ನೆಟ್ಟಿಗರು ಈ ಸುದ್ದಿಯನ್ನು ಕಂಡು ಅಚ್ಚರಿಗೊಂಡಿದ್ದಾರೆ.

ಫಾತಿಮಾ ಮಾಡ್ರಿಗಲ್ ಅವರಿಗೆ ಹೆರಿಗೆ ಮಾಡಿಸಿದ ಆಸ್ಪತ್ರೆಯು ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದೆ. ಅಯ್ಲಿನ್ ಮತ್ತು ಆಲ್ಫ್ರೆಡೊ ಟ್ರುಜಿಲ್ಲೊ ಎಂಬ ಇಬ್ಬರು ಮಕ್ಕಳು ಕೇವಲ 15 ನಿಮಿಷಗಳ ಅಂತರದಲ್ಲಿ ಜನಿಸಿದ್ದಾರೆ. ಆದರೆ ಅವರು ಬೇರೆ ಬೇರೆ ವರ್ಷಗಳಲ್ಲಿ ಜನಿಸಿದ್ದಾರೆ. ಆಲ್ಫ್ರೆಡೊ ಟ್ರುಜಿಲ್ಲೊ 2021 ರ (ಡಿಸೆಂಬರ್​ 31) ಶುಕ್ರವಾರ ರಾತ್ರಿ 11.45ಕ್ಕೆ ಜನಿಸಿದೆ. ಇನ್ನೊಂದು ಮಗು ಅಯ್ಲಿನ್ ಶನಿವಾರ, ಜನವರಿ 01, 2022 ರಂದು ಜನಿಸಿದೆ. ಆ ಮೂಲಕ ಅವಳಿ ಮಕ್ಕಳು ಬೇರೆ ಬೇರೆ ದಿನ, ವರ್ಷ ಮತ್ತು ತಿಂಗಳಲ್ಲಿ ಜನಿಸಿ, ಅಚ್ಚರಿ ಹುಟ್ಟಿಸಿದೆ ಎಂದು ತಮ್ಮ ಪೋಸ್ಟ್‌ನ ಶೀರ್ಷಿಕೆಯಲ್ಲಿ ವಿವರಣೆ ನೀಡಲಾಗಿದೆ.

ನನ್ನ ಅವಳಿ ಮಕ್ಕಳು ಬೇರೆ ಬೇರೆ ದಿನ, ವರ್ಷದಲ್ಲಿ ಹುಟ್ಟಿದ್ದು, ನನಗೆ ಅಚ್ಚರಿ ಉಂಟುಮಾಡಿದೆ. ಮಧ್ಯರಾತ್ರಿಯಲ್ಲಿ ನಡೆದ ಈ ಚಮತ್ಕಾರದಿಂದ ನಾನು ಆಶ್ಚರ್ಯಗೊಂಡಿದ್ದೇನೆ ಮತ್ತು ತುಂಬಾ ಸಂತೋಷವಾಗಿದೆ ಎಂದು ಅವಳಿ ಮಕ್ಕಳ ತಾಯಿ ಫಾತಿಮಾ ಅಭಿಪ್ರಾಯಪಟ್ಟಿದ್ದಾರೆ.

ನೆಟ್ಟಿಗರು ಈ ಸುದ್ದಿ ಕಂಡು ಖುಷಿಪಟ್ಟಿದ್ದಾರೆ ಮತ್ತು ಕಮೆಂಟ್​ಗಳ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ಈ ಘಟನೆ ಎಷ್ಟು ಅದ್ಭುತ ಎಂದು ಬರೆದರೆ, ಇನ್ನು ಕೆಲವರು ಭವಿಷ್ಯದಲ್ಲಿ ಅವಳಿಗಳ ಜನ್ಮದಿನಗಳು ಮಹಾಕಾವ್ಯವಾಗಲಿವೆ ಎಂದು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: Viral Photo: ಈ ಚಿತ್ರದಲ್ಲಿ ನಿಮಗೆ ಎಷ್ಟು ಕುದುರೆ ಕಾಣುತ್ತಿದೆ? ಸರಿಯಾದ ಉತ್ತರಕ್ಕಾಗಿ ತಲೆ ಕೆಡಿಸಿಕೊಂಡ ನೆಟ್ಟಿಗರು

Viral Video: ಸಾಂತಾಕ್ಲಾಸ್​ ಟೋಪಿ ಧರಿಸಿ ತಿರುಗಾಡಿದ ಹಾವು; ವಿಡಿಯೋ ಕಂಡು ಅಚ್ಚರಿಗೊಂಡ ನೆಟ್ಟಿಗರು

Published On - 9:44 am, Tue, 4 January 22

Follow Us
TV9 Web
TV9 Web

TV9 Kannada

Read More
ದೇವಿಮನೆ ಘಟ್ಟದ ಬಳಿ ಕಂದಕಕ್ಕೆ ಉರುಳಿಬಿದ್ದ KSRTC ಬಸ್: 12 ಮಂದಿಗೆ ಗಾಯ
ದೇವಿಮನೆ ಘಟ್ಟದ ಬಳಿ ಕಂದಕಕ್ಕೆ ಉರುಳಿಬಿದ್ದ KSRTC ಬಸ್: 12 ಮಂದಿಗೆ ಗಾಯ
ಇಂದು ಚಂದನ ಷಷ್ಠಿ; ಈ ರಾಶಿಗಳಿಗೆ ಕೂಡಿಬರಲಿದೆ ಅದೃಷ್ಟ!
ಇಂದು ಚಂದನ ಷಷ್ಠಿ; ಈ ರಾಶಿಗಳಿಗೆ ಕೂಡಿಬರಲಿದೆ ಅದೃಷ್ಟ!
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?